ಭಗವದ್ಗೀತೆ ಆಧರಿತ ಶಿಕ್ಷಣ ಪರೀಕ್ಷೆ; ಮಕ್ಕಳಿಗೆ ಪ್ರಮಾಣ ಪತ್ರ ಪ್ರಶಸ್ತಿ ವಿತರಣೆ

0
10

ಕಲಬುರಗಿ: ನಗರದ ರೋಟರಿ ಕ್ಲಬ್ ಸಭಾಗಂಣದಲ್ಲಿ ಇಸ್ಕಾನ್ ವತಿಯಿಂದ  ಜಿಲ್ಲೆಯಲ್ಲಿ ಭಗವದ್ಗೀತೆ ಆಧರಿತ ಮೌಲ್ಯ ಶಿಕ್ಷಣ ಪರೀಕ್ಷೆ ಆಯೋಜಿಸಲಾಗಿತ್ತು. ನಗರದ ಪ್ರಸಿದ್ಧ ಶಾಲೆಗಳಾದ ಎಸ್‍ವಿಪಿಎಂ ಶಾಲೆ, ಚಂದ್ರಕಾಂತ ಪಾಟೀಲ್ ಮೆಮೋರಿಯಲ್ ಶಾಲೆ ಹಾಗೂ ಎಸಿಟಿ ಎನ್‍ವಿ ಶಾಲೆಗಳಿಂದ ಮಕ್ಕಳು ಭಗವದ್ಗೀತೆ ಪ್ರತಿಯೋಗಿತೆಯಲ್ಲಿ ಭಾಗವಹಿಸಿದ್ದರು. ಪ್ರತಿವರ್ಷ ಗೀತಾ ಜಯಂತಿಯ ಪ್ರಯುಕ್ತ ಇಸ್ಕಾನ್ ಭಾರತದ ಪ್ರತಿಯೊಂದು ನಗರದಲ್ಲಿ ಭಗವದ್ಗೀತೆ ಪ್ರತಿಯೋಗಿತೆಯನ್ನು ಹಮ್ಮಿಕೊಳ್ಳುತ್ತದೆ. ಕಲಬುರಗಿ ನಗರದಲ್ಲಿ ಕೂಡ ಪ್ರಥಮಬಾರಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು 200 ಮಕ್ಕಳು ಪ್ರತಿಯೋಗಿತೆಯಲ್ಲಿ ಭಾಗವಹಿಸಿ ಪರೀಕ್ಷೆಯನ್ನು ಬರೆದಿದ್ದಾರೆ.

ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಇಸ್ಕಾನ್ ಕಾರ್ಯದರ್ಶಿಗಳಾದ  ಸುವರ್ಣ ಗೌರಹರಿ ದಾಸರು, ಉದ್ಧವಾನಂದ ದಾಸರು, ಎನ್‍ಪಿಎಸ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಕಿರಣಕುಮಾರ ಕುಲಕರ್ಣಿ, ರೋಟರಿ ಕ್ಲಬ್ ಗುಲ್ಬರ್ಗ ಸೌತ್ ಅಧ್ಯಕ್ಷ ಶಿವರಾಜ ಇಂಗಿನಶೆಟ್ಟಿ, ಡಾ. ಶಿವಾನಂದ ವಿವೇಕಿ, ಪ್ರಮೋದ ಸಿಂಗ್ ಇವರು ಪ್ರಮಾಣ ಪತ್ರ ಹಾಗೂ ಪ್ರಶಸ್ತಿಗಳು ವಿತರಿಸಿದರು.

Contact Your\'s Advertisement; 9902492681

ಎನ್‍ಪಿಎಸ್ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಕಿರಣಕುಮಾರ ಕುಲಕರ್ಣಿ ಅವರು ಮಾತನಾಡಿ  ಆಧುನಿಕ ಜಗತ್ತಿನಲ್ಲಿ ಮಕ್ಕಳು ಮೊಬೈಲ್ ಬಳಕೆಯಿಂದ ತುಂಬಾ ವಿಚಲಿತಗೊಳ್ಳುತ್ತಿದ್ದಾರೆಂದು ಹೇಳಿದರು. ಸತ್ಯಹರಿಶ್ಚಂದ್ರ ಅಂತಹ ಮಹಾರಾಜರ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಬೇಕು, ಪುರಾಣ ಶಾಸ್ತ್ರದಲ್ಲಿ ಇರುವಂತಹ ರಾಜರ ಆದರ್ಶವನ್ನು ಮಕ್ಕಳಿಗೆ ತಿಳಿಸಬೇಕು ಎಂದು ಹೇಳಿದರು.

ಇಸ್ಕಾನ್ ಕಾರ್ಯದರ್ಶಿಗಳಾದ  ಸುವರ್ಣ ಗೌರಹರಿ ದಾಸರು ಮಾತನಾಡಿ ಮುಂದಿನ ವರ್ಷಗಳಲ್ಲಿ ಸಾವಿರಾರು ಮಕ್ಕಳು ಭಗವದ್ಗೀತಾ ಪರೀಕ್ಷೆಯಲ್ಲಿ ಭಾಗವಸಿಸಬೇಕು, ಇಸ್ಕಾನ್ ವತಿಯಿಂದ ಎಪ್ರಿಲ್ ತಿಂಗಳಲ್ಲಿ ಒಂದು ಸಮ್ಮರ್ ಕ್ಯಾಂಪ್ ಕೂಡ ಆಯೋಜಿಸಲಾಗುತ್ತದೆ. ಶಾಲಾ  ಮಕ್ಕಳು ಇದರ ಲಾಭವನ್ನು ಪಡೆಯಬಹುದು. ಎಂದರು. ಈ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೆÇೀಷಕರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here