ಭಾಲ್ಕಿ: ಹಿರೇಮಠ ಸಂಸ್ಥಾನ ವಿದ್ಯಾಪೀಠ ಟಸ್ಟ್ ಭಾಲ್ಕಿ, ಡಾ.ಚನ್ನಬಸವ ಪಟ್ಟದ್ದೇವರ ಯುವಕ ಸಂಘ, ಕರ್ನಾಟಕ ಜಾನಪದ ಪರಿಷತ್ತು ತಾಲೂಕ ಘಟಕ ಹಾಗೂ ಅಕ್ಕಮಹಾದೇವಿ ಮಹಿಳಾ ಮಂಡಳ ನಾವದಗೇರಿ ಬೀದರ ಇವರ ಸಹಯೋಗದಲ್ಲಿ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಶಾಲೆಯಲ್ಲಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ಜನಪದ ನೃತ್ಯೋತ್ಸವ 7 ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ.
ಸಮ್ಮುಖವನ್ನು ಪೂಜ್ಯ ಶ್ರೀ ಮಹಾಲಿಂಗ ದೇವರು ವಹಿಸಿಕೊಳ್ಳಲಿದ್ದಾರೆ. ಉದ್ಘಾಟಕರಾಗಿ ಡಾ.ಮಹೇಶ ಬಿರಾದಾರ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ, ಪ್ರೊ.ಶಂಭುಲಿಂಗ ಕಾಮಣ್ಣ, ರಾಜೇಶ ಮುಗಟೆ, ಶಶಿಧರ ಕೋಸಂಬೆ ಆಗಮಿಸಿಲಿದ್ದಾರೆ.
ಸುಭಾಷ ನೇಳಗಿ ಅವರಿಗೆ ಸನ್ಮಾನಿಸಲಾಗುತ್ತಿದೆ. ಮೋಹನರೆಡ್ಡಿ, ಬಸವರಾಜ ಮೊಳಕೆರೆ, ಡಾ. ಸಂಜೀವಕುಮಾರ ಜುಮ್ಮಾ, ಆಶಾಬಾಯಿ ರಾಠೋಡ ಗೌರವ ಉಪಸ್ಥಿತರಿರುವರು. ವಸಂತ ಹುಣಸನಾಳೆ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಪ್ರಾಸ್ತಾವಿಕವಾಗಿ ಡಾ.ರಾಜಕುಮಾರ ಹೆಬ್ಬಾಳೆ ಮಾತನಾಡಲಿದ್ದು, ಸ್ವಾಗತವನ್ನು ಸಿದ್ರಾಮ ಗೊಗ್ಗಾ ಮಾಡಲಿದ್ದಾರೆ.
ಈ ನೃತ್ಯೋತ್ಸವದಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಆಗಮಿಸಿ, ಜನಪದ ಕಲಾ ಪ್ರದರ್ಶನ ಮಾಡಲಿದ್ದಾರೆ.