ಕಲ್ಯಾಣ ಕರ್ನಾಟಕ ಉತ್ಸವ ಯಶಸ್ಸಿಗೆ ಸಹಕರಿಸಿ; ಜನಪ್ರತಿನಿಧಿಗಳೊಂದಿಗೆ ಸಭೆ

0
25

ಕಲಬುರಗಿ; ಕಲ್ಯಾಣ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಪ್ರದೇಶದ ಕಲೆ, ಸಾಹಿತ್ಯ, ಸಂಸ್ಕøತಿ ಪ್ರತಿಬಿಂಬಿಸುವುದರ ಜೊತೆಗೆ ಪ್ರದೇಶದಲ್ಲಿ ಸಾಂಸ್ಕøತಿಕ ವಾತಾವರಣ ಸೃಷ್ಠಿಸುವ ಐತಿಹಾಸಿಕ “ಕಲ್ಯಾಣ ಕರ್ನಾಟಕ ಉತ್ಸವ” ಫೆಬ್ರವರಿ 24 ರಿಂದ 26ರ ವರೆಗೆ ಮೂರು ದಿನ ಆಯೋಜಿಸಲಾಗುತ್ತಿದ್ದು, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಉತ್ಸವ ಯಶಸ್ಸಿಗೆ ಸಹಕಾರ ನೀಡಬೇಕು ಎಂದು ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ಸಿ. ರೇವೂರ ಅವರು ಮನವಿ ಮಾಡಿದರು.

ಗುರುವಾರ ತಮ್ಮ ಕಚೇರಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಉತ್ಸವಕ್ಕೆ ಮಂಡಳಿಯಿಂದ 5 ಕೋಟಿ ರೂ. ಅನುದಾನ ಮೀಸಲಿರಿಸಿದೆ. ಇದೇ ಅನುದಾನದಲ್ಲಿ ಈ ಜನೋತ್ಸವ ಆಯೋಜಿಸಲಾಗುತ್ತಿದೆ ಎಂದರು.

Contact Your\'s Advertisement; 9902492681

ಮೂರು ದಿನಗಳ ಕಾಲ ಕಾರ್ಯಕ್ರಮಗಳು ವೈವಿಧ್ಯಮಯ ಮತ್ತು ವರ್ಣರಂಜಿತವಾಗಿಡಲು ಸ್ಥಳೀಯ ಕಲಾವಿದರ ಜೊತೆಗೆ ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕರಾದ ವಿಜಯ ಪ್ರಕಾಶ, ಸೋನು ನಿಗಮ್, ಅನುರಾಧಾ ಪೌಡ್ವಾಲ್, ಅನನ್ಯಾ ಭಟ್, ಸಲೀಮ್ ಸುಲೇಮಾನ್, ಅರ್ಜುನ ಜನ್ಯಾ ಅವರನ್ನು ಆಹ್ವಾನಿಸಲಾಗುತ್ತಿದೆ. ಜೊತೆಗೆ ಪ್ರಿನ್ಸ್ ಗ್ರೂಪ್, ಎಂಜೆ-5 ಸಮೂಹ ನೃತ್ಯ ತಂಡಗಳು ಜನರಿಗೆ ಭರಪೂರ ನೃತ್ಯದ ಮನರಂಜನೆ ನೀಡಲಿವೆ ಎಂದರು.

ಮೂರು ದಿನಗಳ ಉತ್ಸವದ ಯಶಸ್ಸಿಗೆ ಎಲ್ಲಾ ಸಿದ್ಧತೆ ಭರದಿಂದ ನಡೆದಿದೆ. ಪ್ರದೇಶದ ಇತಿಹಾಸ ಪರಿಚಯಿಸುವ ಮತ್ತು ಪ್ರತಿ ವರ್ಷ ಉತ್ಸವ ಆಯೋಜನೆಗೆ ಈ ಉತ್ಸವ ಅಡಿಪಾಯವಾಗವ ನಿಟ್ಟನಲ್ಲಿ ಕಾರ್ಯಕ್ರಮ ರೂಪಸಿಲಾಗುತ್ತಿದೆ. ಇಲ್ಲಿನ ಕಲಾ ಪ್ರತಿಭೆಗಳು ಹೊರಹೊಮ್ಮಲು ಇದು ಸಹಕಾರಿಯಾಗಲಿದೆ ಎಂದರು.

ಅಫಜಲಪೂರ ಶಾಸಕ ಎಂ.ವೈ.ಪಾಟೀಲ ಮಾತನಾಡಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಖರ್ಚು ವೆಚ್ಚ ಪಾರರ್ದಕತೆಯಿಂದ ಕೂಡಿರಬೇಕು ಎಂದರು. ಇದಕ್ಕೆ ವಿಧಾನ ಪರಿಷತ್ ಶಾಸಕ ಬಿ.ಜಿ.ಪಾಟೀಲ ಧ್ವನಿಗೂಡಿಸಿ ಕಾರ್ಯಕ್ರಮ ವೈವಿಧ್ಯಮಯವಾಗಿರುವಂತೆ ಆಯೋಜಿಸಬೇಕು. ಮೂರು ದಿನಗಳ ಕಾಲ ಶಾಲಾ-ಮಕ್ಕಳು ಆಗಮಿಸಲು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆಯೂ ಚಿಂತಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್ ಶಾಸಕ ಶಶೀಲ ಜಿ. ನಮೋಶಿ ಮಾತನಾಡಿ, ಐತಿಹಾಸಿಕ ಈ ಉತ್ಸವದಲ್ಲಿ ಕಲ್ಯಾಣ ಕರ್ನಾಟಕ ಇತಿಹಾಸದ ಬಗ್ಗೆ ಕಲ್ಯಾಣ ಕರ್ನಾಟಕ ಇತಿಹಾಸ ರಚನಾ ಸಮಿತಿಯು ಪುಸ್ತಕ ಹೊರತಂದಿದ್ದು, ಅದನ್ನು ಮರು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಬೇಕು. ಉತ್ಸವ ಯಶಸ್ಸಿಗೆ ವಿವಿಧ ಇತಿಹಾಸ, ಕಲೆ, ಸಾಹಿತ್ಯ ಕ್ಷೇತ್ರದ ತಜ್ಞರನ್ನು ಆಹ್ವಾನಿಸಿ ಸಲಹೆ ಪಡೆಯಬೇಕೆಂದರು.

ಕಲಬುರಗಿ ಬ್ರ್ಯಾಂಡ್ ನಿರ್ಮಾಣಕ್ಕೆ ಸರ್ವ ಪ್ರಯತ್ನ: ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಅನಿರುದ್ಧ ಶ್ರವಣ ಪಿ. ಮಾತನಾಡಿ ಪ್ರದೇಶದಲ್ಲಿ “ಹಂಪಿ ಉತ್ಸವ” ತುಂಬಾ ಖ್ಯಾತಿ ಹೊಂದಿದೆ. ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸಲು ತುದಿಗಾಲಿನ ಮೇಲೆ ನಿಂತಿರುತ್ತಾರೆ. ಪಕ್ಕದ ಬೀದರನಲ್ಲಿಯೂ ಆಗಾಗ “ಬೀದರ ಉತ್ಸವ” ನಡೆಯುತ್ತಿರುವುದರಿಂದ ಅಲ್ಲಿಯೂ ಸಾಂಸ್ಕøತಿಕ ವಾತಾವರಣ ಮೂಡಿದೆ. ಇದೇ ಮಾದರಿಯಲ್ಲಿ ಕಲಬುರಗಿ ಬ್ರ್ಯಾಂಡ್‍ನಡಿ ಇಲ್ಲಿಯೂ ಸಾಂಸ್ಕøತಿಕ ವಾತಾವರಣ ನಿರ್ಮಿಸುವ ಉದ್ದೇಶದಿಂದ ಈ ಉತ್ಸವವನ್ನು ಅರ್ಥಪೂರ್ಣವಾಗಿ ಸಂಘಟಿಸಲು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಉತ್ಸವ ಸಂಬಂಧ ಈಗಾಗಲೆ ಅಧಿಕಾರಿಗಳ 20 ಸಮಿತಿ ರಚಿಸಿದ್ದು, ಸಿದ್ಧತೆ ಆರಂಭಗೊಂಡಿದೆ. ಬಹುತೇಕ ಕಲಾವಿದರ ಆಯ್ಕೆ ಅಂತಿಮವಾಗಿದೆ. ಮುಖ್ಯ ವೇದಿಕೆ ಸೇರಿ ಐದು ವೇದಿಕೆಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ದಿನವು ವರ್ಣರಂಜಿತವಾಗಿರಲು ಮತ್ತು ಜನರ ಮನಸ್ಸನ್ನು ಹಾಗೇ ಹಿಡಿದಿಟ್ಟುಕೊಳ್ಳಲು ಖ್ಯಾತನಾಮ ಕಲಾವಿದರ ಕಾರ್ಯಕ್ರಮ ರೂಪಿಸಿದೆ. ಉತ್ಸವಕ್ಕೆ ಬರುವ ಸಾರ್ವಜನಿಕÀರಿಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಮಕ್ಕಳ ಹಬ್ಬ, ಮಹಿಳಾ ಉತ್ಸವ, ಹೆಲಿರೈಡ್, ಹಾಟ್ ಏರ್ ಬಲೂನ್, ಖಾದ್ಯ ಮೇಳ, ಪುಸ್ತಕ ಮತ್ತು ವಸ್ತು ಪ್ರದರ್ಶನ, ಚಿತ್ರ ಸಂತೆ, ಮತ್ಸ್ಯ ಮೇಳ, ಕೃಷಿ ಮೇಳ ಉತ್ಸವಕ್ಕೆ ಹೊಸ ಕಳೆ ತರಲಿವೆ ಎಂದರು.

ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ಮಂಡಳಿಯ ಜಂಟಿ ಕಾರ್ಯದರ್ಶಿ ಪ್ರವೀಣ ಪ್ರಿಯಾ, ಹಣಕಾಸು ನಿಯಂತ್ರಕಿ ಅಕ್ಕಮಹಾದೇವಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here