ನಮ್ಮ ಮತ ನಮ್ಮ ಹಕ್ಕು: ಸಾಜಿದ್ ಅಲಿ ರಂಜೋಳ್ವಿ

0
32

ಕಲಬುರಗಿ: ಭಾರತದ ಚುನಾವಣಾ ಆಯೋಗ ಸ್ಥಾಪನೆಯಾದ 1950 ರ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾರ ತನ್ನ ಕರ್ತವ್ಯ ಅರಿತು ಮತ ಚಲಾಯಿಸುವುದು ಅತೀ ಅಗತ್ಯ ಎಂದು ಸಮಾಜಿಕ ಕಾರ್ಯಕರ್ತರಾದ ಸಾಜಿದ್ ಅಲಿ ರಂಜೋಳ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಮ್ಮ ಮತ ನಮ್ಮ ಹಕ್ಕು. ದೇಶದ ಭವಿಷ್ಯಕ್ಕಾಗಿ, ನಾಳೆಯ ಸಾಮರಸ್ಯಕ್ಕಾಗಿ ಎಲ್ಲರೂ ಜವಾಬ್ದಾರಿಯುತವಾಗಿ ಮತ ಚಲಾಯಿಸೋಣ. ಚುನಾವಣೆಯ ಸಮಯದಲ್ಲಿ ದೇಶದ ಮತದಾರರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಹಾಗೂ ಜವಾಬ್ದಾರಿಯುತ ನಾಗರಿಕರಾಗಲು ಅವರಿಗೆ ಸಹಕರಿಸುವುದು ಈ ಬಾರಿಯ ರಾಷ್ಟ್ರೀಯ ಮತದಾರರ ದಿನದ ಧ್ಯೇಯವಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here