ಜೇವರ್ಗಿ : ಮೂರು ತಿಂಗಳ ಹಿಂದೆ ಗರ್ಭಿಣಿ ಒಬ್ಬಳ ಸಾವಿಗೆ ಕಾರಣವಾದ ವೈದ್ಯರು ಹಾಗೂ ನಿರ್ಲಕ್ಷ ತೋರಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು ಸಂತ್ರಸ್ತ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿ ಭೀಮ್ ಆರ್ಮಿ ಪ್ರತಿಭಟನೆ ಮುಂದುವರೆದಿದೆ.
ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಾದ ರಾಮನಾಥ ಭಂಡಾರಿ, ಹಬಿಬನಾಮ್ದಾರ್, ಕಾಸಿಂಕುಡಿಕರ್, ಪರಮಾನಂದ ಯಲಗೋಡ ಬೆಂಬಲ ವ್ಯಕ್ತಪಡಿಸಿದ್ದಾರೆ.
ಭಾರತ ಕಮ್ಯನಿಷ್ಟ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳಾದ ಮಹೇಶ್ ಕುಮಾರ ರಾಠೋಡ ಅವರು ಸ್ಥಳಕ್ಕೆ ಭೇಟಿ ನೀಡಿ ನ್ಯಾಯುತ ಹೋರಾಟಕ್ಕೆ ಬೆಂಬಲವನ್ನು ನೀಡುವ ಮೂಲಕ ಕುಟುಂಬಕ್ಕೆ ಪರಿಹಾರ ಕೂಡಲೇ ಒದಗಿಸಬೇಕೆಂದು ತಿಳಿಸಿದ್ದಾರೆ .
ಅಲ್ಲದೆ ಧರಣಿ ಸ್ಥಳದಲ್ಲಿ ಬಿಮ್ ಆರ್ಮಿ ಜಿಲ್ಲಾಧ್ಯಕ್ಷರಾದ ಸೂರ್ಯಕಾಂತ್ ಜಿಡಿಗೆ, ಬಿ,ಎ,ಸ್ಪಿ ಪಕ್ಷದ ಮುಖಂಡರಾದ ಸೂರ್ಯಕಾಂತ್ ನಿಂಬಾಳ್ಕರ್, ರೈತರ ಮುಖಂಡರಾದ ಬಾಬು ಪಾಟೀಲ್, ಎಸ್ ಎಸ್ ವಿ ಸಂಘಟನೆಯ ಮಲ್ಲಿನಾಥ ನೇತಲಗಿ ,ಹರೀಶ್ ಮದನ್ಕರ್, ಬಿಮಾರ್ಮಿ ಯಡ್ರಾಮಿ ಉಪಾಧ್ಯಕ್ಷರಾದ ಮಹದೇವ ದೊಡ್ಡಮನಿ ಸೇರಿದಂತೆ ಸಂಘಟನೆಯ ಉಸ್ತುವಾರಿ ಅಧ್ಯಕ್ಷರಾದ ಸಿದ್ದು ಮುದುಬಾಳ,ತಾಲೂಕು ಅಧ್ಯಕ್ಷರಾದ ಸುಭಾಷ ಅಲೂರ ಗೌರಧ್ಯಕ್ಷರಾದ ಅಬ್ದುಲ್ ಗಣಿ ರಾವಣ, ಉಪಾಧ್ಯಕ್ಷರಾದ ವಿಶ್ವರಾಧ್ಯ ಗೋಪಾಲಕರ ,ನಗರ ಘಟಕದ ಅಧ್ಯಕ್ಷರಾದ ಬಸವರಾಜ್ ಇಂಗಳಗಿ ಪ್ರಧಾನ ಕಾರ್ಯದರ್ಶಿ, ಕಿರಣ್ ಗುಡೂರ ,ಸಂಘಟನಾ ಕಾರ್ಯದರ್ಶಿಯಾದ ಮರಪ್ಪ ಆಂದೋಲ, ಖಜಾಂಚಿಯಾದ ಬಾಬು ನಾಟಿಕಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಮೃತ ಕುಟುಂಬಕ್ಕೆ ಪರಿಹಾರ ಸೇರಿದಂತೆ ತಪ್ಪಿದಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.