ಕಲಬುರಗಿ: ಮಹಾಶಿವರಾತ್ರಿಯಂದು ಆಳಂದ ಪಟ್ಟಣದ ಲಾಡ್ಲೆ ಮಶಾಕ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಸಲ್ಲಿಸುವ ಕುರಿತು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರು ಅಧಿಕಾರಿ ಹಾಗೂ ಧಾರ್ಮಿಕ ಮುಖಂಡರೊಂದಿಗೆ ಶಾಂತಿ ಸಮಿತಿ ಸಭೆ ನಡೆಸಿದರು.
ಮಂಗಳವಾರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಫೆಬ್ರುವರಿ 18 ರಂದು ಲಾಡ್ಲೆ ಮಶಾಕ ದರ್ಗಾದಲ್ಲಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಧಾರ್ಮಿಕ ಕಾರ್ಯಕ್ರಮ ಆಚರಣೆ ಮಾಡಬಹುದು. ಒಟ್ಟು ಒಬ್ಬ ಧರ್ಮಗುರು ಸೇರಿದಂತೆ ಒಟ್ಟು 15 ಜನರು ಭಾಗವಹಿಸಲು ಅವಕಾಶ ನೀಡಲಾಗಿದೆ.
ಅದೇ ರೀತಿಯಾಗಿ ಮಹಾ ಶಿವರಾತ್ರಿಯೆಂದು ಆಳಂದ ಪಟ್ಟಣದ ಲಾಡ್ಲೇ ಮಶಾಕ ದರ್ಗಾದಲ್ಲಿ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ಮಾಡಲು ಆಂದೋಲದ ಸಿದ್ದಲಿಂಗ ಸ್ವಾಮಿಗಳು,ಸೇರಿದಂತೆ ಒಟ್ಟು 15 ಜನರಿಗೆ ಅಂದು ಮಧಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಪೂಜೆ ಸಲ್ಲಿಸಲು ವಕ್ಪ್ ಟ್ರಿಬುನಲ್ ಕೋರ್ಟ್ ಅವಕಾಶ ನೀಡಿದೆ. ಎಲ್ಲರೂ ಕೋರ್ಟ್ ಆದೇಶ ಪಾಲನೆ ಮಾಡಬೇಕೆಂದು ತಿಳಿಸಿದರು.
ಯಾವುದೇ ಅಹಿತಕರ ಘಟನೆಗಳಿಗೆ ಅಸ್ಪದ ನೀಡಬಾರದೆಂದರು. ಕೋರ್ಟ್ ಅದೇಶ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕೆಂದು ಪೆÇಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ವೇದಿಕೆ ಮೇಲೆ ಜಿಲ್ಲಾ ಪೆÇೀಲಿಸ್ ವರಿμÁ್ಠಧಿಕಾರಿ ಇಶಾ ಪಂತ್, ಹೆಚ್ಚುವರಿ ಪೆÇೀಲಿಸ್ ವರಿμÁ್ಠಧಿಕಾರಿ ಶ್ರೀನಿಧಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಸೇರಿದಂತೆ ಪೆÇೀಲಿಸ್ ಅಧಿಕಾರಿಗಳು ಲಾಡ್ಲೆ ಮಶಾಕ ದರ್ಗಾದ ಸಮಾಜ ಮುಖಂಡರು, ಹಾಗೂ ಆಳಂದ ಪಟ್ಟಣದ ಹಿಂದೂ ಸಮಾಜದ ಮುಖಂಡರು ಭಾಗವಹಿಸಿದರು.