ಕಲಬುರಗಿ ಫೇÀಬ್ರವರಿ 1. ರಂದು ವಿಜಯಪೂರ ಜಿಲ್ಲೆಯ ಮುದ್ದೆಬಿಹಾಳ ತಾಲೂಕಿನ ಹಡಪದ ಸಮಾಜದ ಗುರುಪೀಠದ ಸ್ಥಳವಾದ ತಂಗಡಗಿಯಲ್ಲಿ ಹಡಪದ ಸಮಾಜದ ರಾಜ್ಯ ಮಟ್ಟದ ಜನ ಜಾಗೃತಿ ಸಮಾವೇಶ ಹಾಗೂ 1 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಸಮುದಾಯ ಭವನ ಉದ್ಘಾಟನೆ ಹಾಗೂ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತಿರುವ ಶಾಲಾ, ವಸತಿ, ವೃದ್ದಾಶ್ರಮ, ಅನಾಥಶ್ರಮದ ಕಟ್ಟಡದ ಅಡಿಗಲ್ಲು ಸಮಾರಂಭಕ್ಕೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹಾಗೂ ಅನೇಕ ಸಚಿವರು, ಶಾಸಕರು, ಹಾಗೂ ವಿವಿಧ ಮಠದ ಮಠಾಧೀಶರು ಸದರಿ ಕಾರ್ಯಕ್ರಮ ಕ್ಕೆ ಆಗಮಿಸಲಿದ್ದಾರೆ ಎಂದು ಹಡಪದ ಸಮಾಜದ ಜಿಲ್ಲಾಧ್ಯಕ್ಷರು ಹಾಗೂ ರಾಜ್ಯ ಕಾರ್ಯಧ್ಯಾಕ್ಷ ಈರಣ್ಣ ಸಿ. ಹಡಪದ ಸಣ್ಣೂರ ಅವರು ತಿಳಿಸಿದ್ದಾರೆ.
ಈ ಸಮಾವೇಶದಲ್ಲಿ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಹಡಪದ ಸಮಾಜದ ಜನರು ಹಾಗೂ ಮುಖಂಡರು, ಮಹಿಳೆಯರು ಭಾಗವಹಿಸುವರು, ಜಿಲ್ಲೆಗಳಿಂದ, ತಾಲೂಕಗಳಿಂದ, ಹೋಬಳಿಗಳಿಂದ, ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಗಳಲ್ಲಿ ಆಗಮಿಸಿ, ಈ ಸಮಾವೇಶವನ್ನು ಯಶಸ್ವಿಗೊಳಿಸಿ ಸಮಾಜದ ಒಂದು ಶಕ್ತಿ ಪ್ರದರ್ಶನ ಸರ್ಕಾರಕ್ಕೆ ತೋರಿಸಿ, ಸರ್ಕಾರದಲ್ಲಿ ಸಿಗುವ ಯೋಜನೆಗಳು, ಮೂಲಭೂತ ಸೌಕರ್ಯಗಳು, ಮೀಸಲಾತಿ ಹೀಗೆ ಹತ್ತು ಹಲವಾರು ಸೌಲತುಗಳನ್ನು ನಮ್ಮಜನಾಂಗಕ್ಕೆ ಮನೆ-ಮನೆಯ ಮುಟ್ಟುವುದಕ್ಕೆ ತಾವುಕಾರಣಿ ಭೂತರಾಗಬೇಕು ಹಾಗೂ ತಾವು ಬನ್ನಿ ತಮ್ಮವರನ್ನು ಕರೆದುಕೊಂಡು ಬಂದು ಈ ರಾಜ್ಯ ಮಟ್ಟ ಸಮಾವೇಶವನ್ನು ಯಶಸ್ವಿಗೊಳಿಸಬೇಕೇಂದು ಈರಣ್ಣ ಸಿ. ಹಡಪದ ಸಣ್ಣೂರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.