ಕಲಬುರಗಿ; ಜಿಲ್ಲೆ ಕಾಳಗಿ ತಾಲೂಕಿನ ಬೆಡಸೂರ್ ತಾಂಡಾದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಶ್ರೀ ಗೋಪಾಲ್ ದೇವ ಜಾದವ್ ಜಿ ರವರ 39ನೇ ಪುಣ್ಯಸ್ಮರಣೆ ನಿಮಿತ್ಯ ಜಾನಪದ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಹಾರಕೂಡ ಶ್ರೀ ಗಳು ಚಾಲನೆ ನೀಡಿದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಕಲಬುರಗಿ ಲೋಕಸಭಾ ಸದಸ್ಯರಾದಂತಹ ಉಮೇಶ್ ಜಾದವ್ ರವರು ಮಾತನಾಡಿ ನಮ್ಮ ತಂದೆಯವರು ನಡೆದಾಡಿದ ಈ ಸ್ಥಳ ಅಗಸದಿಂದ ಭೂಮಿಗೆ ಬಿದ್ದ ಸ್ವರ್ಗದ ತುಂಡಂತಿದೆ, ಅವರು ಬಂಜಾರ ಸಮುದಾಯದವರು ಆರ್ಥಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ನಮ್ಮ ಭಾಗದಲ್ಲಿ ಸ್ವಂತ ಖರ್ಚಿನಲ್ಲೇ ಶಾಲೆ ಪ್ರಾರಂಭಿಸಿ. ಮನೆ ಮನೆಗೆ ತೆರಳಿ ಶಿಕ್ಷಣದ ಅರಿವು ಮೂಡಿಸಿದರು.
ಹಾಗೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಿದರು ಹಾಗೂ ಸ್ವತಂತ್ರ ಹೋರಾಟದಲ್ಲೂ ಭಾಗಿಯಾಗಿದರು, ಆಗಿನ ನಿಜಾಮನ ವಶದಲ್ಲಿದ್ದ ಹೈದ್ರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಭಾಗವಹಿಸಿ ದೇಶ ಸೇವೆಯಲ್ಲಿಯು ಪಾತ್ರ ವಹಿಸಿದರೆಂದು ತಿಳಿಸಿದರು.ಅಂದು ನಮ್ಮ ತಂದೆಯವರು ಕಂಡ ಕನಸುಗಳು ಇಂದು ಮೋದಿ ಸರಕಾರ ಸಾಕಾರಗೊಳಿಸುತ್ತಿದೆ ಎಂದು ತಿಳಿಸಿದರು.
ದಿವ್ಯ ಸಾನಿಧ್ಯ ವಹಿಸಿದ ಹಾರಕೂಡ ಶ್ರೀ ಚೆನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಹಾಗೆ ಚಿಂಚೋಳಿ,ಕಾಳಗಿ, ಜೇವರ್ಗಿ ತಾಲೂಕ ವಿವಿಧ ಮಹಾ ವಿದ್ಯಾಲಯಗಳಿಗೆ 250 ಗಣಕಯಂತ್ರ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹವಾ ಮಲ್ಲಿನಾಥ ಮಹಾರಾಜರು, ಶಾಸಕರಾದ ಅವಿನಾಶ್ ಜಾದವ್, ರಾಮಕೃಷ್ಣ ಜಾಧವ್,ವಿವಿಧ, ಮಠಾಧೀಶರು,ರಾಜಕೀಯ ಮುಖಂಡರು ,ಗ್ರಾಮಸ್ಥರು ಉಪಸ್ಥಿತರಿದ್ದರು.