ಕಲಬುರಗಿ: ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ 2023-24ನೇ ಸಾಲಿನಿಂದ ನೇಕಾರರ ಸಹಕಾರ ಸಂಘಗಳು, ಕೈಗಾರಿಕಾ ಸಹಕಾರ ಬ್ಯಾಂಕ್‍ಗÀಳು, ಕೃಷಿಯೇತರ-ಕೃಷಿ ಪತ್ತಿನ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ಗÀಳು ಹಾಗೂ ಇತರೆ ಸಹಕಾರ ಬ್ಯಾಂಕ್ ಗÀಳು ಕೈಮಗ್ಗ ಮತ್ತು ವಿದ್ಯುತ್ ಮಗ್ಗಗಳ ನೇಕಾರರಿಗೆ ನೇಕಾರಿಕೆ ಮತ್ತು ನೇಕಾರಿಕೆಗೆ ಸಂಬಂಧಿಸಿದ ಉದ್ದೇಶಗಳಿಗಾಗಿ ಶೂನ್ಯ ಬಡ್ಡಿ ದರದಲ್ಲಿ 2 ಲಕ್ಷ ರೂ. ವರೆಗೆ ನೀಡುವ ಸಾಲಕ್ಕೆ ಸರ್ಕಾರದಿಂದ ಗರಿಷ್ಟ ಶೇ.11 ಬಡ್ಡಿ ಸಹಾಯಧನ ನೀಡಲಾಗುತ್ತಿದೆ ಎಂದು ಇಲಾಖೆಯ ಕಲಬುರಗಿ ಉಪನಿರ್ದೇಶಕರು ತಿಳಿಸಿದ್ದಾರೆ.
ಇದು ಎಲ್ಲಾ ರೀತಿಯ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಗಳಿಗೆ ಅನ್ವಯವಾಗಲಿದ್ದು, ಕೈಮಗ್ಗ ನೇಕಾರರು ಮತ್ತು ವಿದ್ಯುತ್‍ಮಗ್ಗ ನೇಕಾರರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಉಪ ನಿರ್ದೇಶಕರವರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಗುರು ಬಸವ ಕಟ್ಟಡ, ಮನೆ ನಂ.910, ಓಕಳಿ ಕ್ಯಾಂಪ್, ಸೌಭಾಗ್ಯ ಕಲ್ಯಾಣ ಮಂಟಪ ಹತ್ತಿರ, ಸೇಡಂ ರಸ್ತೆ, ಕಲಬುರಗಿ-585105 ಕಚೇರಿಗೆ ಮತ್ತು ದೂರವಾಣಿ ಸಂಖ್ಯೆ:08472-278629ಗೆ ಸಂಪರ್ಕಿಸಲು ತಿಳಿಸಿದೆ.