ಕಷ್ಟದಲ್ಲಿ ತಾಳ್ಮೆ ,ನಷ್ಟದಲ್ಲಿ ಸಹನೆ, ತೊಂದರೆಯಲ್ಲಿ ಶಾಂತಿ ಮುಖ್ಯ

0
137

ಕಲಬುರಗಿ ದುಃ ಖದಲ್ಲಿ ಸಮಾದಾನ ಇದ್ದವರಿಗೆ ಬಾಳಿನಲ್ಲಿ ಯಾವ ಭಯವೂ ಇಲ್ಲದೆ ಸಾಧನೆಯ ಶಿಖರ ಏರಬಹುದು ಎಂದು ನಗರದ ಸರ್ಕಾರಿ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯಾದ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸುಶ್ಮಿತಾ ಮಠಪತಿ ಹೇಳಿದರು.

ನಗರದ ಬಬಲಾದ ಮಠದಲ್ಲಿ ಸೋಮವಾರ 142ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಗುರುಗಳ ಮಾರ್ಗದರ್ಶನ, ತಾಯಿ ತಂದೆಯ ಆಶೀರ್ವಾದ ಹಾಗೂ ಶರಣ, ಸಂತರ ನುಡಿಗಳೇ ನನ್ನ ಸಾಧನೆಗೆ ದಾರಿದೀಪವಾಗಿವೆ. ನಮ್ಮ ಸಾಧನೆಗೆ ಅಡೆತಡೆಯಾಗಿ ಬರುವ ಸಮಸ್ಯೆಗಳನ್ನು ಎದುರಿಸಿ ಧೈರ್ಯದಿಂದ ಸತತ ಪ್ರಯತ್ನದಿಂದ ನಾವು ಸಾಗಿದರೆ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ಸೇಡಂ ತಾಲೂಕ ತಹಶಿಲ್ದಾರರಾದ ಭೀಮಣ್ಣ ಕುದರಿ ಮಾತನಾಡುತ್ತಾ ಪ್ರತಿವಾರ ಶಿವನು ಭೂವಗೋಷ್ಠಿಯಲ್ಲಿ ಜ್ಞಾನದ ಜ್ಯೋತಿ ಹಚ್ಚುತ್ತಿರುವ ಶ್ರೀಮಠದ ಕಾರ್ಯ ಮೆಚ್ಚುವಂತದು. ಅದರಂತೆ ಸರಕಾರಿ ಶಾಲೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡವರಿಗೆ ವಿಶೇಷವಾಗಿ  ಸನ್ಮಾನಿಸುವುದರೊಂದಿಗೆ, ಈ ಭಾಗದ ಮಕ್ಕಳ ಪ್ರತಿಭೆ ಸಮಾಜದಲ್ಲಿ ಗುರುತಿಸಲು ವೇದಿಕೆ ಕೊಡುತ್ತಿರುವುದು ಪೂಜ್ಯರ ಕಾರ್ಯ ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ನೇತೃತ್ವವನ್ನು ಶ್ರೀಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದಲಿಂಗ ಮಹಾಶಿವ ಯೋಗಿಗಳು ವಹಿಸಿದರು.

ಇದೇ ಸಂದರ್ಭದಲ್ಲಿ ಚಿತ್ರಕಲೆಯಲ್ಲಿ (ಪೇಂಟಿಂಗ)  ಪದವಿ  ಕಾಲೇಜುಗಳ ಮಟ್ಟದ ಸ್ಪರ್ಧೆಯಲ್ಲಿ ರಾಜ್ಯ ಸರ್ಕಾರದಿಂದ  ಪ್ರಶಸ್ತಿ ಪಡೆದುಕೊಂಡ ಕುಮಾರಿ ಸುಶ್ಮಿತಾ ಮಠಪತಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಹಣಮಂತರಾಯ ಅಟ್ಟೂರ, ಸಂಗಮೇಶ ನಾಗೂರ, ಗುರುರಾಜ ಹಸರಗುಂಡಗಿ, ಡಾ. ಮಲ್ಲಿಕಾರ್ಜುನ ಹುಮ್ನಾಬಾದ, ಶಿವರಾಜ ಬಾಲಕೇಡ, ಕವಿತಾ ದೇಗಾಂವ, ಮಾಣಿಕ ಮಿರ್ಕಲ, ವೀರಯ್ಯಸ್ವಾಮಿ, ಮಾಣಿಕ ಗುತ್ತೇದಾರ, ಅಮರೇಶ್ವರಿ ನಾಗೂರ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here