ಸುರಪುರ: ಕಾತ್ಯಾಯನಿ ಭಜನಾ ಮಂಡಳಿ ಪುರಂದರದಾಸರ ಆರಾಧನೆ

0
14

ಸುರಪುರ: ದಾಸವೇರಣ್ಯ ಪುರಂದರದಾಸರ ಆರಾಧನೆಯ ಪ್ರಯುಕ್ತ ಶ್ರೀ ಕಾತ್ಯಾಯನಿ ಮಹಿಳಾ ಭಜನಾ ಮಂಡಳಿ ವತಿಯಿಂದ ಶನಿವಾರದಂದು ಪ್ರಮುಖ ಬೀದಿಗಳ ಮೂಲಕ ನಗರ ಸಂಕೀರ್ತನೆ ನಡೆಸಲಾಯಿತು.

ಪುರಂದರದಾಸರ ವೇಷ ಧರಿಸಿದ್ದ ಬಾಲಕ ಶ್ರೀವತ್ಸ ಹಾಗೂ ಮಹಿಳೆಯರು ಕೋಲಾಟ ಆಡುವ ಮೂಲಕ ಪುರಂದರದಾಸರ ವಿರಚಿತ ಹಾಡುಗಳನ್ನು ಹಾಡಿದರು, ನಂತರ ಮಧ್ವ ಮಂಟಪದಲ್ಲಿ ಆಚರಣೆ ಕಾರ್ಯಕ್ರಮದಲ್ಲಿ ಪುರಂದರದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು ಭೀಮಶೇನಾಚಾರ್ಯ ಜೋಷಿ ಮಂಗಳೂರು ಮಾತನಾಡಿ ನಾರದರೇ ಸ್ವಯಂ ಪುರಂದರದಾಸರಾಗಿ ಅವತರಿಸಿದ್ದು ದಾಸಶ್ರೇಷ್ಠರಾದ ಪುರಂದರದಾಸರು ಕರ್ನಾಟಕ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ ಸಂಗೀತ ಪಿತಾಮಹ ಎನ್ನಿಸಿಕೊಂಡಿದ್ದಾರೆ ಎಂದು ಹೇಳಿದರು.

Contact Your\'s Advertisement; 9902492681

ಭಜನಾ ಮಂಡಳಿಯ ರಾಜಲಕ್ಷ್ಮೀ ಕುಲಕರ್ಣಿ, ನಂದಾ, ರಾಧಾ ದೇವಡಿ, ಕುಸುಮಾ, ವೈಶಾಲಿ, ರೂಪಾ, ಸುರೇಖಾ ಜೋಷಿ, ವಾಣಿ ಕುಲಕರ್ಣಿ, ಅನುಸೂಯಾ, ಗೀತಾಬಾಯಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಗುರುರಾಜ ಭಜನಾ ಮಂಡಳಿ : ನಗರದ ರಾಘವೇಂದ್ರಸ್ವಾಮಿ ಮಠದಲ್ಲಿ ಗುರುರಾಜ ಭಜನಾ ಮಂಡಳಿ ವತಿಯಿಂದ ದಾಸಶ್ರೇಷ್ಟ ಪುರಂದರದಾಸರ ಆರಾಧನೆಯನ್ನು ಆಚರಿಸಲಾಯಿತು, ಪುರಂದರದಾಸರ ವೇಷ ಧರಿಸಿದ್ದ ಗುರುರಾಜಾಚಾರ್ಯ ಪಾಲ್ಮೂರುರವರ ನೇತೃತ್ವದಲ್ಲಿ ಗೋಪಾಲ ಬೇಡುವ ಕಾರ್ಯಕ್ರಮ ನಡೆಯಿತು ವ್ಯಾಸ ಮಂದಿರದಲ್ಲಿ ಪುರಂದರದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು ನಂತರ ತೀರ್ಥ ಪ್ರಸಾದ ಜರುಗಿತು. ಅರ್ಚಕರಾದ ವಾದಿರಾಜ ಬೂದುರು, ನರಸಿಂಹರಾವ ಕುಲಕರ್ಣಿ ಬಾಡಿಯಾಲ, ಮಧುಸೂಧನ ಡಬೀರ, ನರಸಿಂಹರಾವ ಬಡಶೇಷಿ, ನರಸಿಂಹ ಭಂಡಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here