ಶರಣರ ವಚನಗಳು ಸಾರ್ವಕಾಲಿಕ ಸತ್ಯ: ರಾಮಲಿಂಗ ನಾಟೀಕಾರ

0
16

ಕಲಬುರಗಿ: ಆಳಂದ ತಾಲೂಕಿನ ನಿಂಬರ್ಗಾದಲ್ಲಿ ಹಮ್ಮಿಕೊಂಡ ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ರಾಮಲಿಂಗ ನಾಟೀಕಾರ ಅವರು ಮಾತನಾಡುತ್ತಾ 12 ನೇ ಶತಮಾನದ ಸಮಕಾಲೀನ ಶರಣರಲ್ಲಿ ಅಂಬಿಗರ ಚೌಡಯ್ಯನವರು ಒಬ್ಬರಾಗಿದ್ದು ಸುಮಾರು 300 ಕ್ಕಿಂತ ಹೆಚ್ಚಿನ ವಚನಗಳು ರಚಿಸಿದ್ದು ಅವುಗಳು ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಪ್ರಮುಖವಾದವು ಚೌಡಯ್ಯನವರು ನೇರ ನಿಷ್ಠುರ, ಸತ್ಯವಾದ ವಚನಕಾರರು, ಅವರು ತಮ್ಮದೆಯಾದ ಹೆಸರನ್ನು ಅಂಕಿತನಾಮವಾಗಿ ಇಟ್ಟುಕೊಂಡು ದಿಟ್ಟ ವಚನಕಾರರಾಗಿದ್ದರು ಅವರ ವಚನದಲ್ಲಿ ಬಂಡಾಯ ಸಾಹಿತ್ಯ ಎದ್ದು ಕಾಣುತ್ತದೆ ಎಂದು ಹೇಳಿದರು.

ಸಮಾಜದ ಹುಟ್ಟು ಹೋರಾಟಗಾರ ಸ್ವಾಭಿಮಾನದ ಸಿಂಹ ಶ್ರೀ ವಿಠ್ಠಲ ಹೇರೂರ ಅವರು ಬೀದರ್ ನಿಂದ ಚಾಮರಾಜನಗರದ ವರೆಗೆ ಜ್ಯೋತಿ ಯಾತ್ರೆ ಮತ್ತು ನಿಜ ಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆಯ ಮುಖಾಂತರ ಸಮಾಜದ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಒಗ್ಗುಡಿಸುವ ಕಾರ್ಯ ಮಾಡಿದ ಧೀಮಂತ ನಾಯಕ ವಿಠ್ಠಲ ಹೇರೂರ ರವರ ಆಗಿದ್ದರು ಅವರ ಮಾರ್ಗದರ್ಶನ ನಮ್ಮೆಲ್ಲರಿಗೆ ದಾರಿದೀಪವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸ್ಥಳೀಯ ವೀರಕ್ತ ಮಠದ ಶಿವಲಿಂಗ ಶಿವಾಚಾರ್ಯ ರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಜೇಂದ್ರ ತೆಲೂರ, ಉಪನ್ಯಾಸಕರಾದ ಧರ್ಮರಾಜ ಜವಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನೀಲಕುಮಾರ ಗೋಳಸಾರ ನಿರೂಪಿಸಿದರು.ಗ್ರಾಮ ಪಂಚಾಯಿತಿ ಸದಸ್ಯರಾದ ದಿಗಂಬರ ಟಪ್ಪಾ, ಚಂದ್ರಕಾಂತ ಮೀಟೆಕಾರ,ಶಿವಲಿಂಗಪ್ಪ ಖರ್ಚನ ಲಾಲ್ಡೆಸಾಬ್ ಮುಲ್ಲಾ, ಪ್ರಮುಖರಾದ ಭೀಮಶಾ ಜಮಾದಾರ, ಅಮೃತ ಬಿಬ್ರಾಣಿ, ಬಾಬು ಬುಳ್ಳಾ, ಶಿವಶರಣಪ್ಪ ಟಪ್ಪಾ, ರಾಜಕುಮಾರ ಸಿಂಗೆ, ಗುಂಡಪ್ಪ ಪುಂಡುಗೋಳ, ಗುಂಡಪ್ಪ ವಿಶ್ವನಾಥ್ ಗೋಣಿ,ಸಿದ್ದಣ್ಣಾ ಬುಳ್ಳಾ, ಬಸವರಾಜ ಬುಳ್ಳಾ,ಗುಂಡಪ್ಪ ಪುಂಡುಗೋಳ ಸುಣಗಾರ, ತುಕಾರಾಮ ಬುಳ್ಳಾ ಗೋರಕನಾಥ ಪುಂಡುಗೋಳ,ನಿಂಬೆಣ್ಣಾ ಸುಣಗಾರ,ದತ್ತಪ್ಪ ಭಾಸಗಿ ಹಾಜರಿದ್ದರು.

ಸಮಾಜದ ಯುವ ಸಂಘದ ಮಲ್ಲಿಕಾರ್ಜುನ ನಾಟೀಕಾರ,ಅನೀಲ ಗೋಣಿ, ರಾಜಕುಮಾರ ಮೂಲಿಮನಿ ಮರೆಪ್ಪ ಮುಲಿಮನಿ, ಮಲ್ಲಿಕಾರ್ಜುನ ಮೂಲಿಮನಿ, ಬಸವರಾಜ ಟಪ್ಪಾ,ಹಾಲಪ್ಪ ಬುಳ್ಳಾ,ದಶರಥ ಬುಳ್ಳಾ,ನೂರಂದ ಟಿಪ್ಪಾ, ಬಸವರಾಜ ತಡಕಲ, ಅಶೋಕ ಅರ್ಜುನಗಿ, ಮಾರುತಿ ಬುಳ್ಳಾ, ಪ್ರಜ್ವಲ್ ಬೆಳಮಗಿ,ಯಲ್ಲಪ್ಪ ಭಾಸಗಿ,ಬನ್ನೆಪ್ಪ ಅತನೂರ ದಿಗಂಬರ ಮೂಲಿಮನಿ ಹಾಗೂ ಇತರೆ ಸಮಾಜದ ಮುಖಂಡರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here