ಯುವಕರು ಸ್ವಾಮಿ ವಿವೇಕಾನಂದರ ಸನ್ಮಾರ್ಗ ತತ್ವಗಳನ್ನು ಅಳವಡಿಸಿಕೊಳ್ಳಿ

0
108

ಕಲಬುರಗಿ: ಇಂದಿನ ಶಿಕ್ಷಣ ಪದ್ಧತಿಯಲ್ಲಿ ದೋಷಗಳಿವೆ. ಅದನ್ನು ಅರಿತು ವೈಜ್ಞಾನಿಕ ಚಿಂತನೆ ಮತ್ತು ಮನೋಭಾವ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಉತ್ತಮ ನಡತೆ ಹಾಗೂ ಸಮೂಹದ ಜೊತೆಗಿನ ಸದ್ಭಾವನಾ ವರ್ತನೆಗಳು ಮನಸ್ಸಿನ ಪರಿವರ್ತನೆಗೆ ಪ್ರೇರಣೆ ನೀಡಲಿದೆ. ಯುವಕರು ಸ್ವಾಮಿ ವಿವೇಕಾನಂದರ ಸನ್ಮಾರ್ಗ ತತ್ವಗಳನ್ನು ಅಳವಡಿಸಿಕೊಂಡರೆ ಸಮಾಜದ ಪರಿವರ್ತನೆಗೆ ಸ್ಪಂದಿಸಬಹುದು ಎಂದು ವಿಜಯಪುರ ವಿವೇಕಾನಂದ ಆಶ್ರಮದ ಅಧ್ಯಕ್ಷ ಪರಮ ಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ‘ಯುವ ದಿನ’ ಆಚರಣೆ ಅಂಗವಾಗಿ ಆಯೋಜಿಸಿದ ಸ್ವಾಮಿ ವಿವೇಕಾನಂದ ಅವರ 161ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಯುವ ಜನಾಂಗ ಜ್ಞಾನವನ್ನು ಇಚ್ಛಾಸಕ್ತಿ ಮತ್ತು ಪ್ರೇರಣದಾಯಕ ಚಿಂತನೆ ಮೂಲಕ ಗಳಿಸಿಕೊಳ್ಳಬೇಕು. ಯಾವುದೇ ಶಿಕ್ಷಣ, ಪದವಿಗಳಿಂದ ಉತ್ತಮ ವ್ಯಕ್ತಿತ್ವ ಪಡೆಯಲು ಸಾಧ್ಯವಿಲ್ಲ. ಪ್ರೇರಣಾದಾಯಕ ಕಲಿಕೆಯಿಂದ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಅದಕ್ಕೆ ಅತ್ಯುತ್ತಮ ಸ್ಫೂರ್ತಿ ಸ್ವಾಮಿ ವಿವೇಕಾನಂದರು ಎಂದು ಯುವಕರಿಗೆ ಕಿವಿ ಮಾತು ಹೇಳಿದರು.

Contact Your\'s Advertisement; 9902492681

ಪ್ರತಿ ಮನಸ್ಸಿನಲ್ಲೂ ಬುದ್ಧತ್ವವಿದೆ. ಅದನ್ನು ಖಾತ್ರಿ ಪಡಿಸಿಕೊಂಡು ಮನಸ್ಸಿನ ಆಂತರ್ಯದಲ್ಲಿ ಒಳಗೊಳ್ಳುವಿಕೆ ಮೂಲಕ ಅಗಾಧ ವಿದ್ವತ್ತನ್ನು ಯುವಕರು ಪಡೆಯಿರಿ. ರಾಮಕೃಷ್ಣ ಪರಮ ಹಂಸರು, ಭಗವನ್ ಬುದ್ಧ, ರವೀಂದ್ರನಾಥ ಠಾಗೋರ್ ಅವರ ಸನ್ಮಾರ್ಗ ದರ್ಶನದ ಮೂಲಕ ಸಮಾಜದಲ್ಲಿ ಶಾಂತಿ ಸ್ಥಾಪನೆ ಮಾಡಿದ್ದಾರೆ. ಸಮಾಜದಲ್ಲಿ ನೊಂದ ಬಡವರು, ದುರ್ಬಲರು, ಹಿಂದುಳಿದ ಜನಾಂಗದ ಏಳಿಗೆಗೆ ಸುಶಿಕ್ಷಿತ ಸಮುದಾಯ ಸಕಾರಾತ್ಮಕ ಸ್ಪಂದಿಸದಿದ್ದರೆ, ಸ್ವಾರ್ಥ ಮತ್ತು ಭ್ರಷ್ಟ ಅಲೆ ಸಮಾಜದಲ್ಲಿ ಅಶಾಂತಿ ಉಂಟು ಮಾಡುತ್ತದೆ. ಇದರಿಂದ ಸಮಾಜದ ಅಬ್ಯುದಯ ಅಸಾಧ್ಯ ಎಂದರು.

ಇಡೀ ವಿಶ್ವವೇ ಸ್ವಾಮಿ ವಿವೇಕಾನಂದ ಸಂದೇಶಗಳನ್ನು ಗೌರವದಿಂದ ಪಾಲಿಸುತ್ತಿರುವ ಸಂದರ್ಭಗಳಲ್ಲಿ ನಮ್ಮ ಶಿಕ್ಷಣ ಪದ್ಧತಿ ಆಧುನಿಕ ಚಿಂತನೆಗೆ ಮುಕ್ತವಾಗಿ ತೆರೆದುಕೊಳ್ಳಬೇಕಿದೆ. ಇಂದಿನ ಯುವಕರು ಕೇವಲ ಗುರಿ ಹೊಂದಿದ್ದರೆ ಸಾಲದು ಅದರ ಸಾಧನೆಗೆ ದಿವ್ಯಜ್ಞಾನ ಸಂಪಾದನೆಗೆ ಮನಸ್ಸು ಕೊಡಬೇಕು. ಆಗ ನಿಮ್ಮ ವ್ಯಕ್ತಿತ್ವ ಬದಲಾವಣೆಯಿಂದ ಶ್ರೇಷ್ಠ ಜ್ಞಾನ ನಿಮ್ಮನ್ನು ವಿಶ್ವ ಮಟ್ಟಕ್ಕೆ ಸೆಳೆಯುತ್ತದೆ ಎಂದು ಸಲಹೆ ನೀಡಿದರು.

ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿ ಯುವಕರಿಗೆ ಪ್ರಜ್ಞಾ ಶಕ್ತಿ ಎಂದರೆ ಅದು ಸ್ವಾಮಿ ವಿವೇಕಾನಂದರು. ಅವರ ಆದರ್ಶ, ನಡತೆ ಮತ್ತು ವ್ಯಕ್ತಿತ್ವವೇ ಸಾಧನೆಯ ದಿಕ್ಕು ತೋರಿಸಲಿದೆ. ಇಂದಿನ ರಾಷ್ಟ್ರೀಯ ಶಿಕ್ಷಣ ನೀತಿ ಯುವಕ ಯುವತಿಯರ ಸ್ಪರ್ಧಾತ್ಮಕ ಮನೋಭಾವನೆ ಮತ್ತು ವ್ಯಕ್ತಿತ್ವ ನಿರ್ಮಾಣಕ್ಕೆ ಅದಮ್ಯ ಚೈತನ್ಯಕ್ಕೆ ಒತ್ತು ನೀಡಲಿದೆ ಎಂದರು.

ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ನಿರ್ದೇಶಕ ಪ್ರೊ ವಿವೇಕಾನಂದ ಎಂ. ಜಾಲಿ ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಮಿ ವಿವೇಕಾನಂದ ಅವರ ಜಯಂತಿಯನ್ನು “ರಾಷ್ಟ್ರೀಯ ಯುವ ದಿನ” ವಾಗಿ ಆಚರಿಸಲಾಗುತ್ತಿದೆ. ಯುವಕರ ಸ್ಫೂರ್ತಿ ಚಿಲುಮೆಯಾಗಿರುವ ಸ್ವಾಮಿ ವಿವೇಕಾನಂದರು ಕೇವಲ 39 ವರ್ಷಗಳ ಕಾಲ ಬದುಕಿದರು ಸಹ ಸ್ವಾಭಿಮಾನ ಮತ್ತು ಭಾತೃತ್ವ ಸಂದೇಶವನ್ನು ಜಗತ್ತಿಗೆ ಸಾರಿದರು.

ಅಮೇರಿಕಾದ ಚಿಕಗೋ ಸಮ್ಮೇಳನದಲ್ಲಿನ ಅವರ ಮಾತುಗಳು ಇಡೀ ಜಗತ್ತಿನ ಪರಿವರ್ತನೆಗೆ ಭೂಮಿಕೆಯಾಯಿತು ಎಂದರು. ಕುಲಸಚಿವ ಡಾ. ಬಿ. ಶರಣಪ್ಪ, ಮೌಲ್ಯಮಾಪನ ಕುಲಸಚಿವ ಪ್ರೊ. ಜ್ಯೋತಿ ಧಮ್ಮ ಪ್ರಕಾಶ, ವಿತ್ತಾಧಿಕಾರಿ ಪ್ರೊ. ರಾಜನಾಳಕರ ಲಕ್ಷ್ಮಣ, ಸಿಂಡಿಕೇಟ್ ಸದಸ್ಯ ಡಾ. ಸಂಪತ್‍ಕುಮಾರ ಲೋಯಾ, ವಿದ್ಯಾವಿಷಯಕ ಪರಿಷತ್ತ ಸದಸ್ಯ ಪ್ರೊ. ಹೂವಿನಭಾವಿ ಬಾಬಣ್ಣ ಎಲ್ ಉಪಸ್ಥಿತರಿದ್ದರು. ವಿಶೇμÁಧಿಕಾರಿ ಪ್ರೊ. ಚಂದ್ರಕಾಂತ ಕೆಳಮನಿ ಅತಿಥಿ ಪರಿಚಯಿಸಿದರು.

ದೈಹಿಕ ಶಿಕ್ಷಣ ವಿಭಾಗದ ಯೋಗ ತರಬೇತಿದಾರ ಡಾ. ಚಂದ್ರಕಾಂತ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರಿಮತಿ ಡಾ. ಲಕ್ಷ್ಮಿ ಜೋಷಿ ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here