ಜೇವರ್ಗಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಕಾರಕ್ಕೆ ಬಂದ ಮೇಲೆ ಅಭಿವೈದ್ಧಿ ಸಂಪೂರ್ಣವಾಗಿ ಕುಂಠಿತಗೊಂಡಿದೆ. ಪ್ರತಿಯೊಂದರಲ್ಲಿ ಪರ್ಸೆಂಟೇಜ್ ಕೊಟ್ಟು ಕಾಮಗಾರಿಗೆ ಅನುಮೋದನೆ ಪಡೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿಧಾನಸಭೆ ಮುಖ್ಯ ಸಚೇತಕ ಹಾಗೂ ಶಾಸಕ ಡಾ.ಅಜಯಸಿಂಗ್ ಹೇಳಿದರು.
ತಾಲೂಕಿನ ತೆಲಗಬಾಳ ಗ್ರಾಮದಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೈದ್ಧಿ ಇಲಾಖೆ ವತಿಯಿಂದ ಗ್ರಾಮದ ಸ್ಥಳಿಯ ನಾಲಾಕ್ಕೆ ಅಡ್ಡಲಾಗಿ (ಚಿನ್ನಿಹಳ್ಳ) ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಪವಿತ್ರ ಸ್ಥಳವಾದ ವಿಧಾನ ಸೌಧ ಈಗ ವ್ಯಾಪಾರಿಕರಣದ ಕೇಂದ್ರ ಸ್ಥಳವಾಗಿದೆ. ಬಿಜೆಪಿ ಸರ್ಕಾರ ಬ್ರಷ್ಠಾಚಾರದ ಪ್ರತಿಕವಾಗಿದೆ. ಕಳೆದ ಗುರುವಾರ ವಿಧಾನಸೌಧದಲ್ಲಿ ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಬ್ಯಾಗ್ ನಲ್ಲಿ 10 ಲP್ಷÀ ರೂ.ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಈ ಸರ್ಕಾರದ ವಿರುದ್ದ ಜನ ರೊಚ್ಚಿಗೆದ್ದಿದ್ದಾರೆ. ಅನುದಾನ ನೀಡುವಲ್ಲಿ ಬಿಜೆಪಿ ಶಾಸಕರಿಗೆ ಒಂದು ನ್ಯಾಯ, ಕಾಂಗ್ರೆಸ್ ಶಾಸಕರಿಗೆ ಮತ್ತೊಂದು ನ್ಯಾಯ. ನಮಗೆ 20-25 ಕೋಟಿ ಅನುದಾನ ನೀಡಿದರೇ, ಬಿಜೆಪಿ ಶಾಸಕರಿಗೆ 50-60 ಕೋಟಿ ರೂ.ಅನುದಾನ ನೀಡಲಾಗಿದೆ. ಹಳ್ಳಿಯ ಜನ ಮುಗ್ದರು, ನಮ್ಮಂತಹ ರಾಜಕಾರಣಿಗಳ ಪರಿಸ್ಥಿತಿ ಅವರಿಗೆ ಅರ್ಥವಾಗುವುದಿಲ್ಲ. ಹೀಗಾಗಿ ಅಭಿವೈದ್ಧಿ ಕಾಮಗಾರಿಗಳು ಸ್ವಲ್ಪ ಮಟ್ಟಿಗೆ ಕುಂಠಿತವಾಗಿದೆ. ಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆಯಲು ಜನ ಸಿದ್ಧವಾಗಬೇಕು. ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ಅಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಈ ಗ್ರಾಮದ ಜನರಿಗೆ ಕೊಟ್ಟ ಮಾತಿನಂತೆ ನಡೆದು ರಸ್ತೆ ನಿರ್ಮಾಣ ಜತೆಗೆ 4.6 ಕೋಟಿ ವೆಚ್ಚದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಹಾಲಘತ್ತರಗಾ-ತೆಲಗಬಾಳ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಮೌಲಾಲಿ ದರ್ಗಾಕ್ಕೆ 3 ಲP್ಷÀ, ಸರಕಾರಿ ಪ್ರೌಢ ಶಾಲೆಗೆ 30 ಲP್ಷÀ ಹಾಗೂ ಸಿಸಿ ರಸ್ತೆ ಲP್ಷÀ ರೂ.ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡರಾದ ರಾಜಶೇಖರ ಸೀರಿ, ಚಂದ್ರಶೇಖರ ಪುರಾಣಿಕ, ಕಾಶಿರಾಯಗೌಡ ಯಲಗೋಡ, ಗುತ್ತಿಗೆದಾರ ಹುಲಿಕಂಠರಾಯಗೌಡ ಅರಳಗುಂಡಗಿ, ರೇವಣಸಿದ್ದಪ್ಪಗೌಡ ಕಮಾನಮನಿ, ಮಲ್ಲಿಕಾರ್ಜುನ ಹಲಕರ್ಟಿ, ಶರಣಗೌಡ ಹಿರೇಗೌಡ, ಹಯ್ಯಾಳಪ್ಪ ಗಂಗಾಕರ್, ಸಲಿಂ ಕಣ್ಣಿ, ನಾಗಣ್ಣ ಸಾಹು ಹಾಗರಗುಂಡಗಿ, ಬಸವರಾಜ ಜ್ಯೋತೆಪ್ಪಗೋಳ, ಸೀತಾರಾಮ ರಾಠೋಡ, ಅಬ್ದುಲ್ ರಜಾಕ್ ಮಣಿಯಾರ, ಮಹಾಂತಗೌಡ ಪೆÇಲೀಸ್ ಪಾಟೀಲ, ಶಿವು ಪಾಟೀಲ, ಬಸವರಾಜ ಪವಾರ, ಸಿದ್ದಣ್ಣ ಕವಲ್ದಾರ್, ನಿಂಗಣ್ಣ ಸಾಹು ಗಡಗಿ, ಜೆಟ್ಟೆಪ್ಪ ಮಳಗಿ, ಅಬ್ದುಲ್ ರಜಾಕ ಮನಿಯಾರ, ದೇವಿಂದ್ರಪ್ಪಗೌಡ ಪಾಟೀಲ, ಅಫೆÇ್ರೀಜ್ ಯಡ್ರಾಮಿ, ಮಹೇಶ ಸಾಹು ತುಪ್ಪದ್, ಭಗವಂತ್ರಾಯಗೌಡ ಮಾಲಿಪಾಟೀಲ, ಶರಣಗೌಡ ಪಾಟೀಲ ಯತ್ನಾಳ, ಹಳ್ಳೆಪ್ಪಗೌಡ ಜಂಬೇರಾಳ, ಇಮಾಮಸಾಬ ಉಸ್ತಾದ, ಮಹೇಬೂಬ ಪಟೇಲ ಚಿಂಚೋಳಿ, ಶರಣಗೌಡ ಪೆÇಲೀಸ್ ಪಾಟೀಲ ಯತ್ನಾಳ, ಹುಲಿಕಂಟರಾಯ ಅರಳಗುಂಡಗಿ, ಜಟೆಪ್ಪ ಮಳಗಿ, ಅಫೆÇ್ರೀಜ್ ಯಡ್ರಾಮಿ ಸೇರಿದಂತೆ ಸÀಣ್ಣ ನೀರಾವರಿ ಇಲಾಖೆ ಅಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.