ಬೋಸ್125ನೇ ಜನ್ಮದಿನಾರಣೆ ಸಮಾರೋಪ; ಬೃಹತ್ ಮೆರವಣಿಗೆ

0
17

ಕಲಬುರಗಿ; ಇಂದು ಎಐಡಿಎಸ್‍ಓ ಜಿಲ್ಲಾ ಸಮಿತಿಯಿಂದ ನೇತಾಜಿ ಅವರ 125ನೇ ಜನ್ಮ ವμರ್Áಚರಣೆಯ ಸಮಾರೋಪ ಕಾರ್ಯಕ್ರಮ ಕನಡ ಭವನದಲ್ಲಿ ನಡೆಯಿತು.

ನಗರದ ರೈಲ್ವೆ ನಿಲ್ದಾಣ ದಿಂದ ಮೆರವಣಿಗೆ ಪ್ರಾರಂಭವಾಗಿ ಕನ್ನಡ ಭವನದ ಮೈದಾನದಲ್ಲಿ ಮುಕ್ತಾಯಗೊಂಡಿತು. ಮೆರವಣಿಗೆ ಉದ್ದಕ್ಕೂ ನೂರಾರು ವಿದ್ಯಾರ್ಥಿಗಳು ‘ನೇತಾಜಿ ಜಿಂದಾಬಾದ್’, ‘ನೇತಾಜಿ ನಮ್ಮ ಆದರ್ಶ’, ‘ನೇತಾಜಿ ವಿಚಾರ ಎಲ್ಲಾ ಕಡೆ ಹರಡಲಿ’, ‘ವಿದ್ಯಾರ್ಥಿಗಳ ಒಗ್ಗಟ್ಟು ಚಿರಾಯುವಾಗಲಿ’, ಎಂಬ ಘೋಷಣೆ ಕೂಗುವ ಮೂಲಕ ನೇತಾಜಿ ಸುಭಾμï ಚಂದ್ರ ಬೋಸ್ ರವರಿಗೆ ಗೌರವ ನಮನ ಸಲ್ಲಿಸಿದರು.

Contact Your\'s Advertisement; 9902492681

ಈ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಎಐಕೆಕೆಎಮ್‍ಎಸ್ ನ ರಾಜ್ಯ ಅಧ್ಯಕ್ಷರಾದ ಶ್ರೀ ಹೆಚ್.ವಿ ದಿವಾಕರ್ ಅವರು ನೇತಾಜಿ ಸುಭಾμï ಚಂದ್ರ ಬೋಸ್ ಅಂದರೆ ಇಡೀ ದೇಶದ ವಿದ್ಯಾರ್ಥಿ-ಯುವಜನರ ಸ್ಪೂರ್ತಿ. ವಿದ್ಯಾರ್ಥಿಗಳು ನೇತಾಜಿ ಅವರು ನಡೆಸಿದ ಜೀವನ ಸಂಘರ್ಷ ಕುರಿತು ತಿಳಿದರೆ ಸಾಕಾಗುವುದಿಲ್ಲ, ಆ ವಿಚಾರವನ್ನು ಮೈಗೂಡಿಸಿಕೊಂಡರೆ ಆದುವೇ ನೇತಾಜಿ ಅವರಿಗೆ ನೀಡುವ ಸರಿಯಾದ ಗೌರವ ಎಂದು ನುಡಿದರು.

ಈ ಕಾರ್ಯಕ್ರವನ್ನು ಉದ್ದೇಶಿಸಿ ಎಐಡಿಎಸ್‍ಓ ಕಲಬುರಗಿ ಜಿಲ್ಲಾ ಅಧ್ಯಕ್ಷರಾದ ಹಣಮಂತ ಎಸ್ ಹೆಚ್ ಅವರು ಮಾತನಾಡಿ ನೇತಾಜಿ ಸುಭಾμï ಚಂದ್ರ ಬೋಸ್ ರವರಂತಹ ವಿಚಾರ ಇಂದಿಗೂ ಪ್ರಸ್ತುತವಾಗಿವೆ. ಎಲ್ಲಾರಿಗೂ ವೈಜ್ಞಾನಿಕ – ಧರ್ಮನೀರಪೇಕ್ಷ – ಪ್ರಜಾತಾಂತ್ರಿಕ ಶಿಕ್ಷಣ ಸಿಗಬೇಕು ಎಂಬುದು ಅವರ ಕನಸು.

ಆದರೆ ಅವರ ಕನಸು ಕನಸಾಗಿಯೇ ಉಳಿದಿದೆ.! ನನಸು ಮಾಡುವ ಜವಾಬ್ದಾರಿ ದೇಶದ ವಿದ್ಯಾರ್ಥಿ-ಯುವಜನರ ಮೇಲಿದೆ. ಅವರ ವಿಚಾರಗಳ ಆಧಾರದ ಮೇಲೆ ಎಐಡಿಎಸ್‍ಓ ನಿರಂತರವಾಗಿ ಹಲವಾರು ವಿದ್ಯಾರ್ಥಿ ಚಳುವಳಿಗಳನ್ನು ಸಂಘಟಿಸುತ್ತಿದೆ. ಅವರ 125ನೇ ವμರ್Áಚರಣೆಯ ಭಾಗವಾಗಿ ಹಲವು ಚಟುವಟಿಕೆಗಳು, ವಿದ್ಯಾರ್ಥಿಗಳ ಶಿಬಿರಗಳು, ವಿಚಾರ ಸಂಕಿರಣ ಮತ್ತು ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಂಸ್ಕøತಿಕ ಸ್ಪರ್ಧೆಗಳು ಮತ್ತು ಇನ್ನಿತರೆ ಕಾರ್ಯಚಟುವಟಿಕೆಗಳು ಸಂಘಟಿಸುವ ಮೂಲಕ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ನೇತಾಜಿಯ ವಿಚಾರಗಳನ್ನು ಎಐಡಿಎಸ್‍ಓ ಪರಿಚಯ ಮಾಡಿದೆ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಚಿತ್ರಕಲಾ ವಿಭಾಗದ ಊ.ಔ.ಆ ಡಾ. ಮಲ್ಲಿಕಾರ್ಜುನ ಬಾಗೊಡಿ ಸರ್ ಅವರು ಹಾಗೂ ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷರಾದ ಸ್ನೇಹಾ ಕಟ್ಟಿಮನಿ ರವರು ವೇದಿಕೆ ಮೇಲೆ ಉಪಸ್ಥಿತರಿದ್ದರು, ಜಿಲ್ಲಾ ಕಾರ್ಯದರ್ಶಿ ತುಳಜರಾಮ ಎನ್ ಕೆ ರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಲ್ಲದೇ ಇತ್ತೀಚೆಗೆ ನಡೆದ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಅತ್ಯಂತ ಸ್ಪೂರ್ತಿಯಿಂದ ನಡೆಯಿತು. ಇದರಲ್ಲಿ 450ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಐಡಿಎಸ್‍ಓ ಜಿಲ್ಲಾ ಸಮಿತಿ ಸದಸ್ಯರಾದ ಶಿಲ್ಪಾ ಬಿ ಕೆ, ವೆಂಕಟೇಶ್ ದೇವದುರ್ಗಾ, ಅರುಣ್ ಹಿರೆಬಾನರ್, ಪ್ರೀತಿ ದೊಡ್ಡಮನಿ, ಗೊವಿಂದ ಯಳವಾರ, ನಾಗರಾಜ್ ರಾವೂರ, ಕಿರಣ್ ಮಾನೆ, ಸಿದ್ದಾರ್ಥ, ಬಾಬೂ ಪವರ್, ಯುವರಾಜ್ ರಾಠೋಡ, ಅಮಿತ್, ಸಾಬಣ್ಣ, ಜೈ ಭೀಮ್ ದಾಸ್, ಸೇರಿ ನೂರಾರೂ ವಿದ್ಯಾರ್ಥಿಗಳು ಭಾಗವಹಿಸದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here