ಕಲಬುರಗಿ: ಜಿಲ್ಲೆಯಲ್ಲಿ ಮೋಡ ಮುಸುಕಿದ ವಾತಾವರಣ, ಕಡಿಮೆ ಸೂರ್ಯನ ತಾಪಮಾನದಿಂದ ಉಷ್ಣಾಂಶ ಮತ್ತು ತೇವಾಂಶದಲ್ಲಿ ಏರುಪೇರಾಗಿರುತ್ತದೆ.
ಹೀಗಾಗಿ ಕಟಾವು ಮಾಡಿದ ತೊಗರಿ, ದ್ವಿದಳ ಧಾನ್ಯಗಳು, ಎಣ್ಣೆ ಕಾಳುಗಳ ಬೀಜಗಳನ್ನು ಸರಿಯಾಗಿ ಒಣಗಿಸಬೇಕು. ಕಡಲೆಗೆ ತುಕ್ಕು ರೋಗ ಕಂಡು ಬಂದಲ್ಲಿ ಮ್ಯಾಕೋಜೆಬ್ 2 ಗ್ರಾಂ ಮತ್ತು ನೀರಿನಲ್ಲಿ ಕರಗುವ ಎನ್‍ಪಿಕೆ 19 ಆಲ್ 2 ಗ್ರಾಂ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಟಮಾಟೋ, ಮಾವು, ಮೆಣಸಿನಕಾಯಿ, ಹೀರೆಕಾಯಿ ಇವುಗಳಿಗೆ ಬೂದಿರೋಗ ಮತ್ತು ಚಿಬ್ಬುರೋಗ ನಿರ್ವಹಣೆಗೆ ಹೆಕ್ಸಾಕೋನ್‍ಜಾಲ್ 1 ಮಿ.ಲಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಬದಲಾಗುತ್ತಿರುವ ಹವಮಾನ ಜೋಳ ಸೈನಿಕ ಹುಳು, ಸುಳಿರೋಗ ಉದ್ಬವವಾಗುವ ಸಾದ್ಯತೆಯನ್ನು ಗಮನದಲ್ಲಿಟ್ಟು ಇಮೊಮೆಕ್ಟಿನ್ ಬೆಂಜೋಯಿಟ್ ಅರ್ದ ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ರೈತರಿಗೆ ಕೆವಿಕೆ ಮಖ್ಯಸ್ಥ ಡಾ.ರಾಜು ಜಿ. ತೆಗ್ಗಳ್ಳಿ, ಸಸ್ಯರೋಗ ತಜ್ಞರಾz Àಜಹೀರ ಅಹಮದ್ ಅವರು ಮಾಹಿತಿ ನೀಡಿದರು.