ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆ ನಿವಾರಿಸಲು ಸಿಎಂ ಮಧ್ಯ ಪ್ರವೇಶಕ್ಕೆ ಆಗ್ರಹ

0
11

ಕಲಬುರಗಿ: ಬೆಂಗಳೂರಿನ ಫ್ರೀಡಂ ಪಾರ್ಕದಲ್ಲಿ ರಾಜ್ಯದ ಸುಮಾರು 35 ಸಾವರಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಾಹಯಕಿಯರು ಸತತ 9 ದಿನಗಳಿಂದ ರಾತ್ರಿ ಚಳಿಯನ್ನದೇ ಬಿಡಿಯಲ್ಲಿ. ಕುಳಿತು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದಾರೆ. ಎಂದು ಕಲಬುರಗಿ ಜಿಲ್ಲಾ ಕೊಳೆಗೇರಿ ನಿವಾಸಿಗಳ ಒಕ್ಕೂಟ ಜಿಲ್ಲಾ ಘಟಕ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ಸಿಎಂಗೆ ಮನವಿ ಸಲ್ಲಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಹೋರಾಟವು ನ್ಯಾಯಯುತವಾದ ಹೋರಾಟವಾಗಿದ್ದು, ಇವರ ಬೇಡಿಕೆಗಳನ್ನು ಈ ಕೂಡಲೇ ಮುಖ್ಯ ಮಂತ್ರಿಗಳು ಮಧ್ಯ ಪ್ರವೇಶಿಸಿ ಈಡೇರಿಸಬೇಕೆಂದು ಕಲಬುರಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ಕಾರ್ಯಕರ್ತರು ಸರಕಾರಕ್ಕೆ ಆಗ್ರಹಿಸಿದ್ದಾರೆ. ಹೋರಾಟ ನಡೆಸಲು ಹೋರಾಟಗಾರರಿಗೆ ಮೂಲ ಸೌಕರ್ಯವನ್ನು ಕಲ್ಪಿಸಿಕೊಡುವಲ್ಲಿ ತಪ್ಪು ಮಾಡಿದೆ. ರಾಜ್ಯ ಮೂಲೆ-ಮೂಲೆಗಳಿಂದ ರಾತ್ರಿ ಚಳಿ, ಎನ್ನದೇ, ನಿರಂತರವಾಗಿ ಹೋರಾಟ ಮಾಡುತ್ತಿದ್ದರು ಈ ವಿಷಯ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ ಮುಂದಿನ ದಿನಗಳಲ್ಲಿ ಈ ಸರಕಾರ ಬೆಲೆ ತೆರಬೇಕಾಗುತ್ತದೆ ಎಂದು ಸಂಘಟನೆಯು ಸರ್ಕಾರಕ್ಕೆ ಎಚ್ಚರಿಸುತ್ತದೆ.

Contact Your\'s Advertisement; 9902492681

ಇವರುಗಳ ಹೋರಾಟದಿಂದ ರಾಜ್ಯ ಅಂಗನವಾಡಿ ಕೇಂದ್ರಗಳ ಮೇಲೆ ಗಂಭೀರ ಪರಿಣಾಮ ಬಿರುತ್ತದೆ ಮಕ್ಕಳು ಮತ್ತು ಗರ್ಭಿಣಿ ತಾಯಂದಿರು, ಪೌಷ್ಠಿಕ ಆಹಾರದಿಂದ ವಂಚಿತವಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ನ್ಯಾಯಯುತವಾದ ಇವರುಗಳ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೋಡರು.

ಗೌರವಾಧ್ಯಕ್ಷ ಬಾಬುರಾವ ದಂಡಿನಕರ್, ಅಧ್ಯಕ್ಷ ಅಲ್ಲಮಪ್ರಭು ನಿಂಬರ್ಗಾ, ಕಾರ್ಯದರ್ಶಿ ವಿಳಾಸ ಸಾವಲಕರ, ಉಪಾಧ್ಯಕ್ಷ ಅನಿಕುಮಾರ ಚಕ್ರ, ಬ್ರಹ್ಮಾನಂದ ಮಿಂಚಾ, ಗಣೇಶ ಕಾಂಬಳೆ, ಸಿದ್ದರಾಮ ತೀರ್ಮಾನ್, ಶಾರದಾಬಾಯಿ ಹಿರೇಬಜಾರ, ಅಶೋಕ ರಾಠೋಡ, ಶಾಮರಾವ ಸಿಂಧೆ, ಬಸಮ್ಮ ಭೀಮಪೂರ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here