ಅಫಜಲಪುರ:-ವಿ-ಗಾರ್ಡ ಇಂಡಸ್ಟ್ರೀಸ್ ವತಿಯಿಂದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಕಂಪನಿಯ ಮ್ಯಾನೇಜರ್ ಪ್ರಕಾಶ್ ರಾಠೋಡ ಹೇಳಿದ್ದಾರೆ.
ತಾಲೂಕಿನ ಗಬ್ಬುರವಾಡಿ ತಾಂಡಾದ ಶ್ರೀ ರಾಮರಾವ್ ಮಹಾರಾಜ ಹಿರಿಯ ಪ್ರಾಥಮಿಕ ಹಾಗೂ ಶ್ರೀ ಸೇವಾಲಾಲ್ ಮಹಾರಾಜ ಪ್ರೌಢ ಶಾಲೆಗೆ ಕಂಪನಿಯ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ,ಬೆಂಚುಗಳು,ಹಸಿರು ಬೋರ್ಡ ಮತ್ತು ಪ್ಯಾನ್ ಗಳನ್ನು ದೇಣಿಗೆ ವಿತರಣೆ ಮಾಡಿ ಮಾತನಾಡಿದ ಅವರು ಕಂಪನಿಯು ಅನೇಕ ಸಾಮಾಜಿಕ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದ್ದೆ.ಗಳಿಸಿದ ಲಾಭದಲ್ಲಿ ಸಮಾಜಕ್ಕೆ ಸಹಾಯ ಮಾಡುವ ಮೂಲಕ ಜನರ ಮಾತಾಗಿದೆ.ಅನೇಕ ಶಾಲೆಗಳಿಗೆ ಸಹಾಯ ಮಾಡಿದೆ.ಕೋವಿಡ್ ಸಂದರ್ಭದಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದೆ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕರು ಹಾಗೂ ಶ್ರೀ ಸೇವಾಲಾಲ್ ಬಂಜಾರ ಶಕ್ತಿ ಪೀಠದ ಪೀಠಾಧಿಪತಿಗಳಾದ ಬಲಿರಾಮ ಮಹಾರಾಜರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ತೆಲಂಗಾಣ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸತ್ಯವತಿ ರಾಠೋಡ,ಕಾಂಗ್ರೆಸ್ ಮುಖಂಡ ಸುಭಾಷ್ ರಾಠೋಡ,ನಾಮದೇವ ರಾಠೋಡ ಚಿತ್ತಾಪುರ,ಎಸ್.ಬಿ.ಕಾಲೇಜಿನ 1995 ನೇ ಸಾಲಿನ ಕಾಮರ್ಸ್ ಗೆಳೆಯರ ಬಳಗ ಸೇರಿದಂತೆ ಶಾಲೆಯ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಇದ್ದರು.