ಸುರಪುರ:ನ್ಯಾ:ಎ.ಜೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡದಂತೆ ವಿರೋಧಿಸಿ ಇದೇ 10 ರಂದು ರಾಷ್ಟ್ರೀಯ ಗೋರ ಸೇನಾ ಸಂಘಟನೆಯಿಂದ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರಾಷ್ಟ್ರೀಯ ಗೋರ ಸೇನಾ ಸಂಘಟನೆ ತಾಲೂಕು ಅಧ್ಯಕ್ಷ ರಾಮವತ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಇದೇ ಜನೆವರಿ 10 ರಂದು ಸರಕಾರ ಹಾಗೂ ಎ.ಜೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸುವ ಪಕ್ಷಗಳ ವಿರುದ್ಧ ಭೋವಿ,ಛಲವಾದಿ,ಕೊರಮ,ಕೊರಚ,ಲಂಬಾಣಿ ಹಾಗೂ ಪರಿಶಿಷ್ಟ ಜಾತಿಯಲ್ಲಿನ 101 ಜಾತಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿವೆ.ಅಲ್ಲದೆ ನಮ್ಮ ಲಂಬಾಣಿ ಸಮುದಾಯದ 3600 ತಾಂಡಾಗಳಿಂದ ಲಕ್ಷಾಂತರ ಜನ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ಸುರಪುರ ತಾಲೂಕಿನಿಂದ ಸಾವಿರಾರು ಜನರು ಭಾಗವಹಿಸುವುದಾಗಿ ತಿಳಿಸಿದರು. ಮುಖಂಡರಾದ ರಾಮವತ ನಾಯಕ ಸಸೀಲ ರಾಠೋಡ,ಸಭಾವಟ ಶಂಕರ ಚವ್ಹಾಣ,ರಾಮವತ ನಾಯಕ ರವಿಚಂದ್ರ,ರಾಮವತ ನಾಯಕ ಸಂಜಯ ರಾಠೋಡ ತಿಳಿಸಿದ್ದಾರೆ.