ವಕೀಲರ ಸಂರಕ್ಷಣಾ ಕಾಯ್ದೆಯ ಅನಿವಾರ್ಯತೆ; ಯಾರಿಗೆ ?

0
108

ಸಾಮಾನ್ಯವಾಗಿ ಯಾವುದೇ ಕಾನೂನುಗಳು ಬೇಕಾಗುವುದು ! ಯಾರು ದುರ್ಬಲರೋ, ಯಾರು ಸತ್ಯ ಹಾಗೂ ನ್ಯಾಯವನ್ನು ಒದಗಿಸುವ ಸಲುವಾಗಿ ಸದಾ ಧ್ವನಿ ಎತ್ತುತ್ತಿರುತ್ತಾರೋ, ಯಾರಿಗೆ ಹೋರಾಟದ ಹಾದಿಯಲ್ಲಿ ದಬ್ಬಾಳಿಕೆ, ದೌರ್ಜನ್ಯ ಎದುರಿಸಬೇಕಾಗಿ ಬರಬಹುದೋ, ಯಾರು ಕಾನೂನನ್ನು ಕೈಗೆತ್ತಿಕೊಳ್ಳದೇ ಕಾನೂನಿನ ಚೌಕಟ್ಟಿನಲ್ಲೇ ಹೋರಾಟ ಮಾಡಬಯಸುವರೋ, ಯಾರು ಕಾನೂನಿನ ಚೌಕಟ್ಟಿನಲ್ಲೇ ದುರ್ಬಲರ, ದಮನಿತರ, ಹಿಂದುಳಿದ ವರ ಧ್ವನಿಯಾಗಬೇಕಾಗ ಬಹುದೋ ಅಂತಹವರಿಗೆಲ್ಲಾ
ಕಾನೂನಿನ ರಕ್ಷಣೆ ಬೇಕಾಗಿದೆ!!

ಪ್ರಾಣಿಗಳ ರಕ್ಷಣಾ ಕಾಯ್ದೆ, ಸರಕಾರಿ ನೌಕರರಿಗೆ ರಕ್ಷಣಾ, ವೈದ್ಯರಿಗೆ ಸಂರಕ್ಷಣಾ ಕಾಯ್ದೆ ಇದೆ, ನ್ಯಾಯಾಧೀಶರ ರಷ್ಟೇ ಜವಾಬ್ದಾರಿ, ಘನತೆ ಉಳ್ಳವರು ರಕ್ಷಣಾ ಕಾಯ್ದೆ ಇದೆ ಆದರೆ ವಕೀಲರು ಕೂಡಾ ಸಮಾನ ಎನ್ನುವ ನಿಲುವು ವಕೀಲರಿಗೇಕಿಲ್ಲ, ಸರ್ಕಾರ ಹಾಗೂ ನ್ಯಾಯಮೂರ್ತಿ ಗಳು ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.

Contact Your\'s Advertisement; 9902492681

ವಕೀಲರು ನಮ್ಮ ವ್ಯವಸ್ಥೆಯ ಒಂದು ಭಾಗ! ಪಕ್ಷಗಳ, ಸರ್ಕಾರದ ವಿವಿಧ ಇಲಾಖೆಗಳ ಸಂಘಟನೆಗಳ ಮಾರ್ಗದರ್ಶಕರಾಗಿ ಅವಿಭಾಜ್ಯ ಅಂಗವಾಗಿ ವಕೀಲರಿದ್ದಾರೆ! ಪರಿಣಿತ ವಕೀಲರ ಸಹಾಯ ಸಹಕಾರ ವಿಲ್ಲದೆ ಯುವುದೇ ಕಾನೂನು ಕಾಯ್ದೆ ರೂಪಿಸಲು ಸಾಧ್ಯವೇ,
ಆದರೂ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗುವಲ್ಲಿ ಮೀನಾ ಮೇಷ ಎಣಿಸುತ್ತಿರುವುದಾದರೂ ಏಕೆ??

ಸಾಮಾನ್ಯವಾಗಿ ಯಾವುದೇ ಪಕ್ಷಗಳ, ಸರ್ಕಾರದ ಮೊದಲ ಸಾಲಿನ ಫಲಾನುಭವಿಗಳು ಯಾರಾಗಿರುತ್ತಾರೆ? ಅಂದರೆ ಹುದ್ದೆಗಳನ್ನು ಜವಾಬ್ದಾರಿಗಳನ್ನು ಯಾರು ಅಲಂಕರಿಸಿರುತ್ತಾರೆ?? ಅವರ ಆರ್ಥಿಕ ಪರಿಸ್ಥಿತಿಗಳೇನು? ಈ ಎಲ್ಲಾ ಅಂಶಗಳು ನಮ್ಮ ಹೋರಾಟವನ್ನು ನಿರ್ಧರಿಸುತ್ತಿವೆ.

ಹಾಗೆಯೇ ಯೋಚಿಸಿ ಮೊದಲ ಸಾಲಿನ ಯಾವ ಮುಖಂಡರಿಗೆ ಸಂಘರ್ಷ ಏರ್ಪಡುತ್ತದೆ? ನಮ್ಮ ವೃತ್ತಿಯ ಲೋಪದೋಷಗಳನ್ನು ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು! ಹಾಗಂತ ಎಲ್ಲರನ್ನೂ ಒಂದೇ ನ್ಯಾಯದ ತಕ್ಕಡಿಯಲ್ಲಿ ತೂಗುವಂತಿಲ್ಲ. ಸದಾ ಸಂಘರ್ಷ ಏರ್ಪಡುವುದು ಯಾರು ದಬ್ಬಾಳಿಕೆ, ದೌರ್ಜನ್ಯಗಳ ವಿರುದ್ಧ ಅನ್ಯಾಯಕ್ಕೊಳಗಾದ ಕಕ್ಷಿದಾರರ ಪರವಾಗಿ ಧ್ವನಿ ಎತ್ತುತ್ತಾರೋ ಅವರಿಗೆ ರಕ್ಷಣೆ ಬೇಕಾಗಿರುತ್ತದೆ.

ಈ ದಬ್ಬಾಳಿಕೆ ದೌರ್ಜನ್ಯ ಗಳು ಒಂದೋ ಪೋಲೀಸರಿಂದ ಹಾಗೂ ಪೋಲೀಸರ ನೆರವಿನಿಂದ, ಬಲಾಢ್ಯ ಅಧಿಕಾರಿಗಳಿಂದ ಅದ ಪ್ರಕರಣ ವಿಲ್ಲವೇ ? ಹಣವಂತರ ವಿರುದ್ಧ ಪೋಲೀಸರು ಕ್ರಮ ಕೈಗೊಳ್ಳುವುದಿಲ್ಲ, ರಾಜಕಾರಣಿಗಳ ಕೃಪೆಯೊಂದಿಗೆ ಪೋಲೀಸರು, ಬಲಾಢ್ಯರು, ಬಡ ಕಕ್ಷಿದಾರರ ಮೇಲೆ, ಅವರ ಪರವಾಗಿ ಧ್ವನಿ ಎತ್ತುವ ನ್ಯಾಯವಾದಿಗಳ ಮೇಲೆ ದೌರ್ಜನ್ಯ ಹೆಚ್ಚಾಗಿರುತ್ತದೆ. ಈಗ ಯೋಚಿಸಿ ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಪ್ರದೇಶದ ವಕೀಲರು, ಯುವ ವಕೀಲರು, ಪೋಲೀಸರೊಂದಿಗೆ ಹಾಗೂ ರಾಜಕಾರಣಿಗಳೊಂದಿಗೆ ಅಂತರ ಕಾಯ್ದುಕೊಂಡ ವಕೀಲರು ದಬ್ಬಾಳಿಕೆ ಎದುರಿಸಬೇಕಾಗುತ್ತದೆ.

ನಮ್ಮ ಹೋರಾಟದ ನೇತೃತ್ವ ವಹಿಸಿದ ಮುಖಂಡರ ಆರ್ಥಿಕ ಸ್ಥಿತಿಗತಿಗಳೇನು? ಹೋರಾಟದಲ್ಲಿ ಪಾಲ್ಗೊಳ್ಳುವ ವಕೀಲರ ವಯೋಮಾನವೇನು? ಯಾವ ವಯೋಮಾನದ ವಕೀಲರ ಸಂಖ್ಯೆ ಹೆಚ್ಚಿದೆ?? ನಮ್ಮ ನಮ್ಮ ಸಂಘಗಳಲ್ಲೇ ಎಲ್ಲಾ ವಕೀಲರು ಹೋರಾಟದಲ್ಲಿ ಭಾಗವಹಿಸುತ್ತಿದ್ದಾರಾ? ಏಕೆ ಭಾಗವಹಿಸುವುದಿಲ್ಲ?? ಆರ್ಥಿಕವಾಗಿ ಸುಭದ್ರವಾದ ವಕೀಲರಿಗೆ ಯಾವುದರ ಅವಶ್ಯಕತೆ ಇದೆ? ಉದಾಹರಣೆಗೆ ನಮ್ಮ ನಮ್ಮ ಸಂಘಗಳ ಚುನಾವಣೆಯಲ್ಲಿ ಪದಾಧಿಕಾರಿಗಳ ಆಯ್ಕೆಯ ಮಾನದಂಡವೇನು? ಹೀಗಿರುವಾಗ ರಾಜ್ಯ ವಕೀಲರ ಪರಿಷತ್ ನಲ್ಲಿ ಆಯ್ಕೆಯಾದ ಅದೆಷ್ಟು ಜನ ಸದಸ್ಯರು Practicing advocates ಇದ್ದಾರೆ? ಬಡ ಮಧ್ಯಮ ವರ್ಗದ, ಹಾಗೂ ಹೋರಾಟದ ಹಿನ್ನೆಲೆಯ ಅದೆಷ್ಟು ಜನ ವಕೀಲರು ಸದಸ್ಯರಾಗಿದ್ದಾರೆ?.

ನಮ್ಮ ಪ್ರತಿನಿಧಿಗಳು ಪಕ್ಷ, ಜಾತಿ ಹಣಕಾಸಿನ ಆಧಾರದ ಮೇಲೆ ಆಯ್ಕೆಯಾಗುತ್ತಿರುವಾಗ ಇವರಿಗೆ ನಮ್ಮ ಅನಿವಾರ್ಯತೆಗಳು, ಅವಶ್ಯಕತೆಗಳು ಅರ್ಥವಾಗುತ್ತವೆಯೇ?? ಇನ್ನೂ ಯಾವ ಪಕ್ಷ, ಯಾವುದೇ ರಾಜಕಾರಣಿ ಪರಿಪೂರ್ಣವಾಗಿ ಅಲ್ಲದಿದ್ದರೂ ಸಾಮಾನ್ಯವಾಗಿ ಭ್ರಷ್ಟನಾಗಿದ್ದಾನೆ. ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಿದ್ದೇ ಆದಲ್ಲಿ ಅದರ ನೇರ ಪರಿಣಾಮ ಭ್ರಷ್ಟ ರಾಜಕಾರಣಿಗಳು, ಅಧಿಕಾರಿಗಳು, ಹಾಗೂ ಪೋಲೀಸರು ಎದುರಿಸಬೇಕಾಗುತ್ತದೆ.

ಆದ್ದರಿಂದ ಪಕ್ಷಗಳಲ್ಲಿ, ರಾಜಕಾರಣಿಗಳ ವಲಯದಲ್ಲಿ, ರಾಜಕಾರಣಿಗಳ ಮೂಲಕ ಪೋಲೀಸರೊಂದಿಗೆ ಗುರುತಿಸಿಕೊಂಡ ವಕೀಲರ ಮೂಲಕ ಯಾವುದೇ ಕಾರಣಕ್ಕೂ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳುತ್ತಿದ್ದಾರೆ. ಹಾಗೂ ಇವರಿಗೂ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಬೇಕಾಗಿಲ್ಲ. ವಕೀಲರ ಸಂರಕ್ಷಣಾ ಕಾಯ್ದೆಯ ಬಗ್ಗೆ ಧ್ವನಿ ಎತ್ತಿದರೆ ತಮ್ಮ ಕೃಪಾಪೋಷಿತರು ಸಿಟ್ಟಾಗುತ್ತಾರೆ.

ತಮ್ಮ ತಮ್ಮ ವ್ಯವಹಾರ ಹಾಗೂ ರಾಜಕೀಯ ಭವಿಷ್ಯ ಹಾಳಾಗುತ್ತದೆ. ಆದ್ದರಿಂದ ಇಂತಹವರು ಯಾವಾಗಲೂ ಹೋರಾಟಗಳನ್ನು ಬ್ಯಾಲೆನ್ಸ್ ಮಾಡುತ್ತಾರೆ. ಈಗ ಆಗುತ್ತಿರುವುದೂ ಇದೇ. ಆದ್ದರಿಂದ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಬೇಕಾದರೆ ರಾಜ್ಯದಲ್ಲಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬರಲೇಬೇಕು. ಹೋರಾಟದ ಅವಶ್ಯಕತೆ ಇರುವವರು ಹೋರಾಟದಲ್ಲಿ ಭಾಗವಹಿಸಿಯೇತೀರುತ್ತಾರೆ!!
ಇಲ್ಲದಿದ್ದರೆ ರಾಜ್ಯ ವಕೀಲರ ಪರಿಷತ್ತು ಕರೆ ನೀಡುವವರೆಗೂ ಅವರತ್ತ ನೋಡುತ್ತಲೇ ಇರಬೇಕಾಗುತ್ತದೆ. ಇಚ್ಛಾಶಕ್ತಿ ಇಲ್ಲದ ಹೋರಾಟಗಳು ಯಶಸ್ವಿಯಾಗುತ್ತವೆಯೇ ಯೋಚಿಸಿ.

  • ಜೇನವೆರಿ ವಿನೋದ ಕುಮಾರ ಎಸ್.
    ನ್ಯಾಯವಾದಿಗಳು, ಬ್ರಹ್ಮ ಪೂರ್, ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here