ಕಾಳಗಿ: ಚುನಾವಣೆ ಬರುತ್ತೆ ಹೊಗುತ್ತೆ ಮಹತ್ವವಲ್ಲ, ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ, ಅಡಿಗಲ್ಲು ನಾಯಕರ ಹೆಸರು ಹೇಳುತ್ತದೆ ಎಂದು ಚಿಂಚೋಳಿ ಶಾಸಕ ಡಾ.ಅವಿನಾಶ್ ಜಾಧವ್ ಹೇಳಿದರು.
ತಾಲ್ಲೂಕು ಸಮೀಪದ ಚಿಂಚೋಳಿ ಹೆಚ್ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ವತಿಯಿಂದ 2020-21ನೇ ಸಾಲಿನ ಎಸ್.ಡಿ.ಪಿ. ಯೋಜನೆಯ ಅಡಿಯಲ್ಲಿ ಅಂದಾಜು ಮೊತ್ತ 53 ಲಕ್ಚದ ನಾಲ್ಕು ಕೋಣೆ 1 ಶೌಚಾಲಯ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣ ಮಹತ್ವದು. ಶೈಕ್ಷಣಿಕ ಗುಣಮಟ್ಟದಿಂದಲೇ ದೇಶದ ಪ್ರಗತಿ, ಅಧಿಕಾರ ಹೇಗೆ ಮಾಡಬೇಕು ಎಂಬುವುದು ಶಿಕ್ಷಣ ಕಲಿಸಿಕೊಡುತ್ತದೆ. ಈ ನಿಟ್ಟಿನಲ್ಲಿ ಚಿಂಚೋಳಿ ಹೆಚ್ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಇದರಲ್ಲಿ ಗ್ರಾಮಸ್ಥರ ಸಹಕಾರ ಮುಖ್ಯ. ಕಾಮಗಾರಿಯಲ್ಲಿ ಲೋಪದೋಶ ಕಂಡುಬಂದರೆ ಮುಲಾಜಿಲ್ಲದೆ ಅಧಿಕಾರಿಗಳಿಗೆ ದೂರು ನೀಡಬೇಕು ಎಂದು ಹೇಳಿದರು.
ಮಾಜಿ ತಾಪಂ ಅಧ್ಯಕ್ಷ ರೇವಣಸಿದ್ದಪ್ಪ ಮಾಸ್ಟರ್, ಮಲ್ಲಿನಾಥ ಪಾಟೀಲ, ಗ್ರಾಪಂ ಅಧ್ಯಕ್ಷೆ ಶರಣಮ್ಮ ಸಿದ್ರಾಮ ಟೆಂಗಳಿ, ಸುರೇಖಾ ಹೂಗೊಂಡ, ಪಿಡಿಒ ಪ್ರಿಯಾಂಕಾ, ಶಂಕರಾವ ಪಾಟೀಲ, ಭೂದಾನಿ ವಿಶ್ವನಾಥ ಮುಕರಂಬಿ, ಚಂದ್ರು ಸಿದನಾಕ, ನಾಗರಾಜ ಚಿಂಚೋಳಿ, ವಿಜಯಕುಮಾರ ಚೇಂಗಟಿ, ಅಣ್ಣರಾಯ ಸಲಗರ, ಕಾನು ಪವಾರ, ಎಸ್‍ಡಿಎಮ್‍ಸಿ ಅಧ್ಯಕ್ಷ ಬಸವರಾಜ ಹಡಪಾದ, ಅಶೋಕ ಹೂವಗೊಂಡ, ಜಗನ್ನಾಥ ತೇಲಿ, ಗುತ್ತಿಗೆದಾರ ದೇವರಾಜ ಪೂಜಾರಿ, ಸಂತೋಷ ಸಲಗರ, ಪ್ರಕಾಶ ಗಂಜಿ, ಮಾಜಿ ತಾಪಂ ಸದಸ್ಯ ವಿಶ್ವನಾಥ ಮಾರನ, ಮಹೇಂದ್ರ ಪೂಜಾರಿ, ಮಲ್ಲು ಮರಗುತ್ತಿ, ತಾಪಂ ಇಒ ರೇವಣಸಿದ್ದಪ್ಪಗೌಡ, ಪಿಆರ್‍ಇ ಎಇಇ ವಿರೇಂದ್ರಕುಮಾರ, ಬಿಇಒ ಸಿದ್ದವೀರಯ್ಯ ರುದ್ನೂರ, ಮುಖ್ಯ ಶಿಕ್ಷಕ ಹೊನ್ನಪ್ಪ ಇದ್ದರು. ಶಿಕ್ಷಕಿ ಕೋಮಲಾ ಪ್ರಾರ್ಥಿಸಿದರು. ರಮೇಶ ತೇಲಿ ನಿರೂಪಿಸಿದರು. ಮಶಾಕ್ ಪಟೇಲ ವಂದಿಸಿದರು.