ಆಳಂದ: ತಾಲೂಕಿನ ಸಾವಳೇಶ್ವರ ಕ್ರಾಸ್ ನಲ್ಲಿ ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಕಿಸಾನ್ ಸಭಾ ತಾಲೂಕು ಸಮಿತಿಯ ವತಿಯಿಂದ ಬುಧವಾರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ರಾಜ್ಯ ಸಂಚಾಲಕ ಮೌಲ್ಲಾ ಮುಲಾ ಮಾತನಾಡಿ, ರೈತರಿಗೆ ಜನರಲ್ ವಿದ್ಯುತ್ ಸಂಪರ್ಕ ನೀಡಿ, ಠೇವಣಿ ಆಧಾರಿತ ವಿದ್ಯುತ್ ನೀಡಿ , ಹಗಲಿನಲ್ಲಿ ವಿದ್ಯುತ್ ಪೂರೈಕೆ ಮಾಡಿ,ಎಂದು ಅವರು ಒತ್ತಾಯಿಸಿದರು. ರೈತ ಮುಖಂಡ ರಮೇಶ್ ಲೋಹಾರ ಮಾತನಾಡಿ, ರೈತರ ಬೇಡಿಕೆ ಇಡಿಸದಿದ್ದರೆ ಆಳಂದ ಬಂದ್ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದರು.
ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ ಖೋಬರೆ,ಮಲ್ಲಿನಾಥ್ ಯಲ್ಲಶೇಟ್ಟಿ ಸೇರಿದಂತೆ ಪ್ರಮುಖ ರೈತರು ಮಾತನಾಡಿ’ಬೇಡಿಕೆ ಈಡೇರಿಸಲು ಒತ್ತಾಯಿಸಿದರು.ತಡವಾಗಿ ತಹಶಿಲ್ದಾರ ಯಲ್ಲಪ್ಪ ಸುಬೇದಾರ್ ಸ್ಥಳಕ್ಕೆ ಭೇಟಿ ನೀಡಿ,ಮನವಿ ಸ್ವೀಕರಿಸಿದರು.ಜೆಸ್ಕಾಂ ಕಾರ್ಯನಿರ್ವಾಹಕ ಅಧಿಕಾರಿ,ಸಂತೋಷ ಚೌಹಾನ ರೈತರನ್ನು ಉದ್ದೇಶಿಸಿ ಮಾತನಾಡಿ, ಜನರಲ್ ವಿದ್ಯುತ್ ಸಮಸ್ಯೆ ನೀಡುವುದು ಸರ್ಕಾರ ಮಟ್ಟದಲ್ಲಿ ಇದೆ.ರೈತರ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.
ಯುವ ಹೋರಾಟ ಅಶ್ಪಾಕ್ ಮುಲ್ಲಾ ಅಧಿಕಾರಿಗಳ ಜತೆ ಚರ್ಚಿಸಿದರು. ರೈತರಾದ ಪಿಂಟು ಪಾಟೀಲ ಬಸವರಾಜ್ ಜಮಾದಾರ ವಿಶ್ವನಾಧ ಜಮಾದಾರ, ರಮೇಶ್ ಹತ್ತಿ,ಮುಬಾರಕ್ ಮುಲಗೆ ಎ.ಡಬ್ಲೂ ನಟರಾಜ ಸೇರಿದಂತೆ ಮತ್ತಿತರರು ಇದ್ದರು.
ರಸ್ತೆ ತಡೆ ಸಂಚಾರ ಅಸ್ತವ್ಯಸ್ತ : ವಾಗ್ದರಿ – ರಿಬ್ಬನ್ ಪಲ್ಲಿ (ರಾಜ್ಯ ಹೆದ್ದಾರಿ 10) ಎರಡು ರಸ್ತೆ ತಡೆ ಮಾಡಿದ್ದರಿಂದ ಎರಡು ಗಂಟೆ ಬಂದ್ ಆಗುವುದರಿಂದ ವಾಹನ ಸ್ವಾರರು ಪ್ರಯಾಣಿಕರು ರೋಗಿಗಳು ಪರದಾಡಿದರು.ಹೋರಾಟಗಾರು ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆಯಿತು.ಪೋಲಿಸರು ಹರಸಾಹಸ ಪಟ್ಟರು.ಎ.ಎಸ್.ಐ.ಭದ್ರಪ್ಪ,ಹೆಡ್ ಕಾನ್ಸಟೇಬಲ ಲಕ್ಷ್ಮಿಪುತ್ರ ಇದ್ದರು.