ಸಾಂಸ್ಕøತಿಕ ಬದುಕು ಕಟ್ಟಿಕೊಳ್ಳಲು ಕರೆ

0
7

ಕಲಬುರಗಿ : ಇಂದಿನ ಯಾಂತ್ರಿಕ ಜೀವನ ಶೈಲಿಯಲ್ಲಿ ನಮ್ಮ ನಾಗರಿಕತೆ ಮರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಭಾಷೆ ಮತ್ತು ಸಂಸ್ಕøತಿಯನ್ನು ಮಕ್ಕಳಿಗೆ ಕಲಿಸುವ ಮೂಲಕ ಉಳಿಸಿ ಬೆಳೆಸಬೇಕಾಗಿದೆ ಎಂದು ಮಕ್ತಂಪೂರ ಮಠದ ಪೀಠಾಧಿಪತಿ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಹೇಳಿದರು.

ನಗರದ ಮುಕ್ತಂಪೂರ ಗುರುಬಸವ ಬ್ರಹ್ಮಮಠದದಲ್ಲಿ ಮಾಯಾ ವೆಲಫರ್ ಸೂಸಾಯಿಟಿ ಕಲಬುರಗಿ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಹಯೋಗದಲ್ಲಿ ಏರ್ಪಡಿಸಿದ ಜಾನಪದ ಮತ್ತು ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಿಕಲಚೇತನರಾದ ಪುಟ್ಟರಾಜ ಗವಾಯಿಗಳು ನಮಗೆಲ್ಲ ದಾರಿದೀಪ. ಅವರು ಸಾಹಿತ್ಯ, ಸಂಸ್ಕøತಿ, ಸಂಗೀತ ಲೋಕದಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ, ಅವರ ಆದರ್ಶಗಳ ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಹಿತ ನುಡಿದರು.

ಸಂಪನ್ಮೂಲ ವ್ಯಕ್ತಿ ಎಂ ಎನ್ ಸುಗಂಧಿ ರಾಜಾಪೂರ ಅವರು, ನಮ್ಮ ನೆಲ ಜಲ ಹಾಗೂ ಸಮಸ್ಕøತಿ ಉಳಿಯಲು ಜನಪದದಿಂದ ಸಾಧ್ಯ. ಅದರ ಬೇರುಗಳನ್ನು ಮೈಗೂಡಿಸಿಕೊಂಡು ಆಚರಣೆಗೆ ತರಬೇಕು. ಸೊಗಸಾದ ಚಟುವಟಿಕೆಗಳು ಅನುಸರಿಸಬೇಕು ಎಂದು ಕೆಲ ಜನಪದ ಹಾಡುಗಳನ್ನು ಪ್ರಸ್ತುತ ಪಡಿಸಿದರು.

ಸೂಸಾಯಿಟಿ ಅಧ್ಯಕ್ಷ ವೀರಣ್ಣ ಬೆಣೆಣೆಶಿರೂರ ಅಧ್ಯಕ್ಷತೆ ವಹಿಸಿದರು. ಸಾಹಿತಿ ಸಿದ್ದರಾಮ ರಾಜಮಾನೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾಷೆಯ ಬೆಳವಣಿಗೆಗೆ ಜನಪದ ಸೊಗಡನ್ನು ಜೀವನದಲ್ಲಿ ಅಳವಡಿಸಿ ಕೊಂಡು ಸೌಂದರ್ಯ ಹೆಚ್ಚಿಸಬೇಕಾಗಿದೆ ಎಂದರು.

ಕಲಾವಿದರಾದ ಪ್ರಭುಲಿಂಗಯ್ಯ ಹಿರೇಮಠ, ರೇಣುಕಾ ಐಹೋಳೆ, ಬಸವರಾಜ ಅಗ್ಗಿ, ರೇಷ್ಮಾ ಟಿಳ್ಳೆ, ಬಸವರಾಜ ಕಿಣಗಿ ಭಾಗವಹಿಸಿ ಕಲಾ ಪ್ರದರ್ಶನ ನೆರವೇರಿಸಿದರು. ನಂತರ ಜನಪದ ಕಲಾವಿದರಿಗೆ ಪ್ರಮಾಣ ಪತ್ರ ವಿತರಿಸಿದರು. ಗಣ್ಯರಾದ ರಾಜಶೇಖರ ಕಲ್ಯಾಣಿ, ಶಿವಪ್ರಕಾಶ ಶಾಸ್ತ್ರೀ, ನಾನಾಗೌಡ ಪಾಟೀಲ ಪಾಲ್ಗೊಂಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here