ಸದ್ಗತಿ ಪ್ರಾಪ್ತಿಗೆ ಪುರಾಣಗಳನ್ನು ಆಲಿಸಿ; ಜಿಡಗಾ, ಅಚಲೇರಿ ಮಠದ ಶ್ರೀಗಳ ಹೇಳಿಕೆ

0
19

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಶ್ರೀ ಜಗದ್ಗುರು ಯಲ್ಲಾಲಿಂಗ ಮಹಾರಾಜರ 37ನೇ ವರ್ಷದ ಪುಣ್ಯರಾಧನೆ ನಿಮಿತ್ಯ ಮಂಗಲಗಿಯ ,ಲಚಣ್ಣ ಶ್ರೀ ಸಿದ್ದಲಿಂಗ ಮಹಾರಾಜರ ಭವ್ಯ ರಥೋತ್ಸವ ಜರಗಿತು.

ಧರ್ಮಸಭೆಯನ್ನು ಉದ್ದೇಶಿಸಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವದಿಸಿದ ಜಿಡಗಾ,ಅಚಲೇರಿ ಮಠದ ಶ್ರೀಗಳಾದ ಶ್ರೀ ಬಸವರಾಜೇಂದ್ರ ಮಹಾಸ್ವಾಮಿಗಳು ಜನರು ಪುರಾಣ ಪ್ರವಚನಗಳನ್ನು ಆಲಿಸುವುದರ ಮೂಲಕ ಜೀವನದಲ್ಲಿ ಸನ್ನಡತೆ ಅಳವಡಿಸಿಕೊಂಡು ಸದ್ಗತಿಗೆ ಪ್ರಾಪ್ತರಾಗಬೇಕೆಂದು ತಿಳಿಸಿದರು. ಅಲ್ಲದೆ ಮನುಷ್ಯ ಜಾತಿಯನ್ನು ಮಹಾದೇವನನ್ನಾಗಿ ಮಾಡುವ ಶಕ್ತಿ ಭಕ್ತಿಗಿದೆ,ಸೃಷ್ಟಿಯೊಳಗೆ ಭಕ್ತಿಯೆ ಶ್ರೇಷ್ಠವಾಗಿದೆ ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀನಿವಾಸ ಸರಡಗಿಯ ಶಕ್ತಿ ಪೀಠದ ಶ್ರೀಗಳಾದ ಅಪ್ಪರಾವ ದೇವಿ ಮುತ್ಯಾ ಅವರು ವಹಿಸಿಕೊಂಡಿದ್ದರು . ನೇತೃತ್ವವನ್ನು ಯಾದಗಿರಿಯ ವಿಶ್ವಕರ್ಮ ಏಕದಂಡಿಗಿ ಮಠದ ಶ್ರೀಗಳಾದ ಶ್ರೀ ಕುಮಾರ ಮಹಾಸ್ವಾಮಿಗಳು ಹಾಗೂ ಮಂಗಲಗಿಯ ಸದ್ಗುರು ಶ್ರೀ ಸಿದ್ದಲಿಂಗ ಮಹಾರಾಜರ ಪುಣ್ಯಶ್ರಮದ ಶ್ರೀಗಳಾದ ಗುರುನಾಥ್ ಮಹಾರಾಜರು ವಹಿಸಿಕೊಂಡಿದ್ದರು.

ಉದ್ಘಾಟಕರಾಗಿ, ಆಗಮಿಸಿದ ಮಲ್ಲಿನಾಥ್ ಪಾಟೀಲ್ ಕಾಳಗಿ, ಶ್ರೀ ಭೀಮರಾವ್ ಪಾಟೀಲ್ ಕೊಡದೂರ್, ಜಗದೀಶ್ ಪಾಟೀಲ್ ಕಾಳಗಿ, ಶರಣು ಚಂದಾ ಕೊಡದೂರ ಆಗಮಿಸಿದರು.

ಮೌನೇಶ್ ವಿಶ್ವಕರ್ಮ, ಮಲ್ಲಿಕಾರ್ಜುನ ಮಂಗಲಗಿ ಸೇರಿದಂತೆ ಅಪಾರ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here