ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಕಾವಲುಗಾರರಾಗಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ

0
6

ಬೆಂಗಳೂರು: ನಮ್ಮ ಮತ ನಮ್ಮೆಲ್ಲರ ಭವಿಷ್ಯ ನಿರ್ಧರಿಸುವುದರಿಂದ ಪ್ರತಿಯೊಬ್ಬ ಪ್ರಜೆಯು ಮತ ಹಾಕುವ ಮೂಲಕಪ್ರಜಾಪ್ರಭುತ್ವದ ಕಾವಲುಗಾರರಾಗಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದರು.

ಬೆಂಗಳೂರು ಜಿಲ್ಲಾಡಳಿತದ ವತಿಯಿಂದ ಇಂದು ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಜ್ಞಾನಜ್ಯೋತಿ ಸಭಾಂಗಣದಲ್ಲಿ, ಕಾನೂನು ವ್ಯಾಸಂಗ ಮಾಡುತ್ತಿರುವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಳ್ಳಲಾದಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆಕುರಿತು ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಭಾರತದ 140 ಕೋಟಿ ಜನರು ನನ್ನ ಮತವನ್ನು ಮಾರಾಟ ಮಾಡುವುದಿಲ್ಲ, ಆತ್ಮ ಸಾಕ್ಷ್ಮಿ ಪರವಾಗಿ ಮತ ಹಾಕುತ್ತೇನೆಎಂದು ಜನಸಮುದಾಯದಲ್ಲಿ ಜನಾಂದೋಲನ ಪ್ರಾರಂಭಿಸಬೇಕು. ಹಿರಿಯ ನಾಗರೀಕರು ತಮ್ಮ ಜೀವನಾನುಭವವನ್ನು ಹಾಗೂ ಸಮಾಜದ ಆಗುಹೋಗುಗಳ ಬಗ್ಗೆ ಯುವಕರಿಗೆ ತಿಳಿಸಿ, ಸಮಾಜಕ್ಕೆ ಮಾರ್ಗದರ್ಶನ ನೀಡಿ, ಮತದಾರರಲ್ಲಿ ಕಡ್ಡಾಯವಾಗಿ ಮತ ಹಾಕುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಮತದಾನದಲ್ಲಿ ಆಸಕ್ತಿ ಇಲ್ಲದ ಪ್ರಜಾಪ್ರಭುತ್ವದಪ್ರಜೆಗಳಾಗಿದ್ದೇವೆ ನಾವು. ಗ್ತಾಮೀಣ ಪ್ರದೇಶದಲ್ಲಿ ಶೇ.70, ಶೇ.80, ಶೇ.85 ರಷ್ಟು ಮತದಾನವಾಗುತ್ತದೆ.ಆದರೆ ಬೆಂಗಳೂರಿನಲ್ಲಿ ಶೇ.30, 40 ರಷ್ಟು ಆಗುತ್ತದೆ. ಚುನಾವಣಾ ಆಯೋಗವು ವರ್ಷಪೂರ್ತಿ ಮತದಾರರ ನೊಂದಣಿ, ಮತದಾರರ ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯನ್ನು ನಿರಂತರವಾಗಿ ನಡೆಸಬೇಕು.ಇದರಿಂದ ಹೆಚ್ಚು ಸುಧಾರಣೆ ತರಬಹುದು ಎಂದರು.

ಮಾಧ್ಯಮಗಳು ಒಳ್ಳೆಯ ಪ್ರಚಾರ ಮಾಡುವುದರ ಮೂಲಕ ಮತದಾನದ ಅರಿವು ಮೂಡಿಸಬೇಕು. ಎಲ್ಲಾ ರಾಜಕೀಯ ಪಕ್ಷಗಳು ಸಹ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

ನಾವು 75 ವರ್ಷದ ಸಾಧನೆಯ ಸಿಂಹಾವಲೋಕನ ಮಾಡಿದರೆ, ಸ್ವಾತಂತ್ರ್ಯ ಬಂದಾಗ ಊಟಕ್ಕೆ ಆಹಾರವಿರಲಿಲ್ಲ.ನಾವು ವಿದೇಶದಿಂದ ಗೋಧಿ ಇನ್ನಿತರೆ ಆಹಾರ ತರಿಸುತ್ತಿದ್ದು, ಇವತ್ತು ನಾವು ವಿದೇಶಗಳಿಗೆ ಆಹಾರ ಭದ್ರತೆ ಕೊಡುತ್ತಿದ್ದೇವೆ. ಇಂದು ಪುರುಷರಿಗಿಂತೆ ಮಹಿಳೆಯರು ಅಭಿವೃದ್ಧಿಗೆ ಕೊಡುತ್ತಿರುವ ಕೊಡುಗೆ ಅಪಾರ.ನಾವು ತಂತ್ರಜಾÐನದಲ್ಲಿ, ವೈದ್ಯಕೀಯ, ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿ ಕಾರಿ ಬದಲಾವಣೆ ತಂದಿದ್ದೇವೆ.ಇದೆಲ್ಲಾ ಸಾಧನೆ ಆಗಲು ಹಾಗೂ ನಾವು ಇಷ್ಟು ಎತ್ತರಕ್ಕೆ ಬೆಳೆಯಲು ಕಾರಣ ಡಾ: ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನ. ಸಮಾನತೆಯ ಶ್ರೇಷ್ಠವಾದ ಸಂವಿಧಾನದ ಕಾರಣ ಗುಡ್ಡಗಾಡು ಪ್ರದೇಶದ ಮಹಿಳೆ ಶ್ರೀಮತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಲು ಸಾಧ್ಯವಾಯಿತು ಎಂದರು.

ಇದೇ ಸಂದರ್ಭದಲ್ಲಿ ಭಾರತ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಬೆಂಗಳೂರು ನಗರದ ಜಿಲ್ಲಾಧಿಕಾರಿ ಕೆ. ದಯಾನಂದ್ ಅವರು ಪ್ರಾಸ್ತಾವಿಕ ಮಾತನಾಡಿ, ಚುನಾವಣೆಯ ಹೊಸ್ತಿಲಲ್ಲಿರುವ ನಾವು ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ಅಗತ್ಯತೆ ಬಗ್ಗೆ ನಾವು ಪ್ರತಿಯೊಬ್ಬ ಪ್ರಜೆಗೂ ಅರಿವು ಮೂಡಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಸಚಿವರಾದ ಮುನಿರತ್ನ, ಬಿಬಿಎಂಪಿ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳಾದ ತುಷಾರ್ ಗಿರಿನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಸಂಗಪ್ಪ, ವಿಧಾನಸಭೆಯ ಕಾರ್ಯದರ್ಶಿ ಶ್ರೀಮತಿ ವಿಶಾಲಾಕ್ಷಿ, ಆಪ್ತ ಕಾರ್ಯದರ್ಶಿ ಅಮರ್ನಾಥ್, ಕಾನೂನು ಹಾಗೂ ಪದವಿ ಶಿಕ್ಷಣದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here