ಸುರಪುರ: ನಗರದ ದೀವಳಗುಡ್ಡದಲ್ಲಿನ ಆಸ್ತಿಯೊಂದರ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ ಸಾಗರ ಬಣ) ಮುಖಂಡರು ನಗರಭೆ ಕಾರ್ಯಾಲಯದ ಮುಂದೆ ಧರಣಿ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ ಮಾತನಾಡಿ,ನಗರಸಭೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 29ರ ದೀವಳಗುಡ್ಡದಲ್ಲಿನ ಆಸ್ತಿ ಸಂಖ್ಯೆ 2-127ಕ್ಕೆ ಸಂಬಂಧಿಸಿದಂತೆ ಇದರ ಮಾಲೀಕರು ನಾಸೀರ ಎನ್ನುವವರಿದ್ದು,ನಗರಸಭೆಯ ಅಧಿಕಾರಿಗಳು ಬೇರೆಯವರ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ ಮಾಡಿ ಬೇರೆಯವರ ಹೆಸರಲ್ಲಿ ಮಾಡಿಕೊಟ್ಟಿದ್ದಾರೆ,ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಒಂದು ವೇಳೆ ನಮ್ಮ ಮನವಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಸಂಘಟನೆ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಸಂಜೆವರೆಗೂ ಧರಣಿ ನಡೆಸಿ ನಂತರ ಸ್ಥಳಕ್ಕೆ ನಗರಸಭೆ ಅಧ್ಯಕ್ಷೆ ಸುಜಾತಾ ವಿ.ಜೇವರ್ಗಿ,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ ಆಗಮಿಸಿ ಕ್ರಮ ಕೈಗೊಳ್ಳುವ ಕುರಿತು ಲಿಖಿತ ಭರವಸೆ ನೀಡಿ ಮನವಿ ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಅಲ್ಪಸಂಖ್ಯಾತರ ಘಟಕದ ಸಂಚಾಲಕ ಎಮ್.ಪಟೇಲ್,ಖಾಜಾ ಅಜ್ಮೀರ್,ಚನ್ನಬಸಪ್ಪ ತಳವಾರ,ಶೇಖರ ಮಂಗಳೂರು,ವೆಂಕಟೇಶ ದೇವಾಪುರ,ರಾಜು ಬಡಿಗೇರ,ಎಸ್.ಡಿ.ಅನ್ವರಪಾಶಾ,ಹಸನಪ್ಪ ದೇವಾಪುರ,ರಫೀಕ ಖುರೇಶಿ,ಅಬ್ದುಲ್ ಹಲೀಮು,ಮಲ್ಲಿಕಾರ್ಜುನ ಭಜಂತ್ರಿ,ಶರಣಪ್ಪ ಹೊಸ್ಮನಿ,ಯಲ್ಲಪ್ಪ,ಹಣಮಂತ ರತ್ತಾಳ,ಗುರಪ್ಪ ಮಾವಿನಮಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.