ಕಲಬುರಗಿ; ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕೊಳಗೇರಿ ನಿವಾಸಿಗಳ ಒಕ್ಕೂಟ ವತಿಯಿಂದ ತ್ಯಾಗಮಯಿ ಮಾತೆ ರಮಾಬಾಯಿ ಅಂಬೇಡ್ಕರ್ರವರ 125ನೇ ಜನ್ಮದಿನೋತ್ಸವ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹಿಳಾ ಮಹನಿಯರಿಗೆ ಸನ್ಮಾನಿಸಲಾಯಿತು.
ಡಾ.ಸಂಧ್ಯಾ ಎಸ್. ಕಾನೇಕರ, ಚಂದ್ರಿಕಾ ಪರಮೇಶ್ವರಿ, ಡಾ.ರೇಣುಕಾ ಕಟ್ಟಿ, ನಂದಿಕೂರ ಗ್ರಾ ಪಂ ಅಧ್ಯಕ್ಷೆ ಶ್ವೇತಾ ಡಿ. ದೊಡ್ಡಮನಿ, ಮಹಾನಗರ ಪಾಲಿಕೆ ಸದಸ್ಯರುಗಳಾದ ಕು.ರೇಣುಕಾ ಹೊಳ್ಕರ, ಲತಾ ರಾಠೋಡ, ನಿಂಗಮ್ಮ ಕಟ್ಟಿಮನಿ ಹಾಗೂ ಸಿಸ್ಟರ್ ವಸಂತಾ, ಅಲ್ಲಂಪ್ರಭು ನಿಂಬರ್ಗಾ, ವಿಕಾಸ ಸಾವರಿಕರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.