ನಿಸ್ವಾರ್ಥ ಸಮಾಜ ಸೇವಕರು ಪ್ರಸ್ತುತ ಸಮಾಜಕ್ಕೆ ಅವಶ್ಯಕ

0
86

ಕಲಬುರಗಿ: ಯಾವುದೇಒಬ್ಬ ವ್ಯಕ್ತಿ ಸ್ವಾರ್ಥಜೀವನ ಸಾಗಿಸಿದರೆ ಅಂತಹ ಬದುಕಿಗೆಅರ್ಥವಿಲ್ಲ. ಸಮಾಜದ ಒಳಿತಿಗೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುವ ಮೂಲಕ ಸತ್ತುಇದ್ದವರಾಗಬೇಕು. ಅಂತಹ ವ್ಯಕ್ತಿತ್ವವುಳ್ಳ ವ್ಕತಿಯು ನಿಜವಾಗಿಯೂ ಶ್ರೇಷ್ಠರಾಗಿದ್ದು, ಅಂತವರು ಪ್ರಸ್ತುತ ಸಮಾಜಕ್ಕೆತುಂಬಾಅವಶ್ಯಕತೆಯಿದ್ದಾರೆಎಂದುಬಿದ್ದಾಪೂರ ಕಾಲನಿಯಅಕ್ಕಮಹಾದೇವಿ ಆಶ್ರಮ ಪೂಜ್ಯ ಪ್ರಭುಶ್ರೀ ತಾಯಿಮಾರ್ಮಿಕವಾಗಿ ಹೇಳಿದರು.

ಆಳಂದ ತಾಲೂಕಿನಗುಂಜ ಬಬಲಾದಗ್ರಾಮದ ಹಿರಿಯ ಮುಖಂಡ, ಸಮಾಜ ಸೇವಕಬಸವಂತರಾವ ಸಿ.ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೋತ್ಸವ ಪ್ರಯುಕ್ತ‘ಪಾಟೀಲ ಪರಿವಾರಗುಂಜ ಬಬಲಾದ’ ಮತ್ತು ‘ಬಸವೇಶ್ವರ ಸಮಾಜ ಸೇವಾ ಬಳಗ’ ವತಿಯಿಂದನಗರದ ಶ್ರೀ ಮಲ್ಲಿನಾಥ ಮಹಾರಾಜ ಶಾಲೆ, ಜ್ಞಾನಚಿಗುರುಟ್ಯುಟೋರಿಯಲ್ಸ್‍ನಲ್ಲಿ ಸೋಮವಾರ ಸಂಜೆಜರುಗಿದ “ನುಡಿ ನಮನ, ಶರಣ ಸಂಗಮ ಮತ್ತು ವಿವಿಧಕ್ಷೇತ್ರದ ಸಾಧಕರಿಗೆ ‘ಬಸವ ರತ್ನ’ ಪ್ರಶಸ್ತಿ ಪ್ರದಾನಸಮಾರಂಭ”ದಲ್ಲಿಅವರು ಆಶೀರ್ವಚನ ನೀಡುತ್ತಿದ್ದರು.

Contact Your\'s Advertisement; 9902492681

ಸಮಾರಂಭ ಉದ್ಘಾಟಿಸಿ ಮಾತನಾಡಿದಪುಸ್ತಕ ಪ್ರಕಾಶಕ ಹಾಗೂ ಶ್ರೀ ಸಿದ್ದಲಿಂಗೇಶ್ವರ ಬುಕ್ ಮಾಲ್ ಮುಖ್ಯಸ್ಥ ಬಸವರಾಜಕೊನೇಕ್, ಲಿಂ.ಬಸವಂತರಾವಸಿ.ಪಾಟೀಲ ಅವರ ಬಹುಮುಖ ಕೊಡುಗೆಅನನ್ಯವಾಗಿದೆ. ಇಡೀತಮ್ಮಜೀವನದುದ್ದಕ್ಕೂ ಪರೋಪಕಾರಿಯಾಗಿ ಬದುಕಿ ಸಮಾಜಕ್ಕೆಆದರ್ಶರಾಗಿದ್ದಾರೆ. ಸಮಾಜ ಸೇವಕ, ಶಿಕ್ಷಣ ಪ್ರೇಮಿ, ನಾಟಿ ವೈದ್ಯ, ಕೃಷಿ ಕಾಯಕಯೋಗಿ, ಹವ್ಯಾಸಿ ಚಿತ್ರಕಲಾವಿದರಾಗಿ ಸಮಾಜಕ್ಕೆ ಬಹುಮುಖ ಕೊಡುಗೆ ನೀಡಿದ್ದಾರೆ. ಅವರಲ್ಲಿರುವ ಬಡವ, ಅಸಹಾಯಕರ ಬಗ್ಗೆ ಕಾಳಜಿ, ಸಹಾಯ ಸ್ಮರಣೀಯವಾಗಿದೆ. ಇಂತಹಅಪರೂಪದ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಬೇಕಾಗಿದೆಎಂದರು.

ಶರಣ ಸಂಗಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಶರಣಚಿಂತಕ ಸಂತೋಷ ಹೂಗಾರ, ವಚನಗಳ ಅಧ್ಯಯನ, ಅಳವಡಿಕೆ ಅಗತ್ಯ. ಜಗತ್ತಿನ ಪ್ರತಿಯೊಂದು ಸಮಸ್ಯೆಗಳಿಗೆ ಶರಣತತ್ವದಲ್ಲಿ ಪರಿಹಾರವಿದೆ. ಮೂಡನಂಬಿಕೆ, ಕಂದಾಚಾರ, ಅಂಧಶೃದ್ಧೆಗಳಿಂದ ಹೊರಬನ್ನಿ. ವೈಚಾರಿಕತೆ ರೂಡಿಸಿಕೊಳ್ಳಬೇಕು. ನೈತಿಕತೆಯುಕ್ತ ಶಿಕ್ಷಣ ಪ್ರಸ್ತುತ ಹೆಚ್ಚು ಅಗತ್ಯವಾಗಿದೆ. ಬಸವಾದಿ ಶರಣರಕೊಡುಗೆ ಅವಿಸ್ಮರಣೀಯವಾಗಿದೆಎಂದು ವಚನಗಳ ಮೂಲಕ ವಿವರಿಸಿದರು.

ಸಮಾರಂಭದಲ್ಲಿ ಬಳಗದ ಅಧ್ಯಕ್ಷಎಚ್.ಬಿ.ಪಾಟೀಲ, ಉಪಾಧ್ಯಕ್ಷ ನರಸಪ್ಪ ಬಿರಾದಾರದೇಗಾಂವ, ಕಾರ್ಯದರ್ಶಿ ರಾಜಶೇಖರ ಬಿ.ಮರಡಿ, ಸಂಚಾಲಕ ವೀರೇಶ ಬೋಳಶೆಟ್ಟಿ ನರೋಣಾ, ಸಹ-ಸಂಚಾಲಕ ಶಿವಕಾಂತ ಚಿಮ್ಮಾ, ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರಾದ ಡಾ. ಸುನೀಲ ಕುಮಾರ ಎಚ್. ವಂಟಿ, ಸಂಜೀವ ಕುಮಾರ ಶೆಟ್ಟಿ, ಸಾಗರ(ಮಲ್ಲಿಕಾರ್ಜುನ) ಜಿ.ಬಂಗರಗಿ, ಚಂದ್ರಕಾಂತ ಬಿರಾದಾರ, ಸಂಗಮೇಶ್ವರ ಸರಡಗಿ, ಪ್ರಭುಲಿಂಗ ಮೂಲಗೆ, ಶಿವಯೋಗಪ್ಪ ಬಿರಾದಾರ, ಭೀಮಾಶಂಕರಘತ್ತರಗಿ, ಶಿವಕುಮಾರ ಮುತ್ತಾ ಸೇರಿದಂತೆಅನೇಕರು ಭಾಗವಹಿಸಿದ್ದರು.

ವಿವಿಧಕ್ಷೇತ್ರದ ಸಾಧಕರಾದ ನಿಂಗಪ್ಪಸಿ.ಮಂಗೊಂಡಿ(ಶಿಕ್ಷಣ), ಕಾಶಿನಾಥ ಚೇಂಗಟಿ(ಕೃಷಿ), ಕೇದಾರಕುಲಕರ್ಣಿ(ಸಮಾಜ ಸೇವೆ), ಡಾ.ರೆಹಮಾನ ಪಟೇಲ್(ಚಿತ್ರಕಲೆ) ಮತ್ತುರಾಜಕುಮಾರಜಾಧವ(ಆರ್ಯುರ್ವೇದ) ಅವರಿಗೆ ‘ಬಸವ ರತ್ನ’ ಪ್ರಶಸ್ತಿ ನೀಡಿಗೌರವಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here