ನೆರೆ ಪರಿಹಾರ ಘೋಷಣೆ: ರಾಯಚೂರಿಗೆ ಮಲತಾಯಿ ಧೋರಣೆ ಖಂಡಿಸಿ SFI ಮತ್ತು DYFI ಯಿಂದ ಪ್ರತಿಭಟನೆ

0
63

ರಾಯಚೂರು: ಜಿಲ್ಲೆಗೆ ನೆರೆ ಪರಿಹಾರ ನೀಡದಿರುವ ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ SFI ಮತ್ತು DYFI ಕಾರ್ಯಕರ್ತರು, ಕೂಡಲೇ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ನೆರೆ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಪರಿಗಣಿಸಬೇಕೆಂದು ಪ್ರತಿಭಟನೆ ನಡೆ SFI ಜಿಲ್ಲಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ಒತ್ತಾಯಿಸಿದರು.

ಇಂದು ಜಿಲ್ಲೆಯ ಸಿರವಾರ ತಾಲ್ಲೂಕಿನ ಕವಿತಾಳ ಪಟ್ಟಣದ ಅನ್ವರಿ ಕ್ರಾಸ್ ನಲ್ಲಿ (ಕನಕ ದಾಸ ವೃತ್ತದಲ್ಲಿ) ಪ್ರತಿಭಟನೆ ನಡೆಸಿದರು.

Contact Your\'s Advertisement; 9902492681

ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಅವರು ಮಳೆಯಿಂದಾಗಿ ಮತ್ತು ಕೃಷ್ಣಾ ನದಿಯ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾಗಿ ಬದುಕನ್ನು ಕಳೆದುಕೊಂಡ ಜನತೆಗೆ ಸರ್ಕಾರ ಇತ್ತಿಚೆಗೆ ಸಂತ್ರಸ್ತರ ಪರಿಹಾರ ನಿಧಿಯನ್ನು ಬಿಡುಗಡೆ ಮಾಡಿದೆ. ಆದರೆ ಇದರಲ್ಲಿ ರಾಯಚೂರು ಜಿಲ್ಲೆಯನ್ನು ಕಡೆಗಣಿಸಿದ್ದು ಇದು ಮಲತಾಯಿ ಧೋರಣೆ ನೀತಿಯಾಗಿದೆ ಇದನ್ನು ಖಂಡಿಸಿ ಹಾಗೂ ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ಜಿಲ್ಲೆ ಸೇರಿದಂತೆ ರಾಜ್ಯಕ್ಕೆ ಹೆಚ್ಚಿನ ಪರಿಹಾರವನ್ನು ಬಿಡುಗಡೆ ಮಾಡಬೇಕೆಂದು  ಅವರು ಆಗ್ರಹಿಸಿದರು.

ಈ ಸಂಧರ್ಭದಲ್ಲಿ SFI ಜಿಲ್ಲಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ಜಿಲ್ಲಾ ಉಪಾಧ್ಯಕ್ಷರಾದ ಲಿಂಗರಾಜ ಕಂದಗಲ್, DYFI ಮುಖಂಡರಾದ M.D ಶಫೀ, ಸುಲ್ತಾನ್ ಬಾಬ, ಮೌನೇಶ ಬುಳ್ಳಾಪುರ, ಅನ್ನು , ಮೌನೇಶ, ಮರಿಸ್ವಾಮಿ, ಸದ್ದಾಂ ಹುಸೇನ್‌, ಮೈಬೂಬ್, ಅಬೂಬಕರ್ ಸೇರಿದಂತೆ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here