ವಿಕಲಚೇತನ (ಅಂಗ ವಿಕಲರಿಗೆ), ಅನಾಥ ಮಕ್ಕಳಿಗೆ ಕಂಬಳಿ ವಿತರಣೆ

0
20

ಕಲಬುರಗಿ: ಕನ್ನಡ ಭವನದಲ್ಲಿ ಕಲ್ಯಾಣ ಕರ್ನಾಟಕ ಸೇನೆ ವತಿಯಿಂದ 205ನೇ ಭೀಮಾ ಕೋರೆಗಾಂವ ವಿಜಯೋತ್ಸವದ ಪ್ರಯುಕ್ತ ಕಲ್ಯಾಣ ಕರ್ನಾಟಕ ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹಯ್ಯಾಳಕರ್ ಮತ್ತು ಕಲ್ಯಾಣ ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಯುವ ಉತ್ಸಾಹಿ ಆದಿತ್ಯ ಡಿ. ಹಯ್ಯಾಳಕರ್ ಇವರ ನೇತೃತ್ವದಲ್ಲಿ ಅಂಧ ವಿದ್ಯಾರ್ಥಿಗಳಿಗೆ, ವಿಕಲಚೇತನ (ಅಂಗ ವಿಕಲರಿಗೆ), ಅನಾಥ ಮಕ್ಕಳಿಗೆ, ಕಿವುಡ ಮೂಕÀ ಮಕ್ಕಳಿಗೆ ಕಂಬಳಿ ಹಾಗೂ ಹಣ್ಣು ಹಂಪಲಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧೀಕ್ಷಕ ಇಂಜಿನಿಯರರಾದ ಸುರೇಶ ಶರ್ಮಾ ಅವರು ಉದ್ಘಾಟಿಸಿ ಮಾತನಾಡುತ್ತಾ ಭೀಮಾ ಕೋರೆಗಾಂವ ವಿಜಯೋತ್ಸವದ ಕುರಿತು ಇತಿಹಾಸದ ಪುಟಗಳನ್ನು ನೆನಪಿಸಿಕೊಳ್ಳುತ್ತಾ ಸದೃಢ ದೇಶವನ್ನು ಕಟ್ಟಲು ಬಾಬಾ ಸಾಹೇಬರ ಕೊಡುಗೆಯನ್ನು ಸ್ಮರಿಸುತ್ತಾ ಯುವ ಪೀಳಿಗೆಗಳು ಅನುಸರಿಸಲು ಸಲಹೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಡಾ. ಎ.ಎಸ್. ರುದ್ರವಾಡಿ, ಮಹಾನಗರ ಪಾಲಿಕೆಯ (ಸಿ.ಇ.ಓ) ಮಾಣಿಕರಾವ, ಬಿ.ಜೆ.ಪಿ ಯುವ ಮುಖಂಡ ಚನ್ನಪ್ಪ, ಮುಖಂಡರಾದ ನಾಗರಾಜ ಮೇತ್ರೆ, ಭರತ ತಾರ್‍ಪೈಲ್, ಗೋರಂಪಳ್ಳಿ, ಶ್ರೀದೇವಿ ಮುತ್ತಂಗಿ, ಮಣಿಕಂಠ ತಾರ್‍ಫೈಲ್, ರಮೇಶ ಎಂ. ಸರಡಗಿ ಇದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು ಎಂಬತ್ತಕ್ಕಿಂತ ಹೆಚ್ಚು ಅಂಧ ಮತ್ತು ಶ್ರವಣ ದೋಷ ಮತ್ತು ವಿಕಲಚೇತನ ಹಾಗೂ ಅನಾಥ ಮಕ್ಕಳಿಗೆ ಕಂಬಳಿ ಹೊದಿಕೆ ಹಣ್ಣು ವಿತರಿಸುವುದರ ಮೂಲಕ ಸತ್ಕರಿಸಲಾಯಿತು. ಕಾರ್ಯಕ್ರಮವನ್ನು ಜೈಭೀಮ ಸಾವಳಗಿ ಸಂಗಿತ ಕಲಾವಿದ ನಿರೂಪಿಸಿದರು ಹಾಗೂ ರಮೇಶ ಎಂ. ಸರಡಗಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here