ಚಿತ್ತಾಪುರ: ವಿಧಾನಸಭಾ ಕ್ಷೇತ್ರದ ಕರದಾಳ ಗ್ರಾಮದ ಬೂತ್ ನಂ.164 & 165 ರಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನವನ್ನು ಬಿಜೆಪಿ ಮುಖಂಡರು ಕೈಗೊಂಡರು.
ಗ್ರಾಮದಲ್ಲಿ ಪಕ್ಷದ ಪರವಾಗಿ ಇರುವ ಪ್ರತಿಯೊಬ್ಬರನ್ನು ಸಂಪರ್ಕಿಸಿ ಮಿಸ್ ಕಾಲ ಮಾಡಿ, ಅವರ ಸದಸ್ಯತ್ವವನ್ನು ಪಡೆದರು ನಂತರ ಮನೆಗಳಿಗೆ ಸ್ಟಿಕರ್ ನ್ನು ಅಂಟಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ಬೂತ್ ಮಟ್ಟದ ಪದಾಧಿಕಾರಿಗಳೊಂದಿಗೆ ಸಂಪರ್ಕಿಸಿ ಕರ ಪತ್ರ ಹಂಚಿದರು.
ಯುವ ಮುಖಂಡರಾದ ವಿಠಲ ನಾಯಕ, ತಾಲ್ಲೂಕು ಉಪಾಧ್ಯಕ್ಷ ವೀರಣ್ಣ ಯಾರಿ, ಪ್ರಧಾನ ಕಾರ್ಯದರ್ಶಿ ರಾಮದಾಸ ಚವ್ಹಾಣ, ಇಂಗಳಗಿ ಶಕ್ತಿ ಕೇಂದ್ರದ ಅಧ್ಯಕ್ಷ ಸೋಮು ಚವ್ಹಾಣ, ಕರದಾಳ ಗ್ರಾಮದ ಬೂತ್ ಪ್ರಮುಖರಾದ ಶಂಭುಲಿಂಗ ವಿಶ್ವಕರ್ಮ,ಚಂದ್ರಶೇಖರ ಇಟಗಿ,ಹಣಮಯ್ಯ ಗುತ್ತೆದಾರ,ಬಸವರಾಜ ಇಂಗಳಗಿ, ಅವಿನಾಶ ವಿಶ್ವಕರ್ಮ, ಭೀಮರಾಯ ಹೊರಪೇಠ ಸೇರಿದಂತೆ ಅನೇಕರು ಇದ್ದರು.