ಬೆಂಬಲ ಬೆಲೆ ನೀಡದೆ ಅನ್ಯಾಯ: ಹಾಲು ಉತ್ಪಾದಕರಿಂದ ಪ್ರತಿಭಟನೆ

0
21

ಕಲಬುರಗಿ: ಅಳಂದ ತಾಲ್ಲೂಕಿನ ಹಡಲಗಿ ಗ್ರಾಮದಲ್ಲಿನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಆಡಳಿತಗಾರರು ಹೈನುಗಾರರಿಗೆ ಸರ್ಕಾರದಿಂದ ಆರೋಪಿಸಿ ಹೈನುಗಾರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತ ಮುಂಭಾಗ ಜಮಾಯಿಸಿ,ಸಿಗುವ ಬೆಂಬಲ ಬೆಲೆಯನ್ನುಸರಿಯಾಗಿ ವೀಡುತ್ತಿಲ್ಲ ಎಂದು ಕಲಬುರಗಿ-ಬೀದರ್ ಮತ್ತು ಯಾದಗಿರಿ – ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

“ಸಹಕಾರಿ ಸಂಘದ ಅಧ್ಯಕ್ಷರು, ಸದಸ್ಯರು, ಸಂಘ ಹೈನುಗಾರರ ಹಿತಾಸಕ್ತಿಯನ್ನು ಸರಿಯಾದ ಸಮಯಕ್ಕೆ ಹಣ ಪಾವತಿಸುವುದಿಲ್ಲ. ಫ್ಯಾಟ್ ಯಂತ್ರ ಅಳವಡಿಸದೆ ಕಾರ್ಯದರ್ಶಿಗಳು ಮರೆತು ಆಡಳಿತ ನಡೆಸುತ್ತಿದ್ದಾರೆ. ನಿಯಮಿತವಾಗಿ ಹಾಲು ಹಾಕುವವರಿಗೆ ಅವೈಜ್ಞಾನಿಕ ಬೆಲೆ ನೀಡಿ – ಹೈನುಗಾರರಿಗೆ ಅನ್ಯಾಯ ಮಾಡುತ್ತಿದ್ದಾರೆ’ ಎಂದು ಪ್ರತಿಭಟನಾ ಕಾರರು ದೂರಿದರು. ಹಾಲು ಒಕ್ಕೂಟದ ಮೇಲ್ವಿಚಾರಕರು ಈಚೆಗೆ ಭೇಟಿ ನೀಡಿದಾಗ ಫ್ಯಾಟ್ ಯಂತ್ರ ಅಳವಡಿಸುವಂತೆ ಒತ್ತಾಯಿಸಿದ್ದೆವು. ಆದರೆ, ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಇದನ್ನು ವಿರೋಧಿಸಿದ್ದರು. ಯಂತ್ರ ಅಳವಡಿಸಿಕೊಳ್ಳುವುದಿಲ್ಲ, ಸಹಾಯ ಧನವೂ ನೀಡುವುದಿಲ್ಲ ಎಂಬ ಹೇಳಿಕೆ ಕೊಟ್ಟಿದ್ದಾರೆ’ ಎಂದು ಆಪಾದಿಸಿದರು.

ದರ್ಪದಿಂದ ವರ್ತಿಸಿ, ರೈತರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಯಾವುದೇ ಕಾರಣ ನೀಡದೆ ಏಕಾಏಕಿ ಹಾಲು ಪಡೆಯುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ವಂಚನೆ ಮಾಡುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ಅಸವರ ಜವಳ, ಆನಂದ ಅತ್ತೆ, ಶಿವಪ್ಪ ಅತ್ತೆ, ಸೂರ್ಯಕಾಂತ ಅತ್ತೆ, ಅಶೋಕ ನೀಲೂರ, ಶಿವಪ್ಪ ನೀಲೂರ, ಮಲ್ಲಪ್ಪ ವಗದರಗಿ, ನಾಗೇಶ ವಗದರಗಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here