ಚಿಂಚೋಳಿ: ತಾಲ್ಲೂಕಿನ ದೇಗಲಮಡಿ ಗ್ರಾಮದಲ್ಲಿ ಹೊಲವೊಂದರಲ್ಲಿ ವಿದ್ಯುತ್ ಕಂಬ ಉರುಳಿದ ಪರಿಣಾಮ ರೈತನೋರ್ವ ಕಂಬದ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ ಘಟನೆ ಸಂಭವಿಸಿದೆ.
ಜಗನ್ನಾಥ ತಿಪ್ಪಣ್ಣ (35) ಮೃತಪಟ್ಟ ರೈತ, ಜಗನಾಥ ತಮ್ಮ ಜಮಿನಲ್ಲಿ ಇಂದು ಬೆಳೆ ವಿಕ್ಷಿಸಲು ತೆರಳಿದ ಸಂದರ್ಭದಲ್ಲಿ ಈ ಧಾರುಣ್ಯ ಘಟನೆ ನಡೆದೆ ಎನ್ನಲಾಗಿದ್ದು, ಹೊಲದಲ್ಲಿ ನಿರಂತರ ಜ್ಯೋತಿ ಯೋಜನೆಯ ಕಾಮಗಾರಿಯಲ್ಲಿ ನಿರ್ಲಕ್ಷ್ಯ ಕಾರಣದಿಂದ ಹೊಲದಲ್ಲಿರುವ ವಿದ್ಯುತ್ ಕಂಬ ಉರುಳಿದೆ ಎಂದು ತಿಳಿದುಬಂದಿದೆ.
ಘಟನೆ ಕುರಿತು ದೇಗಲಮಡಿ ಗ್ರಾಮದಲ್ಲಿ ಜೆಸ್ಕಾಂ ಕಾಮಗಾರಿಗೆಯಲ್ಲಿ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರು ಆಕ್ರೋಶ ಗೊಂಡು ಮೃತ ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಿದ್ದಾರೆ.
ಮೃತ ಜಗನಾಥ ಕುಟುಂಬದಲ್ಲಿ ಒಟ್ಟು ನಾಲ್ಕು ಜನ ಸದಸ್ಯರು ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಮಾಹಿತಿ ಪಡೆದ ಚಿಂಚೋಳಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.