ಸಿಎಂ ಬಗ್ಗೆ ಸಿದ್ದರಾಮಯ್ಯ ಹಗುರ ಮಾತನಾಡಿದ್ದಕ್ಕೆ ತಕ್ಕ ಉತ್ತರ: ಶಾಸಕ ತೇಲ್ಕೂರ

0
1842

ಕಲಬುರಗಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಚೋರ್ ಎನ್ನುವ ಮೂಲಕ ಲಿಂಗಾಯತ ಸಮುದಾಯ ಅವಮಾನಿಸಿದ್ದಕ್ಕೆ ಬರುವ ಚುನಾವಣೆಯಲ್ಲಿ ಮತದಾರರು ಸರಿಯಾದ ಉತ್ತರ ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರರು ಆಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದ್ದಾರೆ.

ರಾಜ್ಯದಲ್ಲಿ ಅಲ್ಲಿಬಾಬಾ ಸರ್ಕಾರ ಅಲ್ಲ.‌ ಬಸವಣ್ಣನ ಸರ್ಕಾರವಿದೆ. ರಾಜ್ಯ ಕಂಡ ಕ್ರಿಯಾಶೀಲ ಹಾಗೂ ಅಭಿವೃದ್ಧಿ ಪರ ಮುಖ್ಯಮಂತ್ರಿಯಾಗಿದ್ದಾರೆ ಬಸವರಾಜ ಬೊಮ್ಮಾಯಿ.‌ ಸಿಎಂ ಬಗ್ಗೆ ಹಗುರಾಗಿ ಮಾತನಾಡುವುದನ್ನು ಜನ ಸಹಿಸೋದಿಲ್ಲ. ಪ್ರಮುಖ ವಾಗಿ ತಾವು ವಾಚ್ ಗಿಫ್ಟ್ ಹೇಗೆ ಪಡೆದಿರಿ ಹಾಗೂ ಇದಕ್ಕೆ ತಮ್ಮನ್ನು ತಾವು ಅಂದ ಹಾಗೆ ಮರಳಿ ಹೇಳಿದರೆ ಕ್ಷುಲ್ಲಕ ವೆನಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.

Contact Your\'s Advertisement; 9902492681

ತಮ್ಮ ಅವಧಿಯಲ್ಲಿ ಎಷ್ಟು ಹಿಂದೂಗಳ ಕೊಲೆಯಾದವು ಎಂಬುದು ನೆನಪಿದೆಯಾ? ಪ್ರಮಾಣಿಕ ಅಧಿಕಾರಿಗಳು ಹೇಗೆ ಬಲಿಯಾದರೆಂದು ನೆನಪಿಸಿಕೊಳ್ಳಿ. ಹೀಗಾಗಿ ಕೊಲೆಗಡುಕರ ಸರ್ಕಾರ ತಮ್ಮದಾಗಿತ್ತು. ಟೀಕಿಸುವ ಭರದಲ್ಲಿ ಏನೇನೋ ಹೇಳಬೇಡಿ. ತಮ್ಮ ಪಕ್ಷವೇ ಮನೆಯೊಂದು ಮೂರು ಬಾಗಿಲಾಗಿದೆ.‌ ಕಲಬುರಗಿಗೆ ಬಂದರೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಡಿಕೆಶಿ ಕುರಿತಾಗಿ ಒಂದು ಶಬ್ದ ಮಾತನಾಡುತ್ತಿಲ್ಲ. ಇದು ಜನರಿಗೆ ಏನು ಸಂದೇಶ ನೀಡುತ್ತೀರಿ? ಎಂದು ತೇಲ್ಕೂರ ಪ್ರಶ್ನಿಸಿದ್ದಾರೆ. ‌

ವಿರೋಧ ಪಕ್ಷದ ನಾಯಕರಾಗಿ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳ ಕುರಿತಾಗಿ ಸಲಹೆ ನೀಡಲಿ. ಸರ್ಕಾರದ ಸಾಧನೆ ಮನಸ್ಸಿಗೆ ಹಿಡಿಸದಿದ್ದರೆ ಟೀಕೆ ಮಾಡಲಿ.‌ ಅದನ್ನಬಿಟ್ಟು ಬಾಯಿಗೆ ಬಂದಂತೆ ಏನೇನೋ ಹೇಳುವುದು ಸಮಂಜಸವಲ್ಲ ಎಂದಿದ್ದಾರೆ.

ಸೇಡಂದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಾ.‌ಶರಣಪ್ರಕಾಶ ಪಾಟೀಲ್, ಈಚೆಗೆ ಪ್ರಧಾನಿ ನರೇಂದ್ರ ಮೋದಿ ಮಳಖೇಡಕ್ಕೆ ಆಗಮಿಸಿದ ಸಂದರ್ಭದಲ್ಲಿ ಶ್ರೀ ಜಯತೀರ್ಥರ ಹೆಸರು ಪ್ರಸ್ತಾಪಿಸಲಿಲ್ಲ ಎಂದಿದ್ದಾರೆ. ಸೇಡಂದಲ್ಲೇ ನಡೆದ ಸಮಾರಂಭದಲ್ಲಿಯೇ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಶಾಸಕ ಪ್ರಿಯಾಂಕ್ ಖರ್ಗೆ ಸಹ ಒಬ್ಬರ ಮಹಾತ್ಮರ ಹೆಸರು ತೆಗೆದುಕೊಂಡ್ರಾ? ತಾವು ಶಾಸಕರಾಗಿದ್ದ ಅವಧಿಯಲ್ಲಿ ಮಳಖೇಡದ ಉತ್ತರಾದಿ ಮಠ ಸೇರಿ ಸೇಡಂ ಕ್ಷೇತ್ರದ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಗೆ ಯಾವ ರೀತಿ ನಡೆದುಕೊಂಡಿದ್ದೀರಿ? ಜನ ಇನ್ನೂ ಮರೆತ್ತಿಲ್ಲ ಎಂದು ರಾಜಕುಮಾರ ಪಾಟೀಲ್ ತೇಲ್ಕೂರ ತಿರುಗೇಟು ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here