ಸುರಪುರ: ಕೌಶಲ್ಯಾಭಿವೃದ್ಧಿ, ಉದ್ಯಮಶೀ¯ತೆ ಹಾಗೂ ಜೀವನೋಪಾಯ ಇಲಾಖೆ, ಬೇಂಗಳೂರು ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಯಾದಗಿರಿ ಇವರ ಸಹಯೋಗದಲ್ಲಿ 2022-23ನೇ ಸಾಲಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಸವಪ್ರಭು ವಿದ್ಯಾವರ್ಧಕ ಸಂಸ್ಥೆ (ರಿ), ರಂಗಂÀಪೇಟೆಯಲ್ಲಿ, ಹಮ್ಮಿಕೋಂಡಿದ್ದ ಸಿ.ಎಮ್.P.ÉP.Éವಾಯ್‍ನ ಅಭ್ಯಾರ್ಥಿಗಳಿಗೆ ಭಾವಿ ಉದ್ಯಮಶೀಲ ಅಭ್ಯಾರ್ಥಿಗಳಿಗೆ 3 ದಿನಗಳ ಉದ್ಯಮಶೀಲತಾ ಪ್ರೇರಣಾ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮವನ್ನು ಕೆ ನಾರಾಯಣ್ ನಾಯಕ ಲೀಡ್ ಡಿಸ್ಟ್ರಿಕ್ಟ್ ಮ್ಯಾನೆಜರ್, ಎಸ್ ಬಿ ಐ ಬ್ಯಾಂಕ, ಯಾದಗಿರಿ. ಅವರು ಉದ್ಘಾಟಿಸಿ ಮಾತನಾಡುತ್ತ, ಸಿ.ಎಮ್.P.ÉP.Éವಾಯ್‍ನ ಅಭ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಕಾರ್ಯಕ್ರಮ ಉದ್ಯಮ ಮಾಡಲು ಸರ್ಕಾರದಿಂದ ಅನೇಕ ಯೋಜನೆಗಳು ಇರುತ್ತವೆ ನೀವು ಸರಿಯಾದ ಆಯ್ಕೆಗಳನ್ನು ಮಾಡಿಕೊಂಡು ಆ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು ಮತ್ತು ಬ್ಯಾಂಕಿನಲ್ಲಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾಹಿತಿ ಮತ್ತು ವ್ಯವಹರಗಳ ಬಗ್ಗೆ ತಿಳಿಸಿದರು.
ಪ್ರಕಾಶ ಅಂಗಡಿ ಬಸವಪ್ರಭು ವಿದ್ಯಾವರ್ಧಕ ಸಂಸ್ಥೆ ರಂಗಂಪೇಟೆ ಇವರು ತಮ್ಮ ಅಧ್ಯಕ್ಷ ನುಡಿಯಲ್ಲಿ ಮಾತನಾಡಿ ನೀವು 3 ದಿನಗಳ ಅವಧಿಯಲ್ಲಿ ಸಾಕಷ್ಡು ವಿಷಯಗಳು ಇರುತ್ತವೆ 3 ದಿನಗಳ ಅವಧಿಯ ತರಬೇತಿಯಲ್ಲಿ ಸಾಧನಾ ಪ್ರೇರಣಾ ತರಬೇತಿ ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ ಮತ್ತು ಎಲ್ಲವನ್ನು ಅಳವಡಿಸಿಕೊಂಡು ಉದ್ಯಮಿಯಾಗಿ ಉದ್ಯೋಗ ನೀಡಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಶಾಂತಯ್ಯ ಎಚ್ ಫೂಜಾರಿ ಸಿಡಾಕ್ ತರಬೇತುದಾರರು, ಯಾದಗಿರಿ. ಅವರು ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ಮಾಹಿತಿ, ಉದ್ದಿಮೆಯನ್ನು ಆಯ್ಕೆ ಮಾಡುವ ವಿಧಾನ, ಯೋಜನಾ ವರದಿ ತಯಾರಿಕೆ, ಮಾರುಕಟ್ಟೆ ಸಮೀಕ್ಷೆ ಮಾಡುವ ವಿಧಾನ ಬ್ಯಾಂಕ್ ವ್ಯವಹಾರಗಳು, ಉದ್ಯಮ ಸ್ಥಾಪನೆಗೆ ಇರುವ ಸಾಲ ಸೌಲಭ್ಯಗಳು ಮತ್ತು ಇತರ ಸಂಬಂಧಪಟ್ಟ ವಿಷಯಗಳ ಬಗ್ಗೆ ತರಬೇತಿ ನೀಡಲಾಗುವದು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಗಪ್ಪ ವಾಲಿ, ಆರ್ಥಿಕ ಸಾಕ್ಷಾರತೆ ಸಲಹೆಯಗಾರರು, ಬ್ಯಾಂಕ್, ಎಸ್.ಬಿ.ಐ, ಯಾದಗಿರಿ ಅವರು ಉದ್ಯಮಕ್ಕೆ ಸಂಭಂದಿಸಿದ ಸಾಲ ಸೌಲಭ್ಯಗಳ ಮತ್ತು ಬ್ಯಾಂಕಿನ ವ್ಯವಹಾರದ ¨ಗ್ಗೆÀ ಮಾಹಿತಿ ನಿಡಿದರು. ಸಮಾರಂಭದಲ್ಲಿ ಶಿವಶರಣಪ್ಪ ಹೆಡಗಿನಾಳ ಸಮಾಜ ಸೇವಕರು, ಅಮೀರ ಪಟೇಲ ಲೀಡ್ ಬ್ಯಾಂಕ್ ಸಿಬ್ಬಂದಿ ಮತ್ತು ನಾಗರಾಜ ಸಂಪನ್ಮೂಲ ವ್ಯಕ್ತಿ ರಾಯಚೂರು ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದರು ಮತ್ತು ಶಾಂತಯ್ಯ ಎಚ್ ಪೂಜಾರಿ ತರಬೇತಿದಾರರು, ಸಿಡಾಕ್, ಯಾದಗಿರಿ ಇವರು ಸ್ವಾಗತಿಸಿ ಮತ್ತು ಕಾರ್ಯಕ್ರಮ ನಿರೂಪಣೆ ಮಾಡಿದರು.