ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ; ತಾಯಂದಿರಿಗೆ ಸಿಹಿ ಹಂಚ್ಚಿ ಆಚರಣೆ

0
57

ಕಲಬುರಗಿ: “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ” ಯ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕಾ ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಸದರಿ ದಿನದಂದು ಹೆಣ್ಣುಮಗು ಜನನವಾಗಿರುವ ತಾಯಂದಿರಿಗೆ ಸಿಹಿ ಹಂಚ್ಚುವುದು/ಹಣ್ಣುಹಂಪಲಗಳನ್ನು ವಿತರಿಸುವುದರ ಮೂಲಕ ಹೆಣ್ಣುಮಗುವನ್ನು ಸಮಾಜವು ನೋಡುವ ದೃಷ್ಠಿಕೊನವನ್ನು ಉತ್ತಮ ಪಡಿಸಲು ಆಗೂ ಹೆಣ್ಣು ಮಕ್ಕಳ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಜಿಮ್ಸ್ ಜಿಲ್ಲಾ ಆಸ್ಪತ್ರೆಯಲ್ಲಿ ಈ ಕೆಳಕಂಡ ಜಿಲ್ಲಾ ಮಟ್ಟದ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ಆಚರಿಸಲಾಯಿತು.

ಮಾನ್ಯ ಶ್ರೀಮತಿ ಮಮತಾ ಕುಮಾರಿ, ಕೆ.ಎ.ಎಸ್ ಸಹಾಯಕ ಆಯುಕ್ತರು , ಡಾ.ರಾಜಶೇಖರ ಮಾಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಡಾ.ಜಿ.ಬಿ ದೊಡ್ಡಮನಿ ಪ್ರಭಾರಿ ನಿರ್ದೇಶಕರು ಜಿಮ್ಸ್ ವೈದ್ಯಕೀಯ ಮಹಾವಿದ್ಯಾಲಯ , ಡಾ.ಮೊಹ್ಮದ್ ಶಫೀಯುದ್ದಿನ್ ವೈದ್ಯಕೀಯ ಅಧೀಕ್ಷಕರು, ಜಿಮ್ಸ್ ಆಸ್ಪತ್ರೆ, ಡಾ.ಎ ಎಸ್ ರುದ್ರವಾಡಿ ಜಿಲ್ಲಾ ಶಸ್ತ್ರಜ್ಞರು, ಜಿಲ್ಲಾ ಆಸ್ಪತ್ರೆ , ಡಾ.ಉಷಾ ದೊಡ್ಡಮನಿ ಮುಖ್ಯಸ್ಥರು ಓಬಿಜಿ ವಿಭಾಗ, ಡಾ.ಸಂದೀಪ್ ವಿಶೇಷ ಅಧಿಕಾರಿಗಳು ಎಮ್.ಸಿ.ಹೆಚ್ ಹಾಗೂ ಮುಖ್ಯಸ್ಥರು ಮಕ್ಕಳ ವಿಭಾಗ ಜಿಮ್ಸ್, ಡಾ.ರೇಣುಕಾ ಬಗಾಲೇ ಮನೊರೋಗ ಸಮಾಲೋಚಕರು, ಜಿಮ್ಸ್, ಸ್ಥಳೀಯ ವೈದ್ಯಾಧಿಕಾರಿಗಳು ಜಿಮ್ಸ್, ಓಪಿಡಿ ಸರ್ಜನ್ ಜಿಮ್ಸ್ ಹಾಗೂ ಡಾ.ಶರಣಬಸಪ್ಪ ಕ್ಯಾತನಾಳ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಪಿ.ಸಿ & ಪಿ.ಎನ್.ಡಿ.ಟಿ ನೋಡಲ್ ಅಧಿಕಾರಿಗಳು, ತಿಪ್ಪಮ್ಮಾ ಮಾನಕರ್ ಜಿಲ್ಲಾ ನರ್ಸಿಂಗ್ ಅಧಿಕಾರಿಗಳು, ಜಿ.ಆ&ಕು.ಕ ಅಧಿಕಾರಿಗಳ ಕಾರ್ಯಾಲಯ , ಎಲ್ಲಾ ಹಿರಿಯ ಸ್ತ್ರೀ ರೋಗ ತಜ್ಞ ವೈದ್ಯಾಧಿಕಾರಿಗಳು, ಜಿಲ್ಲಾ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿಗಳು, ಐ.ಇ.ಸಿ ವಿಭಾಗದ ಅಧಿಕಾರಿಗಳು, ಪಿ.ಸಿ & ಪಿ.ಎನ್.ಡಿ.ಟಿ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿಗಳು ಹಾಜರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here