ಯುವ ಸಾಹಿತ್ಯ ಸಮ್ಮೇಳನ: ಸ್ವಾಗತ ಸಮಿತಿಗೆ ಆವಂಟಿ ಅಧ್ಯಕ್ಷ

0
18

ಕಲಬುರಗಿ: ನಿತ್ಯ ನೂತನ ಕಾರ್ಯಕ್ರಮಗಳ ಮೂಲಕ ಜನಪ್ರಿಯತೆ ಗಳಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಮಟ್ಟದ ಪ್ರಥಮ ಯುವ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡಿರುವುದರಿಂದ ಜಿಲ್ಲೆಯ ಹೊಸ ಪೀಳಿಗೆಯಲ್ಲಿ ಹೊಸ ಉತ್ಸಾಹ ತುಂಬಿದಂತಾಗಿದೆ.
ಫೆಬ್ರವರಿ ಎರಡನೇ ವಾರದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಲಾಗಿರುವ ಒಂದು ದಿನದ ಜಿಲ್ಲಾ ಮಟ್ಟದ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಪೂರಕವಾಗಿ ರಚಿಸಲ್ಪಟ್ಟಿರುವ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಶರಣ ಚಿಂತಕ ಜೇವರ್ಗಿಯ ನೀಲಕಂಠ ಆವಂಟಿ ಸಾಹು ಅವರನ್ನು ನೇಮಕಗೊಳಿಸಿ ಅವರನ್ನು ಸತ್ಕರಿಸಿ, ಅಧಿಕೃತವಾಗಿ ಆಹ್ವಾನವನ್ನು ನೀಡಲಾಯಿತು.

ಆಹ್ವಾನ ಸ್ವೀಕರಿಸಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ನೀಲಕಂಠ ಆವಂಟಿ ಸಾಹು, ಜಿಲ್ಲೆಯಲ್ಲಿ ಅನೇಕ ಉದಯೋನ್ಮುಖ ಬರಹಗಾರರು ಇದ್ದಾರೆ. ಅವರೆಲ್ಲರನ್ನೂ ಮುಖ್ಯ ವಾಹಿನಿಗೆ ಈ ಸಮ್ಮೇಳನದ ಮೂಲಕ ತರುವ ಕಾರ್ಯವಾಗಬೇಕಿದೆ. ಸಮ್ಮೇಳನದ ಯಶಸ್ವಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಯುವಕರಿಂದ ಯುವಕರಿಗಾಗಿ ಹಮ್ಮಿಕೊಂಡಿರುವ ಈ ಯುವ ಸಾಹಿತ್ಯ ಸಮ್ಮೇಳನ, ಹೊಸ ಬರಹಗಾರರಿಗೆ ಹೊಸ ದಿಕ್ಸೂಚಿ ನೀಡುವ ಕಾರ್ಯ ಈ ಮೂಲಕ ಮಾಡಲಾಗುತ್ತದೆ ಎಂದರು.

ಪ್ರಮುಖರಾದ ಕುಪೇಂದ್ರ ಬರಗಾಲಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಬಿ.ಎಂ.ಪಾಟೀಲ ಕಲ್ಲೂರ, ಎಂ.ಎಸ್.ಪಾಟೀಲ ನರಿಬೋಳ, ವಿಜಯಕುಮಾರ ಬಿರಾದಾರ, ಶರಣಬಸಪ್ಪ ನರೂಣಿ, ರಾಜಶೇಖರ ಚೌಧರಿ, ಹೆಚ್.ಎಸ್.ಬರಗಾಲಿ, ಬಸ್ವಂತರಾಯ ಕೋಳಕೂರ, ಶಂಕರಲಿಂಗ ಗುರನಂಜಿ, ಶಿವರಾಜ ಅಂಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here