ಕಲಬುರಗಿ; ಜಿಲ್ಲೆ ಕಾಳಗಿ ಪಟ್ಟಣದಲ್ಲಿ ಇಂದು ಮಕರ ಸಂಕ್ರಾಂತಿ ನಿಮಿತ್ಯವಾಗಿ ಪಟ್ಟಣದ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯ ನವರ ಜಾತ್ರೆ ನೆರವೇರಿತು. ಬೆಳಿಗ್ಗೆ ಪಟ್ಟಣದ ರೌದ್ರಾವತಿ ನದಿಗೆ ತೆರಳಿ ಗಂಗಾ ಮಾತೆಯ ಪೂಜೆ ಹಾಗೂ ಗಂಗಾರತಿ ನೆರವೇರಿಸಿ. ದೇವಸ್ಥಾನಕ್ಕೆ ಆಗಮಿಸಿ ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು.
ಸಾಯಂಕಾಲ ನೀಲಕಂಠ ಮರಿ ದೇವರು ಸಂಸ್ಥಾನ ಹಿರೇಮಠ ಕಾಳಗಿ ಪೂಜ್ಯರು ಅಂಬಿಗರ ಚೌಡಯ್ಯ ನವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ಬಿದಿಗಳಲ್ಲಿ ಭಜನೆಯೊಂದಿಗೆ ಮೆರವಣಿಗೆ ಸಾಗಿತು.
ಈ ಸಂದರ್ಭದಲ್ಲಿ ತಾಲೂಕು ಕೋಲಿ ಸಮಾಜದ ಅಧ್ಯಕ್ಷ ರೆವಣಸಿದ್ದಪ್ಪ ಚೆಂಗಟಾ ಮುಕರಂಬಾ, ಅಧ್ಯಕ್ಷರಾದ ಜಗನ್ನಾಥ ಚಂದನಕೇರಿ, ನಗರ ಕಾಂಗ್ರೆಸ್ ಅಧ್ಯಕ್ಷರಾದ ವೆದಪ್ರಕಾಶ ಮೊಟಗಿ, ರಾಘವೇಂದ್ರ ಡಿ ಗುತ್ತೆದಾರ, ವಿಶ್ವನಾಥ್ ವನಮಾಲಿ ಖ್ಯಾತ ಉದ್ಯಮಿದಾರಾರು, ಪರಮೆಶ್ವರ ಮಡಿವಾಳ, ರವಿದಾಸ್ ಪತಂಗೆ, ಸಂತೋಷ ಪತಂಗೆ, ನಿಲಕಂಠ ಮಡಿವಾಳ, ಶಾಮರಾವ ಕಡಬೂರ, ಅಸ್ಲಾಂಬೆಗ್ ಬಿಜಾಪುರ, ಮುನಿರಬೆಗ ಬಿಜಾಪುರ, ಚಂದ್ರಕಾಂತ ಜೊಶಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.