ಕಲಬುರಗಿ: ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದ ಪ್ರಮುಖ ರೂವಾರಿ ಮೊನ್ನೆ ತಾನೆ ರಾತ್ರಿ ಜೈಲಿನಿಂದ ಬಿಡುಗಡೆಯಾಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿಗೆ ಅದ್ದೂರಿತಾಗಿ ಸ್ವಾಗತಿಸಿ ಅವರ ಮನೆ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಘಟನೆ ಜರುಗಿದೆ.
ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿ ಮತ್ತು ಅಭಿಮಾನಿ ಬಳಗದಿಂದ ಅದ್ದೂರಿ ಸ್ವಾಗತಿಸಿದ ಈ ಸಂದರ್ಭದಲ್ಲಿ ಕೆಲ ಬಿಜೆಪಿಯ ಉಚ್ಚಾಟಿತ ನಾಯಕರು ಕೂಡ ಇದ್ದರು ಎಂಬುದು ತಿಳಿದು ಬಂದಿದೆ.
ಪಿಎಸ್‍ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಗಿ ಸೇರಿ 27 ಜನ ಆರೋಪಿತರು ಜ. 5ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ರನ್ನ ಬಿಡುಗಡೆ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.