ಪೂಜ್ಯ ಬಸ್ಸವಪ್ಪಯ್ಯ ಅಜ್ಜವರ ಪುಣ್ಯಸ್ಮರಣೋತ್ಸವ: ಸಾಧಕರಿಗೆ ಸನ್ಮಾನ

0
22

ಕಲಬುರಗಿ: ಅವರಿವರ ತಪ್ಪನ್ನೆ ಎತ್ತಿ ತೋರಿಸಿ ಜಗತ್ತನ್ನು ತಿದ್ದುವ ಸಾಹಸ ಮಾಡುವುದಕ್ಕಿಂತ ನಮ್ಮನ್ನು ನಾವು ತಿದ್ದುಕೊಂಡು ಉತ್ತಮವಾದ ಸಮಾಜ ನಿರ್ಮಿಸಬೇಕೆಂದು ಚಲನಚಿತ್ರ ನಟರಾದ ಗಂಗಾಧರ ಬಡಿಗೇರ ಹೇಳಿದರು.

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲ್ಲೂಕಿನ  ವಡಗೇರಾ ಗ್ರಾಮದ  ರಾಮಲಿಂಗೇಶ್ವರ ಮಠದಲ್ಲಿ ಪೂಜ್ಯ ಶ್ರೀ ಬಸ್ಸವಪ್ಪಯ್ಯ ಅಜ್ಜವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ  ಕಾರ್ಯಕ್ರಮದಲ್ಲಿ ಸನ್ಮಾನ  ಸ್ವೀಕರಿಸಿದರು.

Contact Your\'s Advertisement; 9902492681

ನಂತರ ಮಾತನಾಡುತ್ತಾ ಮನುಷ್ಯನಿಗೆ ಅಕ್ಷರದ ಕೊರತೆ ಇದ್ದರು ಚಿಂತೆ ಇಲ್ಲ ಸಂಸ್ಕಾರದ ಕೊರತೆ ಇರಬಾರದು.ಸಂಸ್ಕಾರವಿಲ್ಲದ ವ್ಯಕ್ತಿಗಳು ಸಮಾಜ ಅಭಿವೃದ್ಧಿಯಲ್ಲಿ  ಕಂಟಕ ರಾಗುತ್ತಾರೆ.ಉತ್ತಮವಾದ ಅರಿವು ಸಿಗಬೇಕಾದರೆ ಇಂತಹ ಅಧ್ಯಾತ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ಸಾಗಬೇಕು.ನಾನೊಬ್ಬ ಚಿತ್ರನಟನಾಗಿ ಬೆಳೆಯಲು ಪೂಜ್ಯರ ಆಶೀರ್ವಾದ ಹಾಗೂ ಈ ಭಾಗದ ಜನರ ಸಹಕಾರವೆ ಕಾರಣ.ಇಂದು ನನ್ನ ಜೊತೆ ಬೇರೆ ಬೇರೆ ಕ್ಷೇತ್ರದ ಸಾಧಕರಿಗೆ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ.ಈ ಭಾಗದ ಪ್ರತಿಭೆಗಳಿಗೆ ಚಲನಚಿತ್ರಗಳಲ್ಲಿ ಅವಕಾಶ ಕೊಡುವುದರೊಂದಿಗೆ

ಈ ಭಾಗದ ಕಲಾವಿದರನ್ನು ಪರಿಚಯಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಮ್ಮಂತಹ ಕಲಾವಿದರ ಚಿತ್ರಗಳನ್ನು ನೋಡುವ ಮೂಲಕ ತಾವು ಸಹಕಾರ ಆಶೀರ್ವಾದ ನೀಡಬೇಕಾಗಿ ವಿನಂತಿಸಿಕೊಂಡರು. ಇದೆ ಸಂದರ್ಭದಲ್ಲಿ ಜನಪರ ಹೋರಾಟಗಾರ ನ್ಯಾಯವಾದಿ  ಹಣಮಂತರಾಯ ಅಟ್ಟೂರ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಮಡಿವಾಳಪ್ಪ ನಾಗರಹಳ್ಳಿ,ಬಸವರಾಜ ಸಜ್ಜನಶೆಟ್ಟಿ, ಕಲಾವಿದ  ಸಿ.ಎಸ್.ಮಾಲಿಪಾಟೀಲ, ಹಾಸ್ಯ ಕಲಾವಿದ  ಗುಂಡಣ್ಣ ಡಿಗ್ಗಿ ಅವರಿಗೆ ಸನ್ಮಾನಿಸಿದರು.

ಮಠದ ಪೀಠಾಧಿಪತಿಗಳಾದ ಪೂಜ್ಯ ವೀರಯ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದರು.ಪೇಠ ಅಮ್ಮಾಪುರದ  ರಾಮ ಶರಣರು, ಚಿಂಗನಹಳ್ಳಿಯ  ಕುಮಾರ ದೇವರು ಉಪಸ್ಥಿತರಿದ್ದರು. ಗ್ರಾಮದ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮದ ಹಲವಾರೂ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here