ಅಪರಾಜಿತ ಶಾಲೆಯಲ್ಲಿ ಶೈಕ್ಷಣಿಕ ವಿಜ್ಞಾನ ಪ್ರದರ್ಶನ

0
13

ಕಲಬುರಗಿ: ನಗರದ  ಉದನೂರ ಕ್ರಾಸ್ ರಿಂಗ್ ರೋಡ ಸಮೀಪದ ಜೈ ಭವಾನಿ ಶಿಕ್ಷಣ ಸಂಸ್ಥೆಯ ಅಪರಾಜಿತ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಮತ್ತು ವಿಜ್ಞಾನ ಪ್ರದರ್ಶನ ಕಾರ್ಯಕ್ರಮ ಇತ್ತೀಚಿಗೆ ಜರುಗಿತು.

ಸಂಸ್ಥೆಯ ಕಾರ್ಯದರ್ಶಿ ರಾಜಗೋಪಾಲ ಭಂಡಾರಿಯವರು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷರಾದ ಪುಪ್ಷಾಂಜಲಿ ರಾ. ಭಂಡಾರಿ ಪ್ರಾಸ್ತವಿಕ ಮಾತನಾಡುತ್ತಾ ಮಕ್ಕಳಿಗೆ ವಿದ್ಯೆ ಜೊತೆಗೆ ಕ್ರಿಯಾಶೀಲತೆ ಕೂಡ ಮುಖ್ಯ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಶಿವಲಿಂಗಪ್ಪ ಅಷ್ಟಗಿ  ಹಟಗಾರ ಸಮಾಜದ ಜಿಲ್ಲಾ ಅಧ್ಯಕ್ಷರು ಹಾಗೂ ಹಿರಿಯ ವಕೀಲರಾದ ಇವರು ಆಗಮಿಸಿ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಕ್ರಿಯಾಶೀಲತೆಗೆ ಪಾಲಕರು ಸ್ನೇಹಿತರಂತೆ ಇದ್ದು ಸಹಕರಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀನಿವಾಸ ಬಲಪುರ ತೊಗಟವೀರ ಕ್ಷತ್ರೀಯ ಸಮಾಜದ ಅಧ್ಯಕ್ಷರು ಆಗಮಿಸಿ ರಿಬನ್ ಕಟ್ ಮಾಡುವುದರ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿದರು. ಅತಿಥಿಗಳು ಮಕ್ಕಳಿಗೆ ಪೆನ್ಸಿಲ್ ಬಾಕ್ಸ ಮತ್ತು ಕಲರ ಬಾಕ್ಸ್ ಇತರೆ ಪಠ್ಯ ಉಪಕರಣಗಳನ್ನು ವಿತರಿಸಿ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಪ್ರದರ್ಶನದಲ್ಲಿ ಮಷಿನ್,  ರಾಕೆಟ್ ಮಾಡಲ್, ಪೆಪರ್ ರೊಬೋಟ್, ಸೊಲಾರ ಕುಕ್ಕರ್, ಎಕ್ಸಲೇಟರ್ ಮಾಡಲ್, ಬಲೂನ್ ಗಾಳಿಯಿಂದ ನಡೆಯುವ ಕಾರ್, ಹೆಲಿಕ್ಯಾಪಕ್ಟರ, ಬೊಟ್, ಸೊಲಾರ ವಾಟರ್ ಇರಿಗೇಷನ್ನ, ಬಟರ್ ಪ್ಲೈ ಗಾರ್ಡನ್  ಎಲ್ಲರ ಗಮನ ಸೆಳೆದವು, ಶಿಕ್ಷಕಿಯರಾದ ಪ್ರೀತಿ, ಪವಿತ್ರಾ, ರಾಧಿಕಾ, ಭೂಮಿಕಾ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here