ಕಲಬುರಗಿ: ನಗರದ ಜಿಲ್ಲಾನ್ಯಾಯಲಯ ವೃತ್ತ ಕೆ.ಇ.ಟಿ ರಸ್ತೆಯಲ್ಲಿ ನೂತನವಾಗಿ ಬಹುಜನ ಕಂಪ್ಯೂಟರ ಬೆರಳಚ್ಚುಗಾರರ ಹಾಗೂ ಸಣ್ಣ ಪುಟ್ಟ ಬೀದಿ ವ್ಯಾಪಾರಿಗಳ ಸಂಘವನ್ನು ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಜಯಾನಂದಯ್ಯಾ ಸ್ವಾಮಿ ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ವೆಂಕಟರಾಮ ರೆಡ್ಡಿ, ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನ್ಯಾಯವಾದಿಗಳಾದ ಸಂಗೀತಾ ಜೆ. ಸ್ವಾಮಿ, ಸಂಘದ ಗೌರವ ಅಧ್ಯಕ್ಷ ರೇವಪ್ಪ ಗಾದರೆ, ಸಂಘದ ಅಧ್ಯಕ್ಷ ದಿಲಿಪ ಕುಮಾರ ಕಿರಸಾವಳಗಿ, ಉಪಾಧ್ಯಕ್ಷರಾದ ಅಶ್ರಫ ಉನ್ನಿಸಾ ಬೇಗಂ, ಕಾರ್ಯದರ್ಶಿ ರಾಹುಲ ಎಸ್. ತುರಂಗ, ಸಹಕಾರ್ಯದರ್ಶಿ ನಿತ್ಯಾನಂದ ಕಟ್ಟಿ, ಖಜಾಂಚಿ ಕುಮಾರಿ ಜಗದೇವಿ ಜಮಾದಾರ, ಸಂಘದ ಸದಸ್ಯರಾದ ಪ್ರಭಾವತಿ, ದಶರಥ, ಶರಣಪ್ಪ, ಖಾಜಾ, ಪ್ರಭುಲಿಂಗ, ಶ್ರೀಧರ, ವೆಂಕಟೇಶ್ವರರಾವ, ಸತೀಶಕುಮಾರ, ಉದಯಕುಮಾರ, ಶ್ರೀಶೈಲ, ಸುದರ್ಶನ ಇದ್ದರು.