ಧ್ಯಾನದ ಪ್ರತಿಫಲನ `ಹೈಕು’ ಕಾವ್ಯ : ಮಹಿಪಾಲರೆಡ್ಡಿ

0
34

ಗೋಕಾಕ: ಪುಟ್ಟ ಪುಟ್ಟ ಸಾಲುಗಳಿಂದ ಇಡೀ ಜಗತ್ತಿನ ಸಾಹಿತ್ಯಾಸಕ್ತರ ಮನಸ್ಸನ್ನು ಸೂರೆಗೊಂಡಿದ್ದು ಹೈಕು. ಇದು ಕೇವಲ ಕವಿತೆಯಲ್ಲ. ಧ್ಯಾನದ ಪ್ರತಿಫಲನ. ಅಪೂರ್ವ ಬದುಕಿನ ಜಂಜಾಟಗಳ ನಡುವೆಯೂ ಪ್ರೇಮೋನ್ಮಾದದ ಮೋಡಿ ಎಂದು ಕಲಬುರಗಿಯ ಹಿರಿಯ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಸೇಡಂ ಹೇಳಿದರು.

ಇಲ್ಲಿಯ ಸಿರಿಗನ್ನಡ ಮಹಿಳಾ ರಾಜ್ಯವೇದಿಕೆ ಆಶ್ರಯದಲ್ಲಿ ಅಮ್ಮಾಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕವಿ ಈಶ್ವರ ಮಮದಾಪೂರ ಅವರ ಹೈಕು ಕೃತಿ `ದಿಗಂತದ ಅಪ್ಪುಗೆ’ ಕುರಿತು ಮಾತನಾಡಿದ ಅವರು, ಕಿರಿದುದಲ್ಲಿ ಹಿರಿದನ್ನು ಹೇಳುವ ಹೈಕುಗಳು ಇಂದು ಬಲು ಜನಪ್ರಿಯ ಪ್ರಕಾರವಾಗಿದೆ. ಧ್ಯಾನ ಮತ್ತು ತಪದಿಂದ ಮಾತ್ರ ಅತ್ಯುತ್ತಮ ಹೈಕುಗಳನ್ನು ನೀಡಲು ಸಾಧ್ಯವಿದ್ದು, ಕವಿ ಈಶ್ವರ ಮಮದಾಪೂರ ಅವರು ಅತ್ಯುತ್ತಮ ಹೈಕುಗಳನ್ನು `ದಿಗಂತದ ಅಪ್ಪುಗೆ’ ಕೃತಿಯ ಮೂಲಕ ನೀಡಿದ್ದಾರೆ ಎಂದರು.

Contact Your\'s Advertisement; 9902492681

ಹೈಕು ನಿಯಮಗಳ ಜೊತೆಗೆ, ಧಾನಸ್ಥ ಸ್ಥಿತಿಯನ್ನು ಬಿಂಬಿಸುವ ಪ್ರಕಾರ. ಕವಿ ತನ್ನದೆಲ್ಲ ಅಹಂ ಕಳಚಿಟ್ಟು ಬಯಲಿನಲ್ಲಿ ಬಯಲಾಗಿ, ಆಧ್ಯಾತ್ಮ ಸ್ಥಿತಿಯನ್ನು ಬಿಂಬಿಸುವ ರೀತಿಯ ತಾದ್ಯಾತ್ಮತೆ ಇಲ್ಲಿ ಬೇಕು. ಮೊದಲ ಸಾಲಿನಲ್ಲಿ ವಿಷಯವನ್ನು ಹೇಳುತ್ತ, ಎರಡನೇ ಸಾಲಿನಲ್ಲಿ ಅದನ್ನು ವಿಸ್ತರಿಸುತ್ತಾ, ಕೊನೆಯ ಸಾಲಿನಲ್ಲಿ ಓದುಗನಿಗೆ ಒಂದು ಅಚ್ಚರಿ ಕಾದಿರಿಸುವುದರ ಜೊತೆಗೇ ಆತನಿಗೆ ಆ ಧ್ಯಾನಸ್ಥ ಸ್ಥಿತಿ ಒದಗುವಂತೆ ಮಾಡುವುದು ಹಾಯ್ಕುವಿನ ಗುಣ ಲಕ್ಷಣವಾಗಿದೆ ಎಂದ ಮಹಿಪಾಲರೆಡ್ಡಿ ಸೇಡಂ ಅವರು, ಆಸಕ್ತಿ, ಧ್ಯಾನ, ತಾಳ್ಮೆಯ ಅಧ್ಯಯನದಿಂದ ಮಾತ್ರ ಅತ್ಯುತ್ತಮ ಹೈಕುಗಳನ್ನು ನೀಡಲು ಸಾಧ್ಯವಿದೆ. ಬರೆದುದೆಲ್ಲವೂ ಹೈಕುಗಳಾಗುವುದಿಲ್ಲ. ಕೇವಲ ಅಕ್ಷರಗಳಿಗೆ ಜೋತು ಬೀಳದೆ ಧ್ವನಿಸುವ ಮತ್ತು ಭಾವನೆಗಳಿಗೆ ಬೆಳಕು ನೀಡುವ ಹೈಕುಗಳ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಕವಿ ಮಮದಾಪುರ ಅವರ `ದಿಗಂತದ ಅಪ್ಪುಗೆ’ ಒಂದು ಅತ್ಯುತ್ತಮ ಕೃತಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಶ್ರೀಮತಿ ರಜನಿ ಜೀರಗ್ಯಾಳÀ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಪೆÇ್ರ.ಚಂದ್ರಶೇಖರ ಅಕ್ಕಿ, ಸ್ತ್ರೀರೋಗ ತಜ್ಞರಾದ ಡಾ.ಅಶೋಕ ಜೀರಗ್ಯಾಳ, ಹೈಕು ಕವಿ ಈಶ್ವರ ಮಮದಾಪೂರ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ ಸಾಹಿತಿ ಮಹಿಪಾಲರೆಡ್ಡಿ ಸೇಡಂ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ನ್ಯಾಯವಾದಿ ಶ್ರೀಮತಿ ಸಂಗೀತಾ ಬನ್ನೂರ ಸ್ವಾಗತಿಸಿದರು. ಶೈಲಾ ಕೊಕ್ಕರಿ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಿ ಪಾಟೀಲ್ ವಂದಿಸಿದರು. ಕಾರ್ಯಕ್ರಮದಲ್ಲಿ ರಾಮದುರ್ಗ ಪತ್ರಕರ್ತ ಪಡೆಪ್ಪ ಮನಿಹಾಳ, ಜಯಾ ಚುನುಮರಿ, ಸುಧಾ ಮಠಪತಿ, ಸುಗಂಧಾ ಡಂಬಳ, ಯರಗಟ್ಟಿ ಟೀಚರ್, ಪೂರ್ವಿ ಕಿಶೋರ್, ಪ್ರೇಮಾ ಜಕ್ಕನ್ನವರ, ಶೈಲಾ ಕೊಟಬಾಗಿ, ಡಾ. ವಿದ್ಯಾ ರೆಡ್ಡಿ, ಡಾ.ಜಯಾನಂದ ಮಾದರ, ಅಜ್ಜಪ್ಪ ಬಿರಡಿ, ಮೆಹಬೂಬ ಬಳಗಾರ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here