ಲಿಂಗಾಯತ ಮಹಾ ಅಧಿವೇಶನಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬನ್ನಿ

0
6

ಭಾಲ್ಕಿ: ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ಎಲ್ಲಾ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಬಸವಕಲ್ಯಾಣದಲ್ಲಿ ಮಾರ್ಚ 04 ಮತ್ತು 05 ರಂದು ನಡೆಯುವ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನದ ಪ್ರಚಾರಕ್ಕಾಗಿ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯಸಾನಿಧ್ಯದಲ್ಲಿ ಸಭೆಯನ್ನು ನಡೆಸಲಾಯಿತು.

ಸಾನಿಧ್ಯವಹಿಸಿದ ಪೂಜ್ಯರು, ಬಸವಕಲ್ಯಾಣ ಬಸವಾದಿ ಶರಣರು ನಡೆದಾಡಿದ ಕ್ರಾಂತಿಭೂಮಿಯಾಗಿದೆ. ಶರಣರ ಅನುಭವಮಂಟಪದಲ್ಲಿ ಹುಟ್ಟಿದ ಲಿಂಗಾಯತ ಧರ್ಮಭೂಮಿಯಾಗಿದೆ. ಅದಕ್ಕಾಗಿ ಬಸವಕಲ್ಯಾಣದಲ್ಲಿ ನಡೆಯುವ ಮೊಟ್ಟ ಮೊದಲ ರಾಷ್ಟ್ರೀಯ ಲಿಂಗಾಯತ ಮಹಾ ಅಧಿವೇಶನ ಯಶಸ್ವಿಗೊಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ನಾವು ಶರಣರ ನಾಡಿನಲ್ಲಿ ಜನ್ಮತಾಳಿ ಬದುಕುತ್ತಿರುವುದು ಅಹೋಭಾಗ್ಯ. ಶರಣರು ತ್ಯಾಗ, ಬಲಿದಾನ ಮಾಡಿ ನಮಗೆ ವಚನ ಸಾಹಿತ್ಯವನ್ನು ನೀಡಿದ್ದಾರೆ. ಹೊಸ ಧರ್ಮವನ್ನು ಕೊಟ್ಟಿದ್ದಾರೆ. ಲಿಂಗಾಯತ ಒಂದು ಸ್ವತಂತ್ರ ಧರ್ಮವಾಗಿದೆ. ಆದರೂ ಅದಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ಪಡೆಯಲು ನಾವು ಇಂದಿಗೂ ಹೋರಾಡುತ್ತಿದ್ದೇವೆ. ಈ ಹೋರಾಟದ ಮುಂದಿನ ಭಾಗವೇ ಲಿಂಗಾಯತ ಅಧಿವೇಶನವಾಗಿದೆ. ಅದರಲ್ಲಿ ಲಿಂಗಾಯತ ಸಮಾಜದ ಕುರಿತು ಸಮಗ್ರವಾದ ಚಿಂತನೆ, ಮಂಥನೆ ನಡೆಯಲಿದೆ. ಆ ದಿಶೆಯಲ್ಲಿ ನಾವು ಶರಣರ ಋಣ ತೀರಿಸಬೇಕಾದರೆ ಈ ಅಧಿವೇಶನ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

Contact Your\'s Advertisement; 9902492681

ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರ ನೇತೃತ್ವ ವಹಿಸಿ, ಲಿಂಗಾಯತ ಅಧಿವೇಶನ ನಮ್ಮೆಲ್ಲರ ಅಸ್ಮೀಯತೆಯ ಪ್ರತೀಕವಾಗಿದೆ. ನಮ್ಮ ಸ್ವತಂತ್ರ ಅಸ್ತಿತ್ವವನ್ನು ತೋರಿಸಿಕೊಡಬೇಕಾದರೆ ಈ ಅಧಿವೇಶನ ಯಶಸ್ವಿಯಾಗಬೇಕು. ಅಧಿವೇಶನಕ್ಕೆ ನಾಡಿನ ಹಾಗೂ ಹೊರ ನಾಡಿನ ಸಾವಿರಾರು ಸಮಾಜ ಬಾಂಧವರು ಆಗಮಿಸಲಿದ್ದಾರೆ. ಸುಮಾರು 200 ಕ್ಕೂ ಅಧಿಕ ಮಠಾಧೀಶರು ಭಾಗವಹಿಸಲಿದ್ದಾರೆ. ಅದಕ್ಕಾಗಿ ನಮ್ಮ ಜಿಲ್ಲೆಯಲ್ಲಿ ಇಂತಹ ಒಂದು ಐತಿಹಾಸಿಕ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಾವು ಎಲ್ಲ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಎರಡು ದಿನದ ಅಧಿವೇಶನ ಅರ್ಥಪೂರ್ಣವಾಗಿ ಯಶಸ್ವಿಗೊಳಿಸಬೇಕೆಂದು ನುಡಿದರು.

ಸಮಾರಂಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಬೀದರ ಜಿಲ್ಲಾ ಘಟಕದ ಅಧ್ಯಕ್ಷರಾದ ಬಸವರಾಜ ಧನ್ನೂರು ಅವರು ಅಧಿವೇಶನದ ಧ್ಯೇಯ ಉದ್ದೇಶಗಳನ್ನು ಹಾಗೂ ರೂಪುರೇಷಗಳನ್ನು ಸವಿಸ್ತಾರವಾಗಿ ನಿರೂಪಿಸಿದರು. ಜಾಗತಿಕ ಲಿಂಗಾಯತ ಮಹಾಸಭೆಯ ಭಾಲ್ಕಿ ತಾಲೂಕಾ ಘಟಕದ ಅಧ್ಯಕ್ಷರನ್ನಾಗಿ ಶರಣ ಬಸವರಾಜ ಮರೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಿದ್ರಾಮಪ್ಪ ವಂಕೆ, ಸುಭಾಷ ಕಾರಾಮುಂಗೆ, ಚನ್ನಬಸವ ಬಳತೆ, ಶಶಿಧರ ಕೋಸಂಬೆ, ಮಲ್ಲಿಕಾರ್ಜುನ ಮಣಗಿರೆ, ಸಂಗಮೇಶ ವಾಲೆ, ಮಲ್ಲಮ್ಮ ಆರ್.ಪಾಟೀಲ, ಮಹಾನಂದಾ ದೇಶಮುಖ, ಸಂತೋಷದ ಹಡಪದ, ಓಂಪ್ರಕಾಶ ರೊಟ್ಟಿ, ಶ್ರೀಕಾಂತ ಭೂರಾಳೆ, ನಾಗಶೆಟ್ಟಿ ಚೋಳಾ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು. ವೀರಣ್ಣ ಕುಂಬಾರ ಸಂಚಾಲನೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here