ಆಳಂದ : ಪಟ್ಟಣದ ಲಾಡ್ಲೆ ಮಶಾಕ ದರ್ಗಾ ಆವರಣದಲ್ಲಿರುವ ಶ್ರೀ ರಾಘವ ಚೈತನ್ಯ ಶಿವಲಿಂಗದ ಅಸ್ತಿತ್ವದ ಬಗ್ಗೆ ಪಂಚನಾಮೆ ವರದಿ ನೀಡ ಬೇಕೆಂದು ಶ್ರೀ ರಾಮ ಸೇನಾ ಆಳಂದ ತಾಲೂಕಾ ಘಟಕದ ವತಿಯಿಂದ ಆಳಂದ ತಹಸೀಲ್ದಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಇಗಾಗಲೆ ಸುಮಾರು ನಾಲ್ಕುನೂರು ವರ್ಷಗಳಿಂದ ಶ್ರೀ ರಾಘವ ಚೈತನ್ಯ ಶಿವಲಿಂಗವು ಲಾಡ್ಲೆ ಮಶಾಕ ದರ್ಗಾದ ಆವರಣದಲ್ಲಿ ಇದ್ದು ಈ ಶಿವಲಿಂಗಕ್ಕೆ ಪ್ರತಿ ನಿತ್ಯ ಪ್ರಕಾಶ ಜೋಷಿ ವಂಶಸ್ಥರು ಪೂಜೆ ಕೈಂಕರ್ಯಗಳನ್ನು ಸುಮಾರು ನಾಲ್ಕೂನೂರು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ ಆದ್ದರಿಂದ ಈ ಶ್ರೀ ರಾಘವ ಚೈತನ್ಯ ಶಿವಲಿಂಗದ ಅಸ್ತಿತ್ವದ ಸ್ಥಾನಿಕ ಮಾಹಿತಿ ಪಡೆದ ಸ್ಥಳ ಪರಿಶೀಲನೆ ಮಾಡಿ ವರದಿ ನೀಡಬೇಕೆಂದು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾ ಅಧ್ಯಕ್ಷ ಈರಣ್ಣಾ ಹತ್ತರಕಿ, ಉಪಾಧ್ಯಕ್ಷ ಸದಾನಂದ ಪವಾರ, ವೆಂಕಟೇಶ ರಾಠೋಡ, ಶಿತಲ ಹೊಸಳ್ಳಿ, ನಿಲಕಂಠ ಕುಂಬಾರ, ಪ್ರದೀಪ ಕಾಳೆ, ಸಚೀನ ಬಸುಂದೆ, ಶರಣ ಢೋಲೆ, ಮುಕಿಂದ ರಾಠೋಡ, ನಿಲಕಂಠ ಪವಾರ, ರಾಜಶೇಖರ ಕೋರಳ್ಳಿ, ಶಿವರಾಜ ಕೊರಳ್ಳಿ ಇದ್ದರು.