ಕಲಬುರಗಿ: ಭಾಷೆ ಎಲ್ಲ ವಿಷಯಗಳಎಂದ ತಾಯಿ ಇದ್ದಂತೆ ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ನಿಷ್ಕಾಳಜಿ ಮಾಡಬಾರದು.ಹೀಗಾಗಿ ಕನ್ನಡ ಭಾಷೆಯನ್ನು ನಿಖರವಾಗಿ ಅಧ್ಯಯನ ಮಾಡಿ ಹೆಚ್ಚು ಅಂಕ ಪಡೆಯಲು ಮುಂದಾಗಬೇಕು ಎಂದು ಡಿಡಿಪಿಯು ಶಿವಶರಣಪ್ಪ ಮುಳೇಗಾಂವ ಹೇಳಿದರು.
ರೇಣುಕಾ ಪ್ರಕಾಶನ ಕಲಬುರಗಿ ಹಾಗೂ ಆರ್ ಜೆ ಪದವಿ ಪೂರ್ವ ವಿಜ್ಞಾನ ಕಾಲೇಜು, ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮ ಪಿಯುಸಿ ಕನ್ನಡ ಭಾಷೆಯ ಹೊಸ ಮಾದರಿ ಪ್ರಶ್ನೋತ್ತರ ಕನ್ನಡ ಕೈಪಿಡಿ ಬಿಡುಗಡೆ ಸಮಾರಂಭದಲ್ಲಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಅರುಣ್ ಕುಮಾರ ಪಾಟೀಲ ಅವರು ಮಾತನಾಡುತ್ತ ವಿಜ್ಞಾನ ವಿದ್ಯಾರ್ಥಿಗಳು ಕನ್ನಡ ಭಾಷೆ ಗೆ ಹೆಚ್ಚು ಗಮನ ಕೊಡದೆ ಅನುತ್ತೀರ್ಣರಾಗುತ್ತಿದ್ದಾರೆ ಅದನ್ನು ಗಮನದಲ್ಲಿಟ್ಟುಕೊಂಡು ನಿರಗುಡಿ ಅವರು ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಯನ್ನು ಹೊಂದಿರುವ ಕನ್ನಡ ಕಿರು ಕೈಪಿಡಿ ನೀಡಿದ್ದು ಉತ್ತಮವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ ಪ್ರಲ್ಹಾದ ಬುರಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಭಾಗದ ಮಕ್ಕಳು ಪರೀಕ್ಷೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂಕಗಳು ಪಡೆದುಕೊಳ್ಳಲಿ ಈ ಹೊಸ ಮಾದರಿ ಪ್ರಶ್ನೋತ್ತರ ಸೂಚಿ ಕನ್ನಡ ಕೈಪಿಡಿ ಪುಸ್ತಕ ಉತ್ತಮವಾಗಿದೆ ಇದನ್ನು ಬಳಸಿ ಎಂದು ಹೇಳಿದರು. ದೇವಿದಾಸ್ ಪವಾರ್ ಅವರು ಮಾದರಿ ಪ್ರಶ್ನೋತ್ತರ ಸೂಚಿ ಕನ್ನಡ ಕೈಪಿಡಿ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಿಶಾ ಸಂಸ್ಥೆಯ ಅಧ್ಯಕ್ಷರಾದ ಶಿವಾನಂದ ಖಜೂರಿ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕೈಪಿಡಿ ಇದರ ಸದುಪಯೋಗ ಪಡೆದುಕೊಂಡು ಪರೀಕ್ಷೆ ಬರೆಯಿರಿ ಎಂದರು. ಕಾರ್ಯಕ್ರಮದ ವೇದಿಕೆಯಲ್ಲಿ, ಪ್ರೊ ಬಿ.ಎಸ್ ಮಾಲಿಪಾಟೀಲ್, ಮಲ್ಲೇಶಿ ನಾಟೀಕರ, ಡಾ ಚಿ ಸಿ ನಿಂಗಣ್ಣ,ಚೇತನಕುಮಾರ ಗಾಂಗಜೀ ಇದ್ದರು.
ಕಾರ್ಯಕ್ರಮ ನಿರೂಪಣೆ ಮಳೇಂದ್ರ ಹಿರೇಮಠ ಮಾಡಿದರು. ಸಂಚಿಕೆಯ ಸಂಪಾದಕರಾದ ಬಿ ಎಚ್ ನಿರಗುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾರ್ಥಿನಿ ಸೌಜನ್ಯ ಜೋಶಿ ಪ್ರಾರ್ಥನೆ ಮಾಡಿದರು.ಕೇದಾರ ದೀಕ್ಷಿತ್ ವಂದನೆ ಮಾಡಿದರು. ಕಾರ್ಯಕ್ರಮದಲ್ಲಿ ಡಾ ಮಹಾದೇವ ಪೂಜಾರಿ, ವಿಜಯಕುಮಾರ ರೋಣದ, ರಮೇಶ್ ಬಡಿಗೇರ, ಶರಣಗೌಡ ಪಾಟೀಲ, ಸುಲೋಚನಾ ಪಾಟೀಲ,ಅನೇಕರು ಇದ್ದರೂ. ಕಾರ್ಯಕ್ರಮದಲ್ಲಿ ಕಾಲೇಜಿನ ಮಕ್ಕಳು ಭಾಗವಹಿದರು.