ಕಲಬುರಗಿ: ಇಲ್ಲಿನ ನಹರು ನಗರದ ಸವಿತಾ ಸಮಾಜದ ಕಾರ್ಯಲಯದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಶರಣಬಸಪ್ಪ ಎಮ್.ಸೂರ್ಯವಂಶಿ ಹಾಗೂ ಪ್ರಧಾನ ಕಾರ್ಯದರ್ಶಿ ಬಸವರಾಜ ಜೆ.ವಾರಿಕ ನೇತೃತ್ವದಲ್ಲಿ ಸಭೆ ನಡೆಸಿ ಸಭೆಯಲ್ಲಿ ನೂತನ ಜಿಲ್ಲಾ ಸವಿತಾ ಸಮಾಜದ ಗಂಜ್ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಸವಿತಾ ಸಮಾಜದ ಗಂಜ್ ಮಂಡಲದ ನೂತನ ಅಧ್ಯಕ್ಷರಾಗಿ ಸೂರ್ಯಕಾಂತ ಬೇಣ್ಣೂರ, ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ ಚಿಕಲಿಕ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗೌರವ ಅಧ್ಯಕ್ಷ ಅಂಬರೀಷ ಮಂಗಲಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಧಮ್ಮೂರ ಪ್ರಧಾನ ಕಾರ್ಯದರ್ಶಿ ಬಸವರಾಜ ವಾರಿಕ್, ಅಲ್ಲಾ, ಮಾಜಿ ಉಪಾಧ್ಯಕ್ಷ ಪ್ರಭಾಕರ ಪೇದ್ದರಪೇಠ, ಖಜಾಂಚಿ ನಾಗೇಂದ್ರಪ್ಪ ಪೇದ್ದರಪೇಠ, ಸಂಘಟನೆ ಕಾರ್ಯದರ್ಶಿ ಪ್ರಕಾಶ ಹುಣಸಗೇರ, ಕಾರ್ಯದರ್ಶಿಗಳಾದ ಮಹಾಂತೇಶ ಚಾವಣಿಕರ, ರಾಜ ಕೋಳ್ಳಿ, ಸದಸ್ಯರಾದ ಶಾಂತು ಚನ್ನೂರ, ಬಸವರಾಜ ಬೀರನಳ್ಳಿ, ಪ್ರಭು ಮದ್ಗುರ, ಶಶಿಕಾಂತ ಮಂಗಲಗಿ, ದತ್ತು ನಾವಿ ಇತರರಿದ್ದರು.