ಗ್ರಾಮ ಪಂಚಾಯತ ಸಂಪನ್ಮೂಲಗಳ ಕ್ರೋಢಿಕರಣಗಳ ಕುರಿತು ದಿನದ ತರಬೇತಿ

0
79

ಕಲಬುರಗಿ: ಜಿಲ್ಲೆಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಡಿಯಲ್ಲಿ ಬರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಕಚೇರಿಯಲ್ಲಿ ಗ್ರಾಮ ಪಂಚಾಯತ ಸಂಪನ್ಮೂಲಗ¼ ಕ್ರೋಢಿಕರಣ, ಅವಕಾಶ,ವಿಧಾನಗಳು ಮತ್ತು ಸವಾಲುಗಳ ಕುರಿತು ಒಂದು ದಿನದ ತರಬೇತಿಯನ್ನು ಕಲ್ಯಾಣ ಕರ್ನಾಟಕದ ವಿಭಾಗದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಎಲ್ಲ ತಾಲೂಕಿನ ಸಹಾಯಕ ನಿರ್ದೇಶಕರು ಹಾಗೂ ಎಲ್ಲ ತಾಲೂಕಿನ ಆಯ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಮೊದಲಿಗೆ ಪ್ರಾದೇಶಿಕ ಕಚೇರಿಯ ಉಪ ನಿರ್ದೇಶಕರಾದ ಗುರುನಾಥ ಶೆಟಗಾರ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಉಪ ನಿರ್ದೇಶಕರಾದ ಕೆ.ಜಿ.ಜಗದೀಶ ರವರು ಸಸಿಗೆ ನೀರೆರುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಕಾರ್ಯಕ್ರಮದ ಗುರಿ ಮತ್ತು ಉದ್ದೇಶದ ಕುರಿತು ಮಾತನಾಡಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಜಿಲ್ಲಾ ಸಾಂಖ್ಯಿಕ ಸಂಗ್ರಹಣಾಧಿಕಾರಿಗಳಾದ ಅಂಬರಾಯ ಸಾಗರ ಹಾಗೂ ಮೈಸೂರು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ರಾಜ್ ಸಂಸ್ಥೆಯ ಬೋಧಕರಾದ ಪ್ರತಿಭಾ ರವರು ಹಾಗೂ ತುಮಕೂರು ಜಿಲ್ಲೆಯ ಸಂಪನ್ಮೂಲ ವ್ಯಕ್ತಿಗಳಾದ ಶಶೀಧರ ವೇದಿಕೆಯ ಮೇಲೆ ಆಸೀನರಾಗಿದ್ದರು. ಹಾಗೂ ತರಬೇತಿಯಲ್ಲಿ ಗ್ರಾಮ ಪಂಚಾಯತಗಳು ತೆರಿಗೆ ಸಂಗ್ರಹಣೆಯಲ್ಲಿ ಎದುರಿಸುತ್ತಿರುವ ಸವಾಲುಗಳು ಹಾಗೂ ಮಾರ್ಗಗಳು ಕುರಿತು ತಮ್ಮ ಉಪನ್ಯಾಸ ನೀಡಿ ಪ್ರಾತ್ಯಕ್ಷೀಕೆಯನ್ನು ಮಾಡಿಸಿದರು.

ಕಾರ್ಯಕ್ರಮವನ್ನು ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು, ರವರು ನಿರೂಪಿಸಿದರು. ಬೋಧಕರಾದ ಡಾ.ರಾಜು ಕಂಬಳಿಮಠ, ಸರ್ವರವನ್ನು ಸ್ವಾಗತಿಸಿದರು, ತರಬೇತಿ ವ್ಯವಸ್ಥಾಪಕರಾದ ಪ್ರಶಾಂತ ಅಂಗಡಿ, ರವರು ವಂದಿಸಿದರು. ಆಡಳಿತ ಮತ್ತು ಲೆಕ್ಕಾಧಿಕಾರಿಗಳಾದ ಅನೀಲ್ ಕುಮಾರ ರವರು, ತರಬೇತಿ ಸಹಾಯಕರಾದ ಅರ್ಚನಾ ಪಾಟೀಲ್, ಅಶ್ವೀನಿ ಪೂಜಾರಿ ಸಿಬ್ಬಂಧಿಗಳಾದ ರಾಜಕುಮಾರ ಮಾಲಿಂಗ ಸುಲೋಚನ ಅಕ್ಕ, ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here