ಕಲಬುರಗಿ: ಕನ್ನಡ ಭವನದಲ್ಲಿ ಶ್ರೀ ಅಂಬಾ ಭವಾನಿ ಕಲಾ ಮತ್ತು ಸಾಹಿತ್ಯ ಸಂಘದವರಿಂದ ಆಯೋಜಿಸಿರುವ “52ಸೆಕೆಂಡ್ಸ್” ಹಿಂದಿ ಕಿರುಚಿತ್ರ ಲೋಗೋ ಬಿಡುಗಡೆ ಮಾಡಲಾಯಿತು.
ಈ ವೇಳೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ ಮಾತನಾಡಿಯಾವ ರೀತಿಯಾಗಿ ರಾಷ್ಟ್ರಧ್ವಜಕ್ಕೆ ಗೌರವಿಸಬೇಕು, ಹೇಗೆ ಧ್ವಜಾರೋಹಣ ಮತ್ತು ಅವರೋಹಣ ಮಾಡಬೇಕೆಂದು ಕೇವಲ 35ನಿಮಿಷಗಳ ಸಿನಿಮಾದ ಮೂಲಕ ದೇಶಭಕ್ತರಿಗೆ ಹೃದಯ ಮುಟ್ಟುವಂತೆ ನಟಿಸಿದ ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಪಾತ್ರ ಮೆಚ್ಚುವಂತಹದ್ದು, ಇದೊಂದು ಏಕೈಕ ಕಿರುಚಿತ್ರ ಶ್ಲಾಘನೀಯವಾದದ್ದು, ಮಾದರಿ ಸಿನಿಮಾವಾಗಿದ್ದು, ಭಾರತೀಯ ಪ್ರತಿಯೊಬ್ಬ ನಾಗರೀಕರು ನೋಡಲೇಬೇಕಾದ ಕಿರುಚಿತ್ರ ಎಂದರು.
ಯಾವುದೇ ರೀತಿ ಸಿನಿಮಾ ಕುರಿತು ಮಾತನಾಡಿದರೆ ಸಾಕು, ಬೆಂಗಳೂರು ಹಾಗೂ ಮೈಸೂರಿನ ಕಡೆಯ ನಿರ್ದೇಶಕರ, ನಿರ್ಮಾಪಕರ, ನಟರ, ಕಲಾವಿದರ ಹೆಸರುಗಳೆ ಕೇಳುತ್ತಿದ್ದ ನಮಗೆ ಈಗ ನಮ್ಮ ಕಲ್ಯಾಣ ಕರ್ನಾಟಕ ಭಾಗದ ನಿರ್ದೇಶಕರಾದ ರಾಜೇಶ ಮಾನೆ ಹಾಗು ನಿರ್ಮಾಪಕರಾದ ಸುನೀಲ ಚೌಧರಿ ಹಾಗು ನಾಗೇಂದ್ರ ಗದ್ವಾಲ ಅವರ ಹೆಸರು ಕೇಳುತ್ತಿರುವುದು ಬಹಳ ಸಂತೋಷ ಇದೊಂದು ಒಳ್ಳೆಯ ಬೆಳವಣಿಗೆ ಇಂತಹ ಸ್ಥಳೀಯ ಕಲಾವಿದರನ್ನು ಬೆಳೆಸಿ ಪ್ರತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡರಾದ ಎಂ.ಎಸ್. ಪಾಟೀಲ ನರಿಬೋಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಿನಿಮಾ ನಿರ್ದೇಶಕರಾದ ರಾಜೇಂದ್ರ ಮಾನೆ ಅವರು ಸಿನಿಮಾ ಕುರಿತು ಪ್ರಸ್ತಾವಿಕ ಮಾತನಾಡಿದರು, ನಿರ್ಮಾಪಕರಾದ ಸುನೀಲ ಚೌಧರಿ ಅವರು ಈ ಸಿನಿಮಾ ಮಾಡಲು ಆಂದ್ರಪದೇಶದ ರಾಜ್ಯದ ಹೈದ್ರಾಬಾದಿನ ಜಂಗಮಕೂಟ ಎಂಬ ಒಂದು ಸಣ್ಣ ಗ್ರಾಮದ ರೈತರು ಪ್ರತಿನಿತ್ಯ ತಮ್ಮ ಕೆಲಸಕ್ಕೆ ಹೋಗುವ ಮುನ್ನ ರಾಷ್ಟ್ರಗೀತೆ ಹಾಡಿಯೇ ಹೋಗುತ್ತಿದ್ದು, ಪ್ರತಿಯಬ್ಬರು ತಮ್ಮ ಸ್ಥಳದಲ್ಲಿಯೇ ಎದ್ದು ನಿಂತು ಗೌರವಿಸುತ್ತಿದ್ದುದನ್ನು ನೋಡಿಯೇ ದೇಶಭಕ್ತಿಯೇ ನನ್ನ ಈ ಸಿನಿಮಾ ಮಾಡಲು ಪ್ರೇರಣೆ ಎಂದು ಸಿನಿಮಾ ಕುರಿತು ಮಾತನಾಡಿದರು.
ಮಲ್ಲಿಕಾರ್ಜುನ ಕುಳಗೇರಿ, ಅಭಯಪ್ರಕಾಶ, ಅನಿರುದ್ಧ ದೇಶಮುಖ, ಮಾತನಾಡಿದರು ಶ್ರೀ ಅಂಬಾ ಭವಾನಿ ಕಲಾ ಮತ್ತು ಸಾಹಿತ್ಯ ಸಂಘದ ಅಧ್ಯಕ್ಷರಾದ ಭೀಮಾಶಂಕರ ರಾಜಗುಂಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಪ್ರಾರಂಭದಲ್ಲಿ ನೀಲಮ್ಮ ಪ್ರತಾಪ ಪ್ರಾರ್ಥಿಸಿದರು, ರವೀಂದ್ರ ಬಿರಾದಾರ ಸ್ವಾಗತಿಸಿದರು, ರೇಣುಕಾಚಾರ್ಯ ಸ್ಥಾವರಮಠ ಅವರು ನಿರೂಪಿಸಿದರು, ರವಿ ಬಿರಾದಾರ ವಂದಿಸಿದರು.
ಸ್ಥಳೀಯ ಸಿನಿಮಾ ಕಲಾವಿದರಾದ ಡಾ. ಮಲ್ಲಾರಾವ ಮಲ್ಲೆ ಡಾಕ್ಟರ್ ಪಾತ್ರದಲ್ಲಿ, ಸುನೀಲ ಚೌಧರಿ ಹಾಗು ನಾಗೇಂದ್ರ ಗದ್ವಾಲ ಶಿಕ್ಷಕರ ಪಾತ್ರದಲ್ಲಿ ಕುಮಾರಿ ಪ್ರಿಯದರ್ಶಿನಿ ಹಾಗು ಕುಮಾರ ಲಕ್ಷ್ಮಿಕಾಂತ ವಿದ್ಯಾರ್ಥಿ ಪಾತ್ರದಲ್ಲಿ, ಶಿವಶರಣಪ್ಪ ಮುಖ್ಯಗುರುಗಳು ಭಾರತ ಸೇವಾದಳದ ಮುಖ್ಯಸ್ಥರಾದ ಡಾ. ಶಿವಲಿಂಗಪ್ಪ ಗೌಳಿ ಇವರೆಲ್ಲರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸಿನಿಮಾ ಛಾಯಾಚಿತ್ರಗಾರರಾದ ರಾಜು ಕೋಷ್ಠಿ ಹಾಗು ಹಿರಿಯರಾದ ಜೇವರ್ಗಿ ತಾಲ್ಲೂಕು ಕಸಾಪ ಅಧ್ಯಕ್ಷ ಎಸ್.ಕೆ.ಬಿರಾದಾರ, ಕೋಳಕೂರ ಕಸಾಪ ವಲಯ ಘಟಕ ಅಧ್ಯಕ್ಷ ಶಾಂತಲಿಂಗಪ್ಪಗೌಡ ಪಾಟೀಲ, ಬಸವಂತರಾವ ಕೋಳಕೂರ, ವಿಶ್ವನಾಥ ತೊಟ್ನಳ್ಳಿ, ಉದಯಕುಮಾರ ಜೇವರ್ಗಿ, ಶಿವಶರಣಪ್ಪ ನರೂಣಿ, ಶಿವಶರಣಪ್ಪ ವಚ್ಚಾ, ಎಮ್.ಎಸ್. ಪಾಸೋಡಿ, ಸಂತೋಷ ಗದ್ವಾಲ, ಸಾಯಿಕುಮಾರ, ನಾಗನಾಥ ಬಿಂಡೆ, ಡಿ.ಬಾಸ್ ದರ್ಶನ, ಸರ್ವೋತ್ತಮ ಹಾಗೂ ಇತರರು ಉಪಸ್ಥಿತರಿದ್ದರು.