ಶಿಕ್ಷಣ ರಂಗದ ಭೀಷ್ಮ ರಾಂಪುರೆ: ಡಾ. ವಡ್ಡನಕೇರಿ

0
14

ಕಲಬುರಗಿ: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯನ್ನು ಕಟ್ಟುವುದರ ಮೂಲಕ ಸಾವಿರಾರು ಜನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಿ ಕೊಡುವ ಮೂಲಕ ಮಹದೇವಪ್ಪ ರಾಂಪುರೆ ಅವರು ಒಬ್ಬ ವ್ಯಕ್ತಿಯಾಗಿರದೇ ಶಕ್ತಿಯಾಗಿ ನಿಂತು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನು ಮಾಡುವುದರೊಂದಿಗೆ ಶಿಕ್ಷಣ ಕ್ಷೇತ್ರದ ಭೀಷ್ಮ ಎಂದು ಕಂಗೊಳಿಸಿದ್ದು ಹೆಮ್ಮೆಪಡುವ ವಿಷಯ ಎಂದು ಮುಖ್ಯ ಗ್ರಂಥ ಪಾಲಕರಾದ ಡಾ. ಮಲ್ಲಿಕಾರ್ಜುನ ವಡ್ಡನಕೇರಿ ಅವರು ನುಡಿದರು.

ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹೈದರಾಬಾದ ಕರ್ನಾಟಕ ಶಿಕ್ಷಣ ಕ್ಷೇತ್ರದ ಪಿತಾಮಹರೆನಿಸಿಕೊಂಡ ಮಹದೇವಪ್ಪಾ ರಾಂಪುರೆ ಅವರ 50ನೇ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಹೈದರಾಬಾದ ಕರ್ನಾಟಕದಂತಹ ಪ್ರದೇಶದಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಕಾನೂನು,ಪದವಿಯಂತಹ ಪದವಿ ಕೋರ್ಸ್ ಪ್ರಾರಂಭಿಸುವುದರ ಮೂಲಕ ಈ ಭಾಗದ ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣವನ್ನು  ಪಡೆದುಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟಂತಹ ಮಹದೇವಪ್ಪ ರಾಂಪುರೆ ಧೀಮಂತ ವ್ಯಕ್ತಿ.ತಮ್ಮ 35ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿ ಹೈದರಾಬಾದ್ ಕರ್ನಾಟಕದ ಪ್ರದೇಶದ ಅಜ್ಞಾನವನ್ನು ಕಳೆಯಲು ಜ್ಞಾನವೊಂದೇ ಮಾರ್ಗವೆಂದು ತಿಳಿದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಶೈಕ್ಷಣಿಕ ರಂಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ ಕೀರ್ತಿಗೆ ಭಾಜನರಾಗಿದ್ದಾರೆ ಎಂಬುದನ್ನು ನಾವು ಯಾರೂ ಮರೆಯುವಂತಿಲ್ಲ.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ  ಕಾಲೇಜಿನ ಪ್ರಾಚಾರ್ಯರಾದ ಡಾ. ಶಶಿಕಾಂತ ಮೀಸೆ ಅವರು ಮಾತನಾಡುತ್ತಾ ಸಂಸ್ಥೆ ಹಾಗೂ ಕಾಲೇಜಿನ ಕೀರ್ತಿಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯಲು ನಾವು ನೀವು ಎಲ್ಲರು ಪ್ರಯತ್ನಿಸುವುದರೊಂದಿಗೆ ಮಹಾದೇವಪ್ಪ ರಾಂಪುರೆ ಅವರು ಕಂಡ ಹಾಗೂ ಅಂದುಕೊಂಡ ಕನಸನ್ನು ನನಸು ಮಾಡುವ ಗುರುತರವಾದ ಹೊಣೆ ನಮ್ಮ ಮೇಲಿದ್ದು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸೋಣ ಎಂದರು.ಕಾರ್ಯಕ್ರಮದಲ್ಲಿ ಡಾ. ಭಾರತಿ ಹರಸುರ, ಡಾ. ಎಸ್.ಆರ್. ಹೊಟ್ಟಿ, ಪ್ರೊ.ಗೌರಿ ಪಾಟೀಲ ಅಲ್ಲದೆ ವಿವಿಧ ವಿಭಾಗದ ಮುಖ್ಯಸ್ಥರು ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡರು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here